Get Updates
Get notified of breaking news, exclusive insights, and must-see stories!

ಅಳಿಯನ ಜತೆಗಿನ ಲೈಂಗಿಕ ಕ್ರಿಯೆ ವಿಡಿಯೋ ವೈರಲ್; ದೂರು ನೀಡಿದ ಅತ್ತೆ

ರಾಜ್ ಕೋಟ್ (ಗುಜರಾತ್), ಸೆಪ್ಟೆಂಬರ್ 24: ಅಳಿಯನ ಜತೆಗೆ ಕಳೆದ ಆಪ್ತ ಕ್ಷಣಗಳ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗುಜರಾತ್ ನ ಕಚ್ ನಲ್ಲಿರುವ ಭಚೌ ಪಟ್ಟಣದ 46 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ. ಕಳೆದ ಎರಡೂವರೆ ವರ್ಷಗಳಿಂದ ಅಳಿಯನ ಜತೆಗೆ ಲೈಂಗಿಕ ಸಂಬಂಧ ಇರುವುದನ್ನು ಆ ಮಹಿಳೆ ಒಪ್ಪಿಕೊಂಡಿದ್ದಾರೆ.

ಆಕೆ ಹಾಗೂ ಅಳಿಯನ ಆಪ್ತ ಕ್ಷಣಗಳ ವಿಡಿಯೋ ಬಗ್ಗೆ ಮಹಿಳೆಯ ತಂಗಿ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಮಗನ ಮೊಬೈಲ್ ಫೋನ್ ಗೆ ವಿಡಿಯೋದ ತುಣುಕು ಬಂದ ನಂತರ ಈ ಬಗ್ಗೆ ತಿಳಿಸಿದ್ದಾರೆ. ಭಚೌ ತಾಲೂಕಿನ ಹೊರವಲಯದ ಕುಂಜಿಸರ್ ನಲ್ಲಿ ಮಹಿಳೆ ಹಾಗೂ ಆಕೆ ಅಳಿಯ ಲೈಂಗಿಕ ಸಂಪರ್ಕ ನಡೆಸುವಾಗ ಆತನ ವಿಡಿಯೋ ಮಾಡಿಕೊಂಡಿದ್ದಾನೆ. ಅದೇ ಈಗ ವೈರಲ್ ಆಗಿದೆ.

ಆ ಮಹಿಳೆಗೆ ಇಬ್ಬರು ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳು. ತನ್ನ ಕಿರಿ ಮಗಳಿಗೆ ಮದುವೆ ಮಾಡಿದ ನಂತರ ಆಕೆಯ ಗಂಡನ ಜತೆಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊದಲಿಗೆ ಇವರಿಬ್ಬರು ಮೇಘ್ ಪುರ್ ಹಳ್ಳಿ ಬಳಿ ಒಂದಾಗಿದ್ದಾರೆ. ಆ ನಂತರ ಕುಂಜಿಸರ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದು, ಅದನ್ನು ಮಹಿಳೆಯ ಅಳಿಯ ಮೊಬೈಲ್ ಫೋನ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ.

Objectionable Video With Son In Law Viral; Mother In Law Registered Complaint

ತನ್ನ ಅತ್ತೆಯ ಜತೆಗಿನ ಸಂಬಂಧಕ್ಕಾಗಿಯೇ ಅಳಿಯನಾದವನು ತನ್ನ ಹಳ್ಳಿಯನ್ನು ತೊರೆದು, ಭಚೌಗೆ ಸ್ಥಳಾಂತರ ಮಾಡಿದ್ದಾನೆ.

ಇದೀಗ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡು, ವಿಡಿಯೋ ವೈರಲ್ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+