ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2002ರ ಗುಜರಾತ್ ಅಕ್ಷರಧಾಮ ಉಗ್ರರ ದಾಳಿ ಪ್ರಕರಣದ ಆರೋಪಿ ಸೆರೆ

|
Google Oneindia Kannada News

ಅಹ್ಮದಾಬಾದ್, ನವೆಂಬರ್ 26: 2002ರಲ್ಲಿ ನಡೆದಿದ್ದ ಅಕ್ಷರಧಾಮ ಉಗ್ರಗಾಮಿಗಳ ದಾಳಿಗೆ ಸಂಬಂಧಿಸಿದಂತೆ ಕ್ರೈಂ ಬ್ರ್ಯಾಂಚ್ ಪೊಲೀಸರು ಗುಜರಾತ್ ನ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನ ಹೆಸರು ಮೊಹ್ಮದ್ ಫಾರೂಕ್ ಶೇಖ್. ಆತ ಸೌದಿ ಅರೇಬಿಯಾದ ರಿಯಾದ್ ನಿಂದ ವಿಮಾನದಲ್ಲಿ ಬಂದು, ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧಿಸಲಾಗಿದೆ.

ಇಬ್ಬರು ಶಸ್ತ್ರಸಜ್ಜಿತ ಉಗ್ರಗಾಮಿಗಳು ಗುಜರಾತ್ ನ ಗಾಂಧಿನಗರದಲ್ಲಿ ಇರುವ ಅಕ್ಷರಧಾಮ ದೇವಾಲಯದ ಮೇಲೆ 2002ನೇ ಇಸವಿಯ ಸೆಪ್ಟೆಂಬರ್ 24ರಂದು ದಾಳಿ ನಡೆಸಿದ್ದರು. ಆ ದಾಳಿ ನಡೆಸಿದ ವೇಳೆಯಲ್ಲಿ 30 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದರು. ಆ ದಾಳಿಗೂ ಮುನ್ನ ಗುಜರಾತ್ ನಲ್ಲಿ ಗೋಧ್ರಾ ದುರಂತ ಸಂಭವಿಸಿತ್ತು.

Accused in 2002 Akshardham temple attack in Gujarat arrested at Ahmedabad airport

2002ನೇ ಇಸವಿಯಲ್ಲಿ ರಿಯಾದ್ ಗೆ ಪರಾರಿ ಆಗುವ ಮುನ್ನ ಮೊಹ್ಮದ್ ಫಾರೂಕ್ ಶೇಖ್ ಜುಹಾಪುರದಲ್ಲೇ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಅಕ್ಷರಧಾಮ ದೇವಾಲಯದ ಮೇಲೆ ಉಗ್ರಗಾಮಿಗಳ ದಾಳಿಗೆ ಶೇಖ್ ಹಣಕಾಸಿನ ನೆರವು ಒದಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

English summary
Police on Monday arrested an accused in the 2002 Akshardham temple terror attack case, moments after he alighted from a flight here. Mohammed Farooq Shaikh was nabbed by the Crime Branch from Ahmedabad airport, soon after his arrival from Riyadh in Saudi Arabia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X