ಓಡಾಡಬೇಡಿ ಒಂಟಿಯಾಗಿ: ಹೇಮಮಾಲಿನಿ ಕಿವಿಮಾತು

'ಹಾಗೆ ಹೊರಗೆ ಹೋದಾಗ ನಿಮಗೆ ಅಹಿತಕರವೆಸಿಸುವ ಘಟನೆಗೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರು ಒಂಟಿಯಾಗಿ ಎಲ್ಲೂ ಹೊರಗಡೆ ಹೋಗಬಾರದು ಎಂದು ತೀವ್ರ ವ್ಯಥೆಯೊಂದಿಗೆ ಹಿರಿಯಕ್ಕನಂತೆ ಹೇಮಮಾಲಿನಿ ತಾಕೀತು ಮಾಡಿದ್ದಾರೆ.
ಕಳೆದ ವಾರ ಮುಂಬೈನಲ್ಲಿ ನಡೆದ ಪತ್ರಿಕಾ ಛಾಯಾಗ್ರಾಹಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣುಮಕ್ಕಳ ತಾಯಿ, 64 ವರ್ಷದ ಹೇಮಮಾಲಿನಿ ಈ ಅಚ್ಚರಿಯ ಸಲಹೆ ನೀಡಿದ್ದಾರೆ. ಇದು ಒಂದಷ್ಟು ವಿವಾದಕ್ಕೂ ಕಾರಣಗಿದೆ. ಮಹಿಳೆಯರು ಸಮಾನತೆಗಾಗಿ ಹೋರಾಡುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಒಂಟಿಯಾಗಿ ಹೊರ ಹೋಗಬೇಡಿ ಎಂಬ ಹೇಮಾಮಾಲಿನಿ ಸಲಹೆ ಮಹಿಳಾ ಸಮಾಜವನ್ನು ಬಡಿದೆಬ್ಬಿಸಿದೆ.
ಕೃಷ್ಣ ಪರಮಾತ್ಮ ಕೂಡ ಬರಲಾರ:
ದ್ರೌಪದಿ ಅಪಾಯದಲ್ಲಿದ್ದಾಗ ಕೃಷ್ಣ ಯಾವತ್ತೂ ಆಕೆಯ ರಕ್ಷಣೆಗೆ ಬರುತ್ತಿದ್ದ. ಹಾಗಂತ ನಮ್ಮ ರಕ್ಷಣೆಗೂ ದೇವರು ಬರುತ್ತಾನೆ ಎಂದು ನಂಬಿಕೊಂಡು ಕೂರಬೇಡಿ. ಇದೀಗ ದೇವರು ಬಂದು ನಮ್ಮನ್ನು ರಕ್ಷಿಸುವಷ್ಟು ಆಧ್ಯಾತ್ಮಿಕತೆಯನ್ನು ನಾವು ಹೊಂದಿಲ್ಲದೇ ಇರುವುದರಿಂದ ಹೊರಗೆ ತೆರಳುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ತಿಳಿಯ ಹೇಳಿದ್ದಾರೆ.












Click it and Unblock the Notifications