ಮೇಲ್ಜಾತಿಗೆ ಮೀಸಲಾತಿ? ಹಾರ್ದಿಕ್ ಪಟೇಲ್ ಏನಂತಾರೆ?
ಅಹ್ಮದಾಬಾದ್, ಜನವರಿ 09: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಆಂದೋಲನ ಆರಂಭಿಸಿದ್ದ ಗುಜರಾತಿನ ಸಾಮಾಜಿಕ ಕಾರ್ಯಕರ್ತ ಹಾರ್ದಿಕ್ ಪಟೇಲ್ ಕೇಂದ್ರ ಸರ್ಕಾರ ಮೇಲ್ಜಾತಿಯ ಆರ್ಥಿಕ ದುರ್ಬಲರಿಗೆ ನೀಡಿದ ಮೀಸಲಾತಿಯನ್ನು ಚುನಾವಣಾ ಗಿಮಿಕ್ ಎಂದಿದ್ದಾರೆ.
ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೇ ಲೋಕಸಭೆಯಲ್ಲೂ ಅಂಗೀಕಾರ ದೊರೆತಿದೆ. ಪಟೇಲ್ ಸಮುದಾಯವೂ ಮೇಲ್ಜಾತಿಯಲ್ಲೇ ಬರುತ್ತದಾರೂ ಕೇಂದ್ರ ಸರ್ಕಾರದ ನಿರ್ಧಾರವನ್ನು ಪಟೇಲ್ ಸ್ವಾಗತಿಸಿಲ್ಲ.
ಬದಲಾಗಿ ಕೇಂದ್ರ ಸರ್ಕಾರದ ಈ ನಿರ್ಣಯದ ಮುಂದೆ ಮೇಲ್ಜಾತಿಯ ಆರ್ಥಿ ದುರ್ಬಲರ ಬಗ್ಗೆ ಅನುಕಂಪ, ಕಾಳಜಿ ಇಲ್ಲ. ಬದಲಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಸಲುವಾಗಿ ಈ ನಿರ್ಣಯ ಕೈಗೊಂಡಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಪ್ರತಿಯೊಬ್ಬನ ಖಾತೆಗೂ 15 ಲಕ್ಷ ರೂ.ಹಾಕುತ್ತೇವೆಂದು ಆಶ್ವಾಸನೆ ನೀಡಿದಂತೇ ಈ ಮೀಸಲಾತಿಯ ಕತೆಯೂ ಆಗಲಿದೆ. ಮೀಸಲಾತಿಯನ್ನು ವಿರೋಧಿಸುತ್ತಿದ್ದ ಸರ್ಕಾರ ಈಗ್ಯಾಕೆ ಚುನಾವಣೆ ಹತ್ತಿರವಾದಾಗ ಮೀಸಲಾತಿಯ ಮೊರೆಹೋಗಿದೆ ಎಂದು ಅವರು ಪ್ರಶ್ನಿಸಿದರು.
ವಾರ್ಷಿಕವಾಗಿ 8 ಲಕ್ಷ ರೂ.ಗಿಂತಲೂ ಕಡಿಮೆ ಆದಾಯ ಹೊಂದಿರುವ ಮೇಲ್ಜಾತಿಯವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಮಹತ್ವದ ನಿರ್ಣಯವನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ತೆಗೆದುಕೊಂಡಿತ್ತು.












Click it and Unblock the Notifications