ಸೂರತ್ನಲ್ಲಿ ವಜ್ರದ ಮಾಸ್ಕ್ ಮಾರಾಟ: 1.5 ಲಕ್ಷದಿಂದ 4 ಲಕ್ಷ ರುಪಾಯಿ
ನವದೆಹಲಿ, ಜುಲೈ 11: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಲಾಕ್ಡೌನ್ಗೆ ಹೋಲಿಸಿದರೆ ಸದ್ಯ ವ್ಯಾಪಾರ-ವಹಿವಾಟಿಗೆ ಸ್ವಲ್ಪ ಮಟ್ಟಗೆ ರಿಲೀಫ್ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಸೂರತ್ನ ಆಭರಣ ಅಂಗಡಿಯೊಂದು ಸಾಂಕ್ರಾಮಿಕ ರೋಗದ ನಡುವೆ ಮದುವೆಯಾಗಲು ಹೋಗುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ.
Recommended Video
ಸೂರತ್ನ ಆಭರಣದ ವ್ಯಾಪಾರಿ 1.5 ಲಕ್ಷದಿಂದ 4 ಲಕ್ಷದವರೆಗೆ ವಜ್ರದಿಂದ ಅಲಂಕಾರಗೊಂಡ ಮಾಸ್ಕ್ಗಳನ್ನು ಮಾರಾಟ ಮಾಡುತ್ತಿದ್ದಾನೆ..
"ಲಾಕ್ಡೌನ್ ಸಡಿಲಗೊಂಡ ಮೇಲೆ, ಮನೆಯಲ್ಲೇ ವಿವಾಹವನ್ನು ಆಗುವ ಗ್ರಾಹಕರು ನಮ್ಮ ಅಂಗಡಿಗೆ ಬಂದು ವಧು ಮತ್ತು ವರರಿಗೆ ವಿಶಿಷ್ಟ ಮಾಸ್ಕ್ಗಳನ್ನು ಕೋರಿದರು" ಎಂದು ಗುಜರಾತ್ನ ಅಂಗಡಿಯ ಮಾಲೀಕರು ಹೇಳುತ್ತಾರೆ.

''ಈ ರೀತಿಯ ಹೊಸ ಬೇಡಿಕೆಗಳು ಸೃಷ್ಟಿಯಾದ ಬಳಿಕ ಬೆಲೆಬಾಳುವ ಮಾಸ್ಕ್ ರಚಿಸಲು ನಾವು ನಮ್ಮ ವಿನ್ಯಾಸಕರನ್ನು ನಿಯೋಜಿಸಿದ್ದೇವೆ. ಇದರ ನಂತರ, ಮುಂಬರುವ ದಿನಗಳಲ್ಲಿ ಜನರಿಗೆ ಅಗತ್ಯವಿರುವಂತೆ ನಾವು ಈ ಮುಖವಾಡಗಳನ್ನು ವ್ಯಾಪಕವಾಗಿ ತಯಾರಿಸಿದ್ದೇವೆ. ಈ ಮುಖವಾಡಗಳನ್ನು ತಯಾರಿಸಲು ಶುದ್ಧ ವಜ್ರ ಮತ್ತು ಅಮೆರಿಕನ್ ವಜ್ರವನ್ನು ಚಿನ್ನದೊಂದಿಗೆ ಬಳಸಲಾಗಿದೆ'' ಎಂದು ಆಭರಣ ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ್ನ ನಿವಾಸಿ ಶಂಕರ್ ಕುರಾಡೆ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯು 2.89 ಲಕ್ಷ ಮೌಲ್ಯದ ಚಿನ್ನದಿಂದ ಮಾಡಿದ ಮಾಸ್ಕ್ಗಳನ್ನು ಪಡೆದಿದ್ದಾರೆ.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ












Click it and Unblock the Notifications