'ನಮ್ಮ ಗೆಲುವು ಪಶ್ಚಿಮ ಬಂಗಾಲದ ತನಕ ಕೇಳಿಸುವಂತೆ ಜೋರಾಗಿ ಕೂಗಿ'
ಅಹ್ಮದಾಬಾದ್(ಗುಜರಾತ್), ಮೇ 26 : ನಾನು ನಿನ್ನೆಯಿಂದ ಗೊಂದಲದಲ್ಲೇ ಇದ್ದೆ. ಈ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೋ ಬೇಡವೋ ಎಂಬ ಗೊಂದಲ ಇತ್ತು. ಒಂದು ಕಡೆ ಕರ್ತವ್ಯ, ಮತ್ತೊಂದು ಕಡೆ ಕರುಣಾ. ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು, ತಮ್ಮ ಭವಿಷ್ಯವನ್ನು ಕಳೆದುಕೊಂಡಿವೆ. ಆ ಮಕ್ಕಳ ಪೋಷಕರಿಗೆ ದೇವರು ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು ನರೇಂದ್ರ ಮೋದಿ.
ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿನ ನಂತರ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಬಿಜೆಪಿ ಕಚೇರಿಯಲ್ಲಿ ಭಾನುವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ಸೂರತ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಮಕ್ಕಳ ಬಗ್ಗೆ ದುಃಖ ವ್ಯಕ್ತಪಡಿಸಿದರು. ಈ ದಿನದ ಕಾರ್ಯಕ್ರಮಕ್ಕೆ ಬರುವ ಮನಸ್ಸಿರಲಿಲ್ಲ ಎಂಬುದು ಸಹ ಹೇಳಿಕೊಂಡರು.
ಸಂಸದೀಯ ಸಭೆಯಲ್ಲಿ 'ಮೋದಿ ಮತ್ತೊಮ್ಮೆ' ಅನುಮೋದನೆ
ಸೂರತ್ ಅಗ್ನಿ ದುರಂತದ ಮಾಹಿತಿಯನ್ನು ರಾಜ್ಯ ಸರಕಾರದಿಂದ ನಿರಂತರವಾಗಿ ಪಡೆಯುತ್ತಲೇ ಇದ್ದೆ ಎಂದು ಮೋದಿ ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ನಾನೊಂದು ವಿಡಿಯೋ ನೋಡಿದೆ. ಅದರಲ್ಲಿ ಬಂಗಾಲ ಮುಲದ ಮಹಿಳೆಯೊಬ್ಬರು ಮೋದಿ ಮೋದಿ ಎಂದು ಕೂಗುತ್ತಿದ್ದರು. ಏಕಾಗಿ ಎಂದು ಅವರನ್ನು ಕೇಳಿದರೆ, ನಾನು ಗುಜರಾತ್ ಗೆ ಭೇಟಿ ನೀಡಿದ್ದೆ. ಅಲ್ಲಿ ಅಭಿವೃದ್ಧಿ ಆಗಿರುವುದನ್ನು ನೋಡಿದ್ದೇನೆ. ಅದೇ ರೀತಿ ಬಂಗಾಲದಲ್ಲಿಯೂ ಆಗಬೇಕು ಎಂದಿದ್ದಾರೆ. ನೀವು ಯಾರಿಗೆ ಮತ ಹಾಕಿದಿರಿ ಎಂದು ಕೇಳಿದಾಗ ಆಕೆ ಏನನ್ನೂ ಹೇಳಿಲ್ಲ ಎಂದು ಮೋದಿ ಹೇಳಿದರು.
ಈ ಚುನಾವಣೆಯಲ್ಲಿ ಹಲವು ಪಂಡಿತರು ವಿಫಲರಾಗಿದ್ದಾರೆ. ಆರನೇ ಹಂತದ ಮತದಾನ ಆದ ಮೇಲೆ, ನಾವು ಮುನ್ನೂರು ಪ್ಲಸ್ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದಿದ್ದೆ. ಹಲವು ಮಂದಿ ನನ್ನನ್ನು ತಮಾಷೆ ಮಾಡಿದ್ದರು. ಚುನಾವಣೆಯಲ್ಲಿ ನಡೆದ ಇಡೀ ಮತದಾನ ಪ್ರಕ್ರಿಯೆಯಲ್ಲಿ ಸರಕಾರವನ್ನು ಬಲ ಪಡಿಸುವ ಸಲುವಾಗಿಯೇ ಜನರು ಮತ ಹಾಕಿದ್ದಾರೆ ಎಂದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತನಾಡಿ, ನಮ್ಮನ್ನು ಸ್ವಾಗತಿಸಲು ಇಲ್ಲಿಗೆ ಜನರು ಬಂದಿದ್ದಾರೆ. ಆದರೆ ಸೂರತ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದ ಇಪ್ಪತ್ತೆರಡು ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಿದೆ. ಮೃತಪಟ್ಟು ಮಕ್ಕಳು ಹಾಗೂ ಅವರ ಪೋಷಕರಿಗಾಗಿ ಆ ದೇವರನ್ನು ಪ್ರಾರ್ಥನೆ ಮಾಡೋಣ ಎಂದರು.
ಸೂರತ್ ಅಗ್ನಿ ದುರಂತ: ಮೃತ ವಿದ್ಯಾರ್ಥಿಗಳಿಗಾಗಿ ಮೋದಿ ಕಣ್ಣೀರು
ಆ ನಂತರ ಮುಂದುವರಿದು, ಗುಜರಾತ್ ನಲ್ಲಿ ಇಪ್ಪತ್ತಾರಕ್ಕೆ ಇಪ್ಪತ್ತಾರೂ ಸ್ಥಾನಗಳನ್ನು ಬಿಜೆಪಿ ಗೆದ್ದ ಮೇಲೆ ನರೇಂದ್ರ ಭಾಯ್ ಇಲ್ಲಿಗೆ ಬಂದಿದ್ದಾರೆ. ದಯವಿಟ್ಟು ಜೋರಾಗಿ ಕೂಗಿ. ಆ ಧ್ವನಿ ಪಶ್ಚಿಮ ಬಂಗಾಲದ ತನಕ ಕೇಳಬೇಕು ಎಂದು ಅಮಿತ್ ಶಾ ಹೇಳಿದರು.
ಇದಕ್ಕೂ ಮೊದಲು ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಗುಜರಾತ್ ನ ಮುಖ್ಯಮಂತ್ರಿ ವಿಜಯ್ ರುಪಾಣಿ ಅವರು ಸರ್ದಾರ್ ವಲ್ಲಭ ಭಾಯ್ ಪುತ್ಥಳಿಗೆ ಗೌರವವನ್ನು ಸಲ್ಲಿಸಿದರು