Breaking: ಗರ್ಲ್‌ಫ್ರೆಂಡ್ ಮನೆಯವರಿಂದ ಹಣಕ್ಕಾಗಿ ಬ್ಲ್ಯಾಕ್‌ಮೇಲ್: ಯುವಕ ಸಾವು
ಕಚ್, ಜೂ. 1: ಪ್ರೀತಿಸಿದ ಯುವತಿಯನ್ನು ಯಾಮಾರಿಸಿ ಅವಳಿಂದ ಅನೇಕ ಸೌಲಭ್ಯಗಳನ್ನು ಪಡೆದು ನಂತರ ಅವಳನ್ನು ಕೈಬಿಟ್ಟಿರುವ, ಹಾಗೆಯೇ ಪ್ರೀತಿಸಿದ ಯುವಕನನ್ನು ಅವನಿಂದ ಅನೇಕ ಉಡುಗೊರೆಗಳನ್ನು ಪಡೆದು ಮನೆಯವರ ವಿರೋಧದಿಂದಲೋ ಇಲ್ಲ ಸ್ವ ಇಚ್ಚೆಯಿಂದಲೊ ಹುಡುಗಿಯರು ದೂರ ಮಾಡಿರುವ ಪ್ರಕರಣಗಳನ್ನು ನೋಡಿದ್ದೇವೆ. ಈ ಮಧ್ಯೆ ಹಣಕ್ಕಾಗಿ ಹುಡುಗಿಯ ಮನೆಯವರು ಹುಡುಗನನ್ನು ಯಾಮಾರಿಸಿರುವ ಘಟನೆ ಗುಜರಾತ್‌ನ ಕಚ್‌ನಲ್ಲಿ ನಡೆದಿದೆ.
ತಾನು ಪ್ರೀತಿಸಿದ ಗೆಳತಿಯ ಮನೆಯವರು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದರಿಂದ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ವೇಳೆ ಹಣ ಪಾವತಿಸದಿದ್ದರೆ ನಕಲಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಹೀಗಾಗಿ ದಿಗ್ವಿಜಯ್ ಸಿಂಗ್ ಪರ್ಮಾರ್ ಎಂಬಾತ ತನ್ನ ಮನೆಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡ ಘಟನೆ ಕಚ್‌ನ ಅಂಜಾರ್‌ನಲ್ಲಿ ನಡೆದಿದೆ. ತನ್ನ ಗೆಳತಿ ಮೆಹಕ್‌ನ ಕುಟುಂಬವು ಅವನಿಂದ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ ನಂತರ ಅವನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದಿಗ್ವಿಜಯ್ ಸಿಂಗ್ ರೆಕಾರ್ಡ್ ಮಾಡಿದ ಆಡಿಯೊದಲ್ಲಿ, "ಹುಡುಗಿ ಮೆಹಕ್ ಅವರ ತಾಯಿ ಮತ್ತು ಸಹೋದರರು ನನ್ನಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ನಾನು ಪಾವತಿಸದಿದ್ದರೆ ನನ್ನ ವಿರುದ್ಧ ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಅವರು ಹೇಳಿದ್ದಾರೆ. ನನ್ನ ಬಳಿ ಹಣ ಇಲ್ಲ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾನೆ.
ಈಗ ತಲೆಮರೆಸಿಕೊಂಡಿರುವ ಬಾಲಕಿಯ ಕುಟುಂಬದವರ ವಿರುದ್ಧ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications