ಅಹ್ಮದಾಬಾದ್ ಬ್ಯಾಂಕ್ ಕೇಸ್: ರಾಹುಲ್ ಗಾಂಧಿಗೆ ಜಾಮೀನು

ಅಹ್ಮದಾಬಾದ್, ಜುಲೈ 12: ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಅಹ್ಮದಾಬಾದ್ ಜಿಲ್ಲೆ ಸಹಕಾರಿ ಬ್ಯಾಂಕ್ ವೊಂದು ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತಿನ ನ್ಯಾಯಾಲಯವೊಂದು ಅವರಿಗೆ ಜಾಮೀನು ನೀಡಿದೆ.

ಅಪನಗದೀಕರಣದ ನಂತರ ಸುಮಾರು 749.59 ಕೋಟಿ ರೂ.ಗಳಷ್ಟು ಹಳೆಯ ನೋಟುಗಳನ್ನು ಈ ಬ್ಯಾಂಕ್ ಹೊಸ ಮೂಲಕ ನೋಟುಗಳಿಗೆ ಬದಲಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಅವರ ಈ ಹೇಳಿಕೆಯ ವಿರುದ್ಧ ಬ್ಯಾಂಕಿನ ಚೇರ್ ಮನ್ ಅಜಯ್ ಪಟೇಲ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಈ ಬ್ಯಾಂಕಿನ ನಿರ್ದೇಶಕರಲ್ಲೊಬ್ಬರಾಗಿರುವುದರಿಂದ ಈ ಪ್ರಕರಣ ಕುತೂಹಲ ಸೃಷ್ಟಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ರಾಹುಲ್ ಗಾಂಧಿ ಅವರು ಇಂದು ಖುದ್ದು ಕೋರ್ಟಿಗೆ ಹಾಜರಾಗಿದ್ದರು. ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.

Ahmedabad Bank defamation case: Rahul Gandhi gets bail

ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಷ್ಟೇ ಅಲ್ಲದೆ, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರ ಮೇಲೂ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+