ಗಿರ್ ಅರಣ್ಯದಲ್ಲಿ ಮೂರು ತಿಂಗಳ ಅಂತರದಲ್ಲಿ 23 ಸಿಂಹಗಳ ಸಾವು
ಅಹಮದಾಬಾದ್, ಮೇ 8: ಇಲ್ಲಿನ ಗಿರ್ ಅರಣ್ಯದಲ್ಲಿ ಮೂರು ತಿಂಗಳ ಅಂತರದಲ್ಲಿ 23 ಸಿಂಹಗಳು ಮೃತಪಟ್ಟಿವೆ.
Recommended Video
ಸರಣಿ ಸಿಂಹಗಳ ಸಾವಿಗೆ ಬೆಬಿಸಿಯಾ(ಬೆಬಿಸಿಯೋಸಿಸ್ ರೋಗ) ವೈರಸ್ ಕಾರಣ ಎಂದು ವನ್ಯಜೀವಿ ತಜ್ಞರು ಪತ್ತೆ ಹಚ್ಚಿದ್ದಾರೆ. ಇದು ಒಂದು ಮಾದರಿಯ ಜ್ವರವಾಗಿದೆ. ಸತ್ತ ಹಲವು ಸಿಂಹಗಳ ದೇಹದಲ್ಲಿ ಈ ವೈರಾಣು ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿ(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ಎನ್‍ಐವಿ) ಹೇಳಿದೆ. ಈ ಸಂಸ್ಥೆಗಳು ಸತ್ತ ಸಿಂಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದವು.
ಹಾಗೆಯೇ ಈ ಹಿಂದೆ ಕ್ಯಾನಿನ್ ಡಿಸ್ಟೆಂಪರ್ ಎಂಬ ವೈರಸ್ (ಸಿಡಿವಿ) ಪೂರ್ವ ಆಫ್ರಿಕಾದಲ್ಲಿ ಸಹ ಈ ವೈರಾಣು ವನ್ಯಜೀವಿಗಳಿಗೆ ಭಾರಿ ಹಾನಿ ಮಾಡಿತ್ತು. ಕೇವಲ ಸಿಂಹಗಳನ್ನಷ್ಟೆ ಅಲ್ಲ ಎಲ್ಲ ರೀತಿಯ ವನ್ಯಜೀವಿಗಳನ್ನು ಕಾಡುವ ಈ ವೈರಾಣು ಪೂರ್ಣ ಆಫ್ರಿಕಾದಲ್ಲಿ ಶೇ 30% ವನ್ಯಜೀವಿಗಳ ಜೀವಕ್ಕೆ ಎರವಾಗಿತ್ತು.

ಅಮೆರಿಕದಿಂದ ತಂದಿರುವ ಚುಚ್ಚುಮದ್ದನ್ನು ಕೂಡಲೇ ಗಿರ್ ಅರಣ್ಯ ಪ್ರದೇಶದ ಸಿಂಹಗಳಿಗೆ ಮತ್ತು ಅಲ್ಲಿನ ಇತರ ವನ್ಯಜೀವಿಗಳಿಗೆ ನೀಡಲಾಗಿತ್ತು .
ಗಿರ್ ಪ್ರದೇಶದಲ್ಲಿ ಸತತವಾಗಿ ಅಸುನೀಗಿದ ಸಿಂಹಗಳು ರಾಷ್ಟ್ರದ ಗಮನ ಸೆಳೆದಿದ್ದವು. ಪ್ರಾಣಿ ಪ್ರಿಯರು ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಸಿಂಹಗಳ ನಡುವೆ ಬೇಟೆ ಪ್ರದೇಶ ಹಂಚಿಕೆಗಾಗಿ ಯುದ್ಧ ನಡೆದು ಸಿಂಹಗಳು ಸಾಯುತ್ತಿವೆ ಎಂದು ಮೊದಲ ನಂಬಲಾಗಿತ್ತು. ಆದರೆ ಅದು ಸುಳ್ಳೆಂದು ಈಗ ತಿಳಿದುಬಂದಿದೆ.
ಹಾಗೆಯೇ 2018ರಲ್ಲಿ 21 ಸಿಂಹಗಳು ಇದೇ ಅರಣ್ಯದಲ್ಲಿ ಮೃತಪಟ್ಟಿದ್ದವು. ಸೋಂಕಿನಿಂದ ಬಳಲುತ್ತಿರುವ ಸಿಂಹಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 18 ಸಿಂಹಗಳಿಗೆ ಸೋಂಕು ತಗುಲಿದೆ. ಅದರಲ್ಲಿ ಆರು ಸಿಂಹಗಳು ಗುಣಮುಖವಾಗಿವೆ. ಈ ಬೆಬಿಸಿಯಾ ವೈರಸ್‌ಗಳು ನೇರವಾಗಿ ಕೆಂಪು ರಕ್ತ ಕಣಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ಸಿಂಹಗಳು ಅನೇಮಿಯಾಗೆ ತುತ್ತಾಗುತ್ತವೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications