ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್ ಪಟೇಲ್ ಕಾಂಗ್ರೆಸ್ಸಿಗೆ, ಜಾಮ್ನಗರದಿಂದ ಲೋಕಸಭೆಗೆ ಸ್ಪರ್ಧೆ

|
Google Oneindia Kannada News

ನವದೆಹಲಿ, ಮಾರ್ಚ್ 07: ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ(PAAS) ಮುಖಂಡ ಹಾರ್ದಿಕ್ ಪಟೇಲ್ ಅವರು ಮಾರ್ಚ್ 12 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.

ಗುಜರಾತಿನ ಜಾಮ್ನಗರ ಲೋಕಸಭಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇತ್ತೀಚೆಗಷ್ಟೇ ಸಪ್ತಪದಿ ತುಳಿದಿದ್ದ ಹಾರ್ದಿಕ್ ಅವರ ಜೀವನದ ರಾಜಕೀಯ ಹಾದಿ ಈ ಮೂಲಕ ಅಧಿಕೃತವಾಗಿ ಆರಂಭವಾಗಲಿದೆ.

ಕಾಂಗ್ರೆಸ್ ಬೆಂಬಲಕ್ಕೆ ಹಾರ್ದಿಕ್ ಪಟೇಲ್ ರೆಡಿ... ಆದ್ರೆ ಷರತ್ತುಗಳು ಅನ್ವಯ! ಕಾಂಗ್ರೆಸ್ ಬೆಂಬಲಕ್ಕೆ ಹಾರ್ದಿಕ್ ಪಟೇಲ್ ರೆಡಿ... ಆದ್ರೆ ಷರತ್ತುಗಳು ಅನ್ವಯ!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅವರು ಮಾರ್ಚ್ 12 ರಂದು ಪಕ್ಷ ಸೇರಲಿದ್ದು, ಅವರ ಅಭಿಮಾನಿಗಗಳೂ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲಿದ್ದಾರೆ.

ರಾತ್ರೋ ರಾತ್ರಿ ನಾಯಕರಾಗಿ ಬೆಳೆದ ಹಾರ್ದಿಕ್

ರಾತ್ರೋ ರಾತ್ರಿ ನಾಯಕರಾಗಿ ಬೆಳೆದ ಹಾರ್ದಿಕ್

ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯೊಂದಿಗೆ ಅವರು ಆರಂಭಿಸಿದ ಹೋರಾಟಕ್ಕೆ ಸಾಕಷ್ಟು ಜನಬೆಂಬಲ ಸಿಕ್ಕು, ಕೆಲವೇ ದಿನಗಳಲ್ಲಿ ಅವರು ದೇಶದ ಭವಿಷ್ಯದ ನಾಯಕ ಎಂಬ ಹೊಗಳಿಕೆಗೆ ಪಾತ್ರರಾದರು. ಮೀಸಲಾತಿ ಮತ್ತು ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಕಳೆದ ಸೆಪ್ಟೆಂಬರ್ ನಲ್ಲಿ ಹಾರ್ದಿಕ್ ಪಟೇಲ್ ಹತ್ತೊಂಬತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಆಹ್ಹಾ! ಹಾರ್ದಿಕ್ ಪಟೇಲ್ ಮದ್ವೆ ಅಂತೆ, ವಧು ಯಾರಂತೆ?!ಆಹ್ಹಾ! ಹಾರ್ದಿಕ್ ಪಟೇಲ್ ಮದ್ವೆ ಅಂತೆ, ವಧು ಯಾರಂತೆ?!

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿಲ್ಲವೇಕೆ?

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿಲ್ಲವೇಕೆ?

ಹಾಗೆ ನೋಡುವುದಕ್ಕೆ ಹೋದರೆ ಹಾರ್ದಿಕ್ ಪಟೇಲ್ 2017 ರ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವನೆಯಲ್ಲೇ ಸ್ಪರ್ಧಿಸಬೇಕಿತ್ತು. ಕೇವಲ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಅವರು, ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯೋಮಿತಿಯನ್ನು ಹೊಂದಿಲ್ಲದ ಕಾರಣ ಅವರು ಚುನಾವಣೆ ಸ್ಪರ್ಧಿಸಿರಲಿಲ್ಲ.

ಲೋಕಸಭೆ ಚುನಾವಣೆಗೆ ಹಾರ್ದಿಕ್ ಪಟೇಲ್ ಸ್ಪರ್ಧೆ ಮಾಡುವುದಾಗಿ ಘೋಷಣೆಲೋಕಸಭೆ ಚುನಾವಣೆಗೆ ಹಾರ್ದಿಕ್ ಪಟೇಲ್ ಸ್ಪರ್ಧೆ ಮಾಡುವುದಾಗಿ ಘೋಷಣೆ

ಗುಜರಾತ್ ಚುನಾವಣೆ ಸಂದರ್ಭದಲ್ಲಿ ಭಿನ್ನಾಭಿಪ್ರಾಯ

ಗುಜರಾತ್ ಚುನಾವಣೆ ಸಂದರ್ಭದಲ್ಲಿ ಭಿನ್ನಾಭಿಪ್ರಾಯ

2017 ರಲ್ಲಿ ಗುಜರಾತಿನ ವಿಧಾನಸಭೆ ಚುನಾವಣೆಯ ಸಮಯದಲ್ಲಿ PAAS ಕಾಂಗ್ರೆಸ್ಸಿಗೆ ಬೆಂಬಲ ನೀಡುವುದಾಗಿ ಹೇಳಿತ್ತು. ಅದಕ್ಕೆ ಪ್ರತಿಫಲವಾಗಿ PAAS ನ ಕೆಲವು ನಾಯಕರಿಗೆ ಟಿಕೆಟ್ ನೀಡಬೇಕೆಂದು ಅದು ಕೇಳಿತ್ತು. ಆದರೆ ಮೂಲ ಕಾಂಗ್ರೆಸ್ ಕಾರ್ಯಕರ್ತರು ತ್ತು ಪಾಸ್ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಎದ್ದ ಕಾರಣ ತನ್ನ ಬೆಂಬಲವನ್ನು PAAS ವಾಪಸ್ ಪಡೆದಿತ್ತು. ಆ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು.

ಕಾಂಗ್ರೆಸ್ ಸೇರ್ಪಡೆಗೆ ಕಾರಣವೇನು?

ಕಾಂಗ್ರೆಸ್ ಸೇರ್ಪಡೆಗೆ ಕಾರಣವೇನು?

PAAS ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷವನ್ನು ಹಲವು ಬಾರಿ ಟೀಕಿಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಅಭಿಪ್ರಾಯ ಹೊಂದಿರುವವರ ಪಟ್ಟಿಯಲ್ಲಿ ಹಾರ್ದಿಕ್ ಪಟೇಲ್ ಅಗ್ರಸಾಲಿನಲ್ಲಿದ್ದಾರೆ. ಆದ್ದರಿಂದ ಎನ್ ಡಿಎ ಗೆ ಪರ್ಯಾಯವಾಗಿ ಹುಟ್ಟಿಕೊಳ್ಳಲಿರುವ ಮಹಾಘಟಬಂಧನಕ್ಕೂ ಈಗಾಗಲೇ ಹಾರ್ದಿಕ್ ತಮ್ಮ ಬೆಂಬಲ ಸೂಚಿಸಿದ್ದರು. ಇದೀಗ ಅಧಿಕೃತವಾಗಿ ಅವರು ಕಾಂಗ್ರೆಸ್ ಗೆ ಸೇರಿದ್ದು, ಕಾಂಗ್ರೆಸ್ ಗೆ ಮತ್ತಷ್ಟು ಬಲ ನೀಡಿದೆ,

English summary
PAAS leader Hardik Patel is set to join Congress on March 12 and will contest the Lok Sabha elections from Jamnagar constituency in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X