ಗುಜರಾತ್‌ ವಿದ್ಯಾರ್ಥಿಗಳು 'ಎಸ್‌ ಸಾರ್' ಅನ್ನೊಂಗಿಲ್ಲ, 'ಜೈ ಹಿಂದ್‌' ಅನ್ಬೇಕು

ಗಾಂಧಿನಗರ, ಜನವರಿ 01: ಶಾಲೆಯಲ್ಲಿ ಹಾಜರಾತಿ ಸಮಯ ಮಕ್ಕಳು 'ಎಸ್‌ ಸಾರ್' ಅನ್ನುವಂತಿಲ್ಲ ಅದರ ಬದಲಿಗೆ 'ಜೈ ಹಿಂದ್' ಎನ್ನಬೇಕು ಎಂದು ಸುತ್ತೋಲೆಯನ್ನು ಬಿಜೆಪಿ ಆಡಳಿತದ ಗುಜರಾತ್‌ನಲ್ಲಿ ಹೊರಡಿಸಲಾಗಿದೆ.

ಗುಜರಾತ್‌ನ ಎಲ್ಲ ಶಾಲೆಗಳಲ್ಲೂ ಇನ್ನು ಮುಂದೆ ವಿದ್ಯಾರ್ಥಿಗಳು ಎಸ್‌ ಸಾರ್, ಎಸ್‌ ಮೇಡಂ ಬದಲಿಗೆ, ಜೈ ಹಿಂದ್ ಅಥವಾ ಜೈ ಭಾರತ್‌ ಎಂದೇ ಹೇಳಬೇಕಂತೆ. ಹೀಗೆಂದು ಗುಜರಾತ್‌ ಸರ್ಕಾರದ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೂ ಸುತ್ತೋಲೆಯೊಂದನ್ನು ಹೊರಡಿಸಿದೆ.

ದೇಶಭಕ್ತಿ ಹೆಚ್ಚಿಸಲು ಈ ಕ್ರಮ ಕೈಗೊಂಡಿರುವುದಾಗಿ ಗುಜರಾತ್ ಶಿಕ್ಷಣ ಇಲಾಖೆ ಹೇಳಿದೆ. 'ನಾನು ವಿದ್ಯಾರ್ಥಿಯಾಗಿದ್ದಾಗ, 'ಜೈ ಹಿಂದ್, ಅಥವಾ ಜೈ ಭಾರತ್ ಹೇಳುವುದು ಕಡ್ಡಾಯವಾಗಿತ್ತು' ಎಂದು ಗುಜರಾತ್‌ ಶಿಕ್ಷಣ ಸಚಿವ ಭುಪೇಂದ್ರಸಿಂಹ ಚುಡಾಸಮಾ ಹೇಳಿದ್ದಾರೆ. ಹಾಗೂ ಸುತ್ತೋಲೆಯನ್ನು ಸಮರ್ಥಿಸಿಕೊಂಡಿದ್ದಾರೆ.

Gujarat school students should say Jai Hind instead of yes sir

ಒಬ್ಬ ವಿದ್ಯಾರ್ಥಿ 10,000 ಕ್ಕೂ ಹೆಚ್ಚು ಬಾರಿ ಎಸ್‌ ಸರ್ ಅಥವಾ ಎಸ್‌ ಮೇಡಂ ಹೇಳುತ್ತಾನೆ. ಅದರ ಬದಲಿಗೆ ಜೈ ಹಿಂದ್, ಜೈ ಭಾರತ್ ಎಂದು ಹೇಳಿದರೆ ಆತನಲ್ಲಿ ದೇಶಭಕ್ತಿ ಜಾಗೃತವಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಈ ಕ್ರಮದ ಪರ ವಿರೋಧ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+