ಗುಜರಾತ್ ನಲ್ಲಿ ಬಸ್ ಅಪಘಾತ; ಇಪತ್ತೊಂದು ಮಂದಿ ಸಾವು

ಅಹ್ಮದಾಬಾದ್, ಸೆಪ್ಟೆಂಬರ್ 30: ಖಾಸಗಿ ಬಸ್ ಉರುಳಿ ಸೋಮವಾರ 21 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಗುಜರಾತ್ ನ ಬನಸ್ಕಾಂತದಲ್ಲಿ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಭಾರೀ ಮಳೆಯಾಗಿ, ಬೆಟ್ಟಪ್ರದೇಶದಲ್ಲಿ ಜಾರಿಕೆ ಇದ್ದ ರಸ್ತೆಯಲ್ಲಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಈ ಘಟನೆ ಸಂಭವಿಸಿದೆ.

ಅಹ್ಮದಾಬಾದ್ ನಿಂದ ನೂರಾ ಅರವತ್ತು ಕಿಲೋಮೀಟರ್ ದೂರದಲ್ಲಿ ಇರುವ ಅಂಬಾಜಿ- ದಾಂತ ಹೆದ್ದಾರಿಯ ತ್ರಿಶೂಲಿಯಾ ಘಾಟ್ ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ರಾಜಿಯಾನ್ ಮಾಹಿತಿ ನೀಡಿದ್ದಾರೆ.

Bus Accident In Gujarat; At Least 21 People Died

ಬನಸ್ಕಾಂತದಿಂದ ಬಂದಿರುವ ಈ ವಿಧ್ವಂಸಕ ಸುದ್ದಿ ಬಂದಿದೆ. ಈ ಅಪಘಾತದಲ್ಲಿ ಜೀವ ಕಳೆದುಕೊಂಡಿರುವವರ ಬಗ್ಗೆ ವಿಪರೀತ ನೋವಿದೆ. ಈ ಸಂದರ್ಭದಲ್ಲಿ ಮೃತರ ಕುಟುಂಬದ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಸ್ಥಳೀಯ ಆಡಳಿತದಿಂದ ಸಾಧ್ಯ ಇರುವ ಎಲ್ಲ ನೆರವನ್ನು ಗಾಯಾಳುಗಳಿಗೆ ನೀಡಲಾಗುತ್ತಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಂತಾಪವನ್ನು ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+