ಗಣಿಗಾರಿಕೆ: ನಾಲ್ಕು ಶಾಸಕರ ಬಂಧನಕ್ಕೆ ಕ್ಷಣಗಣನೆ?

ಶಿವಮೊಗ್ಗ/ಬೆಂಗಳೂರು, ಸೆ 7: ನಾಲ್ಕು ಶಾಸಕರ ಬಂಧನಕ್ಕೆ ನನ್ನ ಅನುಮತಿ ಬೇಕಿಲ್ಲ. ಒಂದು ವೇಳೆ ಸದನದ ಕಲಾಪ ನಡೆಯುತ್ತಿದ್ದರೆ ಅಥವಾ ಅವರುಗಳು ಸರಕಾರೀ ಬಂಗಲೆಯಲ್ಲಿ ಇದ್ದರೆ ನನ್ನ ಅನುಮತಿ ಅಗತ್ಯ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸ್ಪೀಕರ್ ಕಚೇರಿಗೆ ಪತ್ರ ಬರೆದು ಶಾಸಕರ ಬಂಧನಕ್ಕೆ ಅನುಮತಿ ಕೋರಿದ್ದರು.

ಸ್ಪೀಕರ್ ಕಾಗೋಡು ಈ ಹೇಳಿಕೆ ನೀಡುವ ಮೂಲಕ ನಾಲ್ಕು ಜನ ಶಾಸಕರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ.

CBI all set to arrest four Karnataka MLAs

ಬಂಧನದ ಭೀತಿಯಲ್ಲಿರುವ ಶಾಸಕರೆಂದರೆ ಹೊಸಪೇಟೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ (ಬಿಜೆಪಿ), ಕಂಪ್ಲಿ ಶಾಸಕ ಸುರೇಶ್ ಬಾಬು (BSR), ಕಾರವಾರದ ಶಾಸಕ ಸತೀಶ್ ಸೈಲ್ (ಪಕ್ಷೇತರ) ಮತ್ತು ಕೂಡ್ಲಗಿ ಶಾಸಕ ನಾಗೇಂದ್ರ ಪಕ್ಷೇತರ).

ಬೇಲೆಕೇರಿ ಅದಿರು ನಾಪತ್ತೆ ಮತ್ತು ವಿದೇಶಗಳಿಗೆ ಅಕ್ರಮವಾಗಿ ಅದಿರು ಸಾಗಾಣೆ ಮಾಡಿದ ಆರೋಪ ಈ ನಾಲ್ವರು ಶಾಸಕರ ಮೇಲಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸಿಬಿಐ ಅಧಿಕಾರಿಗಳಿಗೆ ಈ ಹಿಂದೆ ಕೂಡ ಸಹಕರಿಸಿದ್ದೆ, ಆದರೆ ನನ್ನ ಬಂಧನದ ವಿಚಾರ ನನಗೆ ತಿಳಿದಿಲ್ಲ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+