ಕಳೆದ ವಾರದ ಪ್ರಮುಖ ಸುದ್ದಿಗಳ ಸಂಗ್ರಹ

ಬೆಂಗಳೂರು, ಸೆ.7: ಆಗಸ್ಟ್ 31 ರಿಂದ ಸೆಪ್ಟೆಂಬರ್ 7ರ ತನಕ ದೇಶ ಅನೇಕ ಘಟನಾವಳಿಗಳನ್ನು ಕಂಡಿದೆ. ಪ್ರಮುಖ ಸುದ್ದಿಗಳನ್ನು ಹೆಕ್ಕಿ ಒನ್ ಇಂಡಿಯಾ ನಿಮ್ಮ ಮುಂದೆ ಚಿತ್ರಗಳಲ್ಲಿ ಸುದ್ದಿಗಳ ಹಿನ್ನೋಟ ನೀಡುತ್ತಿದೆ.

ಕಳೆದ ವಾರದ ಸುದ್ದಿಗಳ ಕಥೆ ವ್ಯಥೆಗಳಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರು ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತರಾಗಿದ್ದು, ಪುರುಷತ್ವ ಪರೀಕ್ಷೆ ಒಳಪಟ್ಟಿದ್ದು, ಜೈಲರ್ ಗೆ ಬೇಡಿಕೆ ಮೇಲೆ ಬೇಡಿಕೆ ಸಲ್ಲಿಸಿದ್ದು ದೊಡ್ಡ ಸುದ್ದಿಯಾಯಿತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಸೈಕೋ ಕಿಲ್ಲರ್ ಜೈಶಂಕರ್ ತಪ್ಪಿಸಿಕೊಂಡಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.

ಚೀನಾದಲ್ಲಿ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪೈಲಟ್ ಸಿಕ್ಕಿದ. ಆತನ ವಯಸ್ಸು ಕೇವಲ 5 ವರ್ಷ. ಶೂಟರ್ ಅಭಿನವ್ ಬಿಂದ್ರಾ ಹಾಗೂ ಒಲಿಂಪಿಕ್ಸ್ ಅಸೋಸಿಯೇಷನ್ಸ್ ನಡುವಿನ ಸಂಘರ್ಷ, ಸಂಗೀತಗಾರ ಜುಬೇನ್ ಮೆಹ್ತಾ ವಿರುದ್ಧ ಪ್ರತಿರೋಧ, ತೆಲಂಗಾಣದ ಕಿಚ್ಚು, ಗೌರಿ ಗಣೇಶ ಹಬ್ಬದ ತಯಾರಿ ಎಲ್ಲವೂ ಪ್ರಮುಖ ಸುದ್ದಿಗಳಾಗಿವೆ

ಗಣೇಶ ಹಬ್ಬಕ್ಕೆ ತಯಾರಿ

ಗಣೇಶ ಹಬ್ಬಕ್ಕೆ ತಯಾರಿ

ಆಂಧ್ರಪ್ರದೇಶದಲ್ಲಿ 4000 ಕೆಜಿ ಮಹಾ ಲಡ್ಡು ತಯಾರಿ ನಡೆದಿದ್ದು, ಗಣೇಶ ಉತ್ಸವ ಭರ್ಜರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಗಣೇಶ ಹಬ್ಬದ ಸಿದ್ಧತೆ ಜೋರಾಗಿದೆ.

ಸಿಂಧು ರಕ್ಷಕ್ ಹುತಾತ್ಮರಿಗೆ ನಮನ

ಸಿಂಧು ರಕ್ಷಕ್ ಹುತಾತ್ಮರಿಗೆ ನಮನ

ಐಎನ್ ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿಯಲ್ಲಿ ಸಾವನ್ನಪ್ಪಿದ್ದ ಯೋಧರಿಗೆ ನಮನ

ಬಿಸಿಯೂಟ ಬಿಸಿ

ಬಿಸಿಯೂಟ ಬಿಸಿ

ಮಧ್ಯಾಹ್ನದ ಬಿಸಿಯೂಟ ತಿಂದು 43 ವಿದ್ಯಾರ್ಥಿಗಳು ಗಂಜಾ ಜಿಲ್ಲೆಯ ಆಸ್ಕಾ ಎಂಬಲ್ಲಿ ಅಸ್ವಸ್ಥರಾದ ಘಟನೆ ನಡೆದಿದೆ. ಬಿಹಾರದ ದುರ್ಘಟನೆಯ ಕಹಿಯನ್ನು ನೆನಪಿಸುತ್ತಿದೆ.

ಅಸಾರಾಮ್ ಬಾಪು

ಅಸಾರಾಮ್ ಬಾಪು

ಕೇಂದ್ರ ಸಚಿವಾಲಯ ಅಸಾರಾಮ್ ಬಾಪು ಅವರಿಂದ ಸಂತ ಪದವಿ ಕಿತ್ತುಕೊಂಡಿದೆ. ಬಾಪು ವಿರುದ್ಧ ದಿನಕ್ಕೊಂದು ಕೇಸು ದಾಖಲಾಗುತ್ತಿದೆ. ಪುರುಷತ್ವ ಪರೀಕ್ಷೆಯಲ್ಲಿ ಬಾಪು ಪಾಸ್ ಆಗಿದ್ದು ದೊಡ್ಡ ಸುದ್ದಿಯಾಗಿತ್ತು.

ಆಸ್ಪತ್ರೆಯಿಂದ ಡಿಸ್ ಚಾರ್ಜ್

ಆಸ್ಪತ್ರೆಯಿಂದ ಡಿಸ್ ಚಾರ್ಜ್

ವರ್ಣಬೇಧ ನೀತಿ ವಿರುದ್ಧ ಹೋರಾಟ ನಡೆಸಿದ ಧೀಮಂತ ನಾಯಕ ನೆಲ್ಸನ್ ಮಂಡೇಲ ಅವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಚ್ ಮಾಡಲಾಗಿದೆ. ಆದರೆ, ದೇಹಾರೋಗ್ಯ ಇನ್ನೂ ಸುಧಾರಿಸಬೇಕಿದೆ.

ಸೋನಿಯಾ ಆಮದು ನಾಯಕಿ

ಸೋನಿಯಾ ಆಮದು ನಾಯಕಿ

ಸೋನಿಯಾ ಗಾಂಧಿ ಅವರು ಆಮದು ನಾಯಕಿ ಅವರನ್ನು ಇಟಲಿ ಕಳಿಸಿ ಎಂದ ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿವಾದಕ್ಕೆ ನಾಂದಿ ಹಾಡಿದ್ದರು.

ಅಸಾರಾಮ್ ವಿವಾದ

ಅಸಾರಾಮ್ ವಿವಾದ

ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತ ಅಸಾರಾಮ್ ಬಾಪು ಅವರು ಪುರುಷತ್ವ ಪರೀಕ್ಷೆಯಲ್ಲಿ ಪಾಸಾದ ಮೇಲೆ ಪ್ರಕರಣಕ್ಕೆ ಬಲ ಬಂದಿತು. ಈಗ ಬಾಪು ಮಗ ನಾರಾಯಣ ಸಾಯಿ ಕೂಡಾ ವಂಚನೆ, ಮಹಿಳೆಯರಿಗೆ ಕೈ ಕೊಟ್ಟ ಪ್ರಕರಣ ದಾಖಲಾಗಿದೆ. ಸಾವಿರಾರು ಕೋಟಿ ರು ಮೌಲ್ಯದ ಆಸ್ತಿಗೆ ಇಬ್ಬರು ಒಡೆಯರಾಗಿದ್ದಾರೆ.

ಜಪಾನ್ ಗೋಳು

ಜಪಾನ್ ಗೋಳು

ಸುಮಾರು 5000ಕ್ಕೂ ಅಧಿಕ ಜನರನ್ನು ಪ್ರವಾಹದ ಭೀತಿಯಿಂದ ಸ್ಥಳಾಂತರಿಸಲಾಗಿತ್ತು.

ಜೈಶಂಕರ್

ಜೈಶಂಕರ್

ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸರ ಕಣ್ತಪ್ಪಿಸಿ ಹಾರಿ ಹೋಗಿದ್ದ ಜೈಶಂಕರ್ ನನ್ನು ಬೆಂಗಳೂರು ಪೊಲೀಸರು ಹಿಡಿದಿದ್ದಾರೆ. ಆದರೆ, ದೇಶದಲ್ಲೇ ಅತ್ಯಂತ ಸುರಕ್ಷಿತ ಜೈಲು ಎನಿಸಿದ್ದ ಬೆಂಗಳೂರಿನ ಸೆಂಟ್ರಲ್ ಜೈಲು ಅಪಹಾಸ್ಯಕ್ಕೀಡಾಯಿತು.

ಮುಂಬೈ ಸರಣಿ ಅತ್ಯಾಚಾರ ಪ್ರಕರಣ

ಮುಂಬೈ ಸರಣಿ ಅತ್ಯಾಚಾರ ಪ್ರಕರಣ

ಫೋಟೊ ಜರ್ನಲಿಸ್ಟ್ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಸಣ್ಣ ವಯಸ್ಸಿನ ಪೈಲಟ್

ಸಣ್ಣ ವಯಸ್ಸಿನ ಪೈಲಟ್

100 ಕೆಜಿ ತೂಗುವ ಬಿ3 ವಿಮಾನವನ್ನು ಐದು ವರ್ಷದ ಪೋರ ಯಿಡೆ(ಡೂ ಡೂ) ಬೀಜಿಂಗ್ ವೈಲ್ಡ್ ಲೈಫ್ ಪಾರ್ಕ್ ನಲ್ಲಿ 35 ನಿಮಿಷಗಳ ಕಾಲ ಹಾರಾಟ ನಡೆಸಿ ದಾಖಲೆ ಬರೆದಿದ್ದಾನೆ.

ಮೋದಿ-ವಂಜಾರಾ

ಮೋದಿ-ವಂಜಾರಾ

ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಡಿಜಿ ವಂಝಾರಾ ಬರೆದ ಪತ್ರವನ್ನು ಸೆಕ್ಯುಲರ್ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿ ಮೋದಿ ಅಧಃಪತನ ಎಂದು ಸಾರಿದ್ದು ಸುದ್ದಿಗೆ ಗ್ರಾಸವಾಗಿತ್ತು.

ಬಿಂದ್ರಾ- ಐಒಎ ಕಿತ್ತಾಟ

ಬಿಂದ್ರಾ- ಐಒಎ ಕಿತ್ತಾಟ

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ವಿಧಿಸಿರುವ ನಿಷೇಧ ತೆರವುಗೊಳಿಸಲು ಬಿಂದ್ರಾ ಸೇರಿದಂತೆ ಒಲಿಂಪಿಯನ್ ಗಳು ಶ್ರಮಿಸುತ್ತಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಭ್ರಷ್ಟ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಮಸೂದೆಗಳ ಮಂಡನೆ

ಮಸೂದೆಗಳ ಮಂಡನೆ

ಆಹಾರ ಭದ್ರತಾ ಮಸೂದೆ, ಭೂ ಸ್ವಾದೀನ ಮಸೂದೆ ನಂತರ ಪಿಂಚಣಿ ಮಸೂದೆ ಮಂಡನೆಯಾಯಿತು. ಸಂಸತ್ತಿನಲ್ಲಿ ಕಳೆದು ಹೋಗಿರುವ ಕಲ್ಲಿದ್ದಲು ಹಗರಣ, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ತೀವ್ರ ಗದ್ದಲ ನಡೆದಿತ್ತು.

ಒಬಾಮಾ ಉವಾಚ

ಒಬಾಮಾ ಉವಾಚ

ಸಿರಿಯಾ ಮೇಲೆ ಮಿಲಿಟರಿ ದಾಳಿ ನಡೆಸಲು ಹೊಂಚು ಹಾಕಿರುವ ಅಮೆರಿಕಕ್ಕೆ ತನ್ನ ಸೆನೆಟ್ ನಲ್ಲೇ ಪೂರ್ಣ ಬೆಂಬಲ ಸಿಕ್ಕಿಲ್ಲ. ಹೀಗಾಗಿ ಸದ್ಯಕ್ಕೆ ಸಿರಿಯಾ ಬಚಾವ್.

ಮದರ್ ಥೆರೆಸಾ ನೆನಪು

ಮದರ್ ಥೆರೆಸಾ ನೆನಪು

ಮದರ್ ಥೆರೆಸಾ ಅವರ 16ನೇ ಪುಣ್ಯತಿಥಿ ಸ್ಮರಣೆ ಕಳೆದವಾರದ ವಿಶೇಷವಾಗಿತ್ತು.

ಗೋಪಾಲ್ ಕಂಡಾಗೆ ಜಾಮೀನು

ಗೋಪಾಲ್ ಕಂಡಾಗೆ ಜಾಮೀನು

ಮಾಜಿ ಗಗನ ಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹರ್ಯಾಣದ ಮಾಜಿ ಸಚಿವ, ಹಾಲಿ ಶಾಸಕ ಗೋಪಾಲ್ ಕಂಡಾಗೆ ಜಾಮೀನು ಸಿಕ್ಕಿದೆ.

ಮೋದಿ ರಾಜೀನಾಮೆಗೆ ಆಗ್ರಹ

ಮೋದಿ ರಾಜೀನಾಮೆಗೆ ಆಗ್ರಹ

ಡಿಜಿ ವಂಜಾರಾ ರಾಜೀನಾಮೆ ಪ್ರಕರಣದ ನಂತರ ನಕಲಿ ಎನ್ ಕೌಂಟರ್ ಕೇಸ್ ಮುಂದಿಟ್ಟುಕೊಂಡು ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ರಾಜೀನಾಮೆಗೆ ಕಾಂಗ್ರೆಸಿಗರು ಆಗ್ರಹಿಸಿದರು.

ಜುಬೇನ್ ಮೆಹ್ತಾ ಸಂಗೀತ ಕಾರ್ಯಕ್ರಮ

ಜುಬೇನ್ ಮೆಹ್ತಾ ಸಂಗೀತ ಕಾರ್ಯಕ್ರಮ

ಶ್ರೀನಗರದಲ್ಲಿ ಪಾರ್ಸಿ ಸಂಗೀತಗಾರ ಜುಬೇನ್ ಮೆಹ್ತಾ ಅವರ ಸಂಗೀತ ಕಾರ್ಯಕ್ರಮಕ್ಕೆ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಜುಬೇನ್ ಮೆಹ್ತಾ ಅವರಿಗೆ ಟಾಗೋರ್ ಪ್ರಶಸ್ತಿ ನೀಡುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಬೆಂಗಳೂರು ಜ್ಞಾನಭಾರತಿ ರೇಸ್ ಕೇಸ್

ಬೆಂಗಳೂರು ಜ್ಞಾನಭಾರತಿ ರೇಸ್ ಕೇಸ್

ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ 8 ಜನ ಆರೋಪಿಗಳ ಪೈಕಿ 6 ಜನರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.

ಛತ್ತೀಸ್ ಗಢದಲ್ಲಿ ಮೋದಿ ಭಾಷಣ

ಛತ್ತೀಸ್ ಗಢದಲ್ಲಿ ಮೋದಿ ಭಾಷಣ

ಪ್ರಧಾನಿ ಮನಮೋಹನ್ ಸಿಂಗ್ ಅವರು ಡಾಕ್ಟರ್ ಆಫ್ ಮನಿ ಎಂದು ಮೋದಿ ಛೇಡಿಸಿದ್ದಲ್ಲದೆ, ಭಾರತಕ್ಕೆ ಏನು ಬೇಕು ಎಂಬುದು ಯುಪಿಎಗೆ ತಿಳಿದೇ ಇಲ್ಲ ಎಂದು ಛತ್ತೀಸ್ ಗಢದಲ್ಲಿ ಮೋದಿ ಹೇಳಿದರು.

ಉತ್ತರಾಖಂಡ ದುರಂತ

ಉತ್ತರಾಖಂಡ ದುರಂತ

ಉತ್ತರಾಖಂಡ ರಾಜ್ಯದ ಪ್ರವಾಹಕ್ಕೆ ಸಿಲುಕಿ ಸತ್ತವರ ಸಂಖ್ಯೆಗೆ ಇನ್ನೂ 68 ಮಂದಿ ಸೇರ್ಪಡೆಗೊಂಡಿದ್ದು, ಎಲ್ಲಾ ಮೃತದೇಹಗಳನ್ನು ಯೋಧರು ಪತ್ತೆ ಹಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+