ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಬಳಿ VRLನಿಂದ ಪ್ರಯಾಣಿಕ ಸ್ನೇಹಿ ಹೋಟೆಲ್

By Srinath
|
Google Oneindia Kannada News

ಬೆಂಗಳೂರು, ಸೆ. 5: ಉತ್ಕೃಷ್ಟ ಸೇವೆಯಲ್ಲಿ ನಂಬಿಕೆಯಿಟ್ಟಿರುವ ವಿಜಯಾನಂದ ರೋಡ್ ಲೈನ್ಸ್ ಸಂಸ್ಥೆ (VRL) ಮತ್ತೊಂದು ಟಿಸಿಲೊಡೆದಿದೆ. ಮಾಜಿ ಸಂಸದ ವಿಜಯ್ ಸಂಕೇಶ್ವರ ಮಾಲೀಕತ್ವದ VRL ಟ್ರಾವೆಲ್ಸ್ ತನ್ನ ಪ್ರಯಾಣಿಕರಿಗಾಗಿ ಮಾರ್ಗ ಮಧ್ಯೆ ಊಟೋಪಚಾರ ಆತಿಥ್ಯ ನೀಡಲು ನಿರ್ಧರಿಸಿದ್ದು, ತುಮಕೂರು ಬಳಿ ಸುಸಜ್ಜಿತ, ಆಧುನಿಕ ಶೈಲಿಯ ಹೋಟೆಲ್ ಪ್ರಾರಂಭಿಸಿದೆ.

ಬೆಂಗಳೂರು- ಮುಂಬೈ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ತುಮಕೂರು ದಾಟಿನ ನಂತರ 16 ಕಿಮೀ ದೂರದಲ್ಲಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಚೆಕ್ ಪಾಯಿಂಟ್ ಮತ್ತು ಹೋಟೆಲ್ ಆರಂಭಿಸುವ ಮೂಲಕ ತನ್ನ ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗಿದೆ. VRL Logistics ಉಪಾಧ್ಯಕ್ಷ ಪ್ರಭು ಸಾಲಗೇರಿ ಬುಧವಾರ ಈ ಹೋಟೆಲ್ ಸೇವೆಯನ್ನು ಉದ್ಘಾಟಿಸಿದರು. ತುಮಕೂರಿನ VRL Logistics ಫ್ರಾಂಚೈಸಿ ಮಾಲೀಕ ಚನ್ನಬಸಪ್ಪ ಅವರು ಸಮಾರಂಭದಲ್ಲಿ ಹಾಜರಿದ್ದರು.

vrl-bus-passengers-friendly-hotel-at-tumkur-by-ex-mp-vijay-sankeshwar

ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಸಂಸ್ಥೆಯ ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ದೇಶದಲ್ಲೇ ವಿನೂತನವಾಗಿದ್ದು, ಖಾಸಗಿ ಬಸ್ ಸಂಸ್ಥೆಯೊಂದು ತನ್ನ ಪ್ರಯಾಣಿಕರ ಸುರಕ್ಷತೆಗೆ ಆದ್ಯ ಗಮನ ನೀಡಿರುವುದನ್ನು ಎತ್ತಿ ತೋರಿಸುತ್ತದೆ. ಈಗ ಇನ್ನೂ ಒಂದು ಮುಂದಡಿಯಿಟ್ಟು ನಮ್ಮ ಪ್ರಯಾಣಿಕರಿಗಾಗಿ ಹೋಟೆಲ್ ಆತಿಥ್ಯವನ್ನೂ ನೀಡತೊಡಗಿದ್ದೇವೆ ಎಂದು ಸಹ VRL ಸಿಇಒ ಕೆಎನ್ ಉಮೇಶ್ ತಿಳಿಸಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು (3674) ವಾಹನಗಳನ್ನು ಹೊಂದಿರುವ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವ VRL Logistics Limited ಸಂಸ್ಥೆಯನ್ನು ವಿಜಯ್ ಸಂಕೇಶ್ವರ ಅವರು 1976ರಲ್ಲಿ ಗದಗದಲ್ಲಿ ಪ್ರಾರಂಭಿಸಿದರು.

English summary
VRL bus passengers-friendly hotel at Tumkur by ex BJP MP Vijay Sankeshwar. The hotel excusively for VRL bus travellers has come up at 16th mile on NH-4 at Tumkur. NH-4 highway is between Banglore and Mumbai. VRL was founded in 1976 by Vijay Sankeshwar in Gadag, a small town in North Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X