ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಭಾರಿ ಮಳೆ: 7 ಮಂದಿ ಸಾವು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

|
Google Oneindia Kannada News

ಅಹಮದಾಬಾದ್: ಕಳೆದ 24 ಗಂಟೆಗಳಲ್ಲಿ ದಕ್ಷಿಣ ಮತ್ತು ಮಧ್ಯ ಗುಜರಾತ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಗಳು ವರದಿಯಾಗಿವೆ ಮತ್ತು ಇದರ ಪರಿಣಾಮವಾಗಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು 468 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಭಾರಿ ಮಳೆಯಿಂದಾಗಿ ಮಂಗಳವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ವಲ್ಸಾದ್ ಜಿಲ್ಲೆಯ ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ದಕ್ಷಿಣ ಗುಜರಾತ್‌ನ ಡ್ಯಾಂಗ್, ನವಸಾರಿ, ತಾಪಿ ಮತ್ತು ವಲ್ಸಾದ್ ಜಿಲ್ಲೆಗಳು ಪ್ರಭಾವಿತವಾಗಿದ್ದರೆ, ಮಧ್ಯ ಗುಜರಾತ್‌ನಲ್ಲಿ ಪಂಚಮಹಲ್, ಛೋಟಾ ಉದೇಪುರ್ ಮತ್ತು ಖೇಡಾ ಜಿಲ್ಲೆಗಳಲ್ಲಿ ಮಳೆಯಿಂದ ತೀವ್ರ ಹಾನಿ ಉಂಟಾಗಿದೆ.

ಹಾಸನದಲ್ಲಿ ಮಳೆ ಆರ್ಭಟಕ್ಕೆ ನಲುಗಿದ ಜನರು, ವರುಣನಿಂದ ಹತ್ತಾರು ಅವಾಂತರಹಾಸನದಲ್ಲಿ ಮಳೆ ಆರ್ಭಟಕ್ಕೆ ನಲುಗಿದ ಜನರು, ವರುಣನಿಂದ ಹತ್ತಾರು ಅವಾಂತರ

ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳಲ್ಲಿ ವಲ್ಸಾದ್, ಡ್ಯಾಂಗ್, ನವಸಾರಿ, ತಾಪಿ ಮತ್ತು ಸೂರತ್‌ನಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ಗೆ ಕೇಂದ್ರವು ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಪ್ರವಾಸಿಗರಿಗೆ ಸೂಚನೆ; ದೂಧ್‌ ಸಾಗರಕ್ಕೆ ಪ್ರವೇಶ ನಿಷೇಧಪ್ರವಾಸಿಗರಿಗೆ ಸೂಚನೆ; ದೂಧ್‌ ಸಾಗರಕ್ಕೆ ಪ್ರವೇಶ ನಿಷೇಧ

ಇಲ್ಲಿಯವರೆಗೂ 63 ಮಂದಿ ಸಾವು

ಇಲ್ಲಿಯವರೆಗೂ 63 ಮಂದಿ ಸಾವು

"ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ, ಜೂನ್ 1 ರಿಂದ ಗುಜರಾತ್‌ನಲ್ಲಿ ಸಿಡಿಲು, ಮುಳುಗುವಿಕೆ, ಗೋಡೆ ಕುಸಿತ ಮುಂತಾದ ಮಳೆ ಸಂಬಂಧಿತ ಘಟನೆಗಳಿಂದ ಸಾವನ್ನಪ್ಪಿದವರ ಸಂಖ್ಯೆ 63 ಕ್ಕೆ ತಲುಪಿದೆ" ಎಂದು ರಾಜ್ಯ ವಿಪತ್ತು ನಿರ್ವಹಣೆ ಸಚಿವ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಲಾ 18 ತುಕಡಿಗಳನ್ನು ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳಲ್ಲಿ ಸಹಾಯ ಮಾಡಲು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಛೋಟಾ ಉದೇಪುರ್ ಜಿಲ್ಲೆಯಲ್ಲಿ 5,278 ಜನರನ್ನು ಸುರಕ್ಷಿತ ಪ್ರದೇಶಗಳಿಗೆ, ನವಸಾರಿಯಲ್ಲಿ 2,902, ವಲ್ಸಾದ್‌ನಲ್ಲಿ 469 ಮತ್ತು ಇತರ ಜಿಲ್ಲೆಗಳಲ್ಲಿ ಪ್ರವಾಹದಿಂದ ಪೀಡಿತ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತ್ರಿವೇದಿ ಹೇಳಿದರು. ಅವರಲ್ಲಿ 3,821 ಮಂದಿ ಉಳಿದುಕೊಂಡಿದ್ದು, ಇತರರು ನೀರು ಕಡಿಮೆಯಾದ ನಂತರ ಮನೆಗೆ ಮರಳಿದ್ದಾರೆ ಎಂದು ಅವರು ಹೇಳಿದರು.

ಕಳೆದ 24 ಗಂಟೆಗಳಲ್ಲಿ ಛೋಟಾ ಉದೇಪುರದಲ್ಲಿ 327 ಮಂದಿ ಸೇರಿದಂತೆ 468 ಜನರನ್ನು ರಕ್ಷಿಸಲಾಗಿದೆ. ವಲ್ಸಾದ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಅಂಬಿಕಾ ನದಿಯ ಬಳಿಯಿಂದ 16 ಜನರನ್ನು ಸುರಕ್ಷಿತವಾಗಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ತಿಳಿಸಿದೆ.

ಛೋಟಾ ಉದೇಪುರ್ ಜಿಲ್ಲೆಯ ಉಚ್ಛ್ ಮತ್ತು ಹೆರಾನ್ ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಬೋಡೇಲಿ ಪಟ್ಟಣದಲ್ಲಿ ಹಲವು ಜನವಸತಿ ಪ್ರದೇಶಗಳಿದ್ದು, ನದಿ ನೀರು ನುಗ್ಗಿದೆ. ಸೋಮವಾರ ಅಹಮದಾಬಾದ್‌ನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಸದ್ಯದ ಪರಿಸ್ಥಿತಿಯನ್ನು ವಿಚಾರಿಸಿದ ಪ್ರಧಾನಿ ಮೋದಿ

ಸದ್ಯದ ಪರಿಸ್ಥಿತಿಯನ್ನು ವಿಚಾರಿಸಿದ ಪ್ರಧಾನಿ ಮೋದಿ

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್‌ಇಒಸಿ) ಅಧಿಕಾರಿಯ ಪ್ರಕಾರ, ಪಂಚಮಹಲ್, ಡ್ಯಾಂಗ್, ನವಸಾರಿ, ವಲ್ಸಾದ್, ತಾಪಿ ಮತ್ತು ಖೇಡಾ ಜಿಲ್ಲೆಗಳಲ್ಲೂ ಭಾರಿ ಮಳೆ ಪರಿಣಾಮ ಬೀರಿದೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿ (ಸಿಎಂಒ) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ನೆರವಿನ ಭರವಸೆ ನೀಡಿದ ಅಮಿತ್ ಶಾ

ನೆರವಿನ ಭರವಸೆ ನೀಡಿದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಕೇಂದ್ರ ಸರ್ಕಾರ ಮುಖ್ಯಮಂತ್ರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

"ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಂತಹ ಪರಿಸ್ಥಿತಿಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಮೋದಿ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಗುಜರಾತ್ ಆಡಳಿತ, ಎಸ್‌ಡಿಆರ್ ಎಫ್ ಮತ್ತು ಎನ್‌ಡಿಆರ್ ಎಫ್ ತ್ವರಿತ ಸಹಾಯವನ್ನು ತಲುಪಿಸುವಲ್ಲಿ ನಿರತವಾಗಿವೆ" ಎಂದು ಶಾ ಟ್ವೀಟ್ ಮಾಡಿದ್ದಾರೆ.

ಚಾಂದೋದ್ ಮತ್ತು ಏಕತಾ ನಗರ ವಿಭಾಗಗಳ ನಡುವಿನ ಹಳಿಗಳು ಕೊಚ್ಚಿಹೋಗಿದ್ದು, ನಾಲ್ಕು ಪ್ಯಾಸೆಂಜರ್ ರೈಲುಗಳು ಮತ್ತು ಎಕ್ಸ್‌ಪ್ರೆಸ್ ರೈಲಿನ ಮೇಲೆ ಪರಿಣಾಮ ಬೀರಿದೆ ಎಂದು ಪಶ್ಚಿಮ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Recommended Video

ಈ ಪವಾಡ ದೃಶ್ಯ ನೋಡಿದ್ಮೇಲೆ ದೇವರು ಇದ್ದಾನಾ ಇಲ್ವಾ ಎಂಬುದಕ್ಕೆ ನಿಮ್ಗೆ ಉತ್ತರ ಸಿಗುತ್ತೆ!! | *India | OneIndia

English summary
Heavy rains have been lashing parts of south and central Gujarat districts in the past 24 hours, with flood-like conditions reported in many areas and resulting in at least seven deaths, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X