ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡರ್ಟಿ ಪಿಕ್ಚರ್' ವೀಕ್ಷಣೆ ಸಿಬಿಐನಿಂದ ವರದಿ ಬಂದಿಲ್ಲ

By Mahesh
|
Google Oneindia Kannada News

ಬೆಂಗಳೂರು, ಆ.23: ವಿಧಾನಸೌಧದ ಕಚೇರಿಗಳಲ್ಲಿ ನೀಲಿ ಚಿತ್ರ ವೀಕ್ಷಣೆ ಕುರಿತಂತೆ ಸಿಬಿಐನಿಂದ ಯಾವುದೇ ವರದಿ ಬಂದಿಲ್ಲ. ಈ ಬಗ್ಗೆ ಸಿಬಿಐ ಅಥವಾ ಸಿಡಿಐ ನೀಡಿರುವ ವರದಿ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಮಾ ಪಚಾವೋ ಹೇಳಿದ್ದಾರೆ.

ವಿಧಾನಸೌಧದ ಕಚೇರಿಗಳಲ್ಲಿನ ಅಧಿಕಾರಿಗಳು ಕೆಲಸದ ವೇಳೆ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆ ಪ್ರಮುಖ ಪತ್ರಿಕೆಗಳು ವರದಿ ಮಾಡಿದೆ. ಈ ಬಗ್ಗೆ ಸಿಐಡಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುಪುವುದು ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಚಾವೋ ಹೇಳಿದ್ದಾರೆ.

ಸಿಎಂ ಪ್ರತಿಕ್ರಿಯೆ: ವಿಧಾನಸೌಧದಲ್ಲಿ ಅಧಿಕಾರಿಗಳು ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾರೆ ಎಂದು ಸಿಐಡಿ ಹಾಗೂ ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಬಿತ್ತರಗೊಂಡ ಮಾಧ್ಯಮ ವರದಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕೈಗೊಳ್ಳುವುವುದಾಗಿ ತಿಳಿಸಿದ್ದಾರೆ. ವಿಧಾನಸೌಧ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಅಶ್ಲೀಲ ಸರಕನ್ನು ನೋಡುತ್ತಾರೆ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಏನು ಹೇಳಿದ್ದಾರೆ ಮುಂದೆ ಓದಿ...

ಪೊಲೀಸರ ಹೇಳಿಕೆ

ಪೊಲೀಸರ ಹೇಳಿಕೆ

ಅಪರಾಥ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿ ಎನ್.ಎಸ್ ಮೇಘರಿಕ್: ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮೂಲಕ ವಿಧಾನಸೌಧ ಕಚೇರಿಗಳಲ್ಲಿನ ಕಂಪ್ಯೂಟರ್ ಗಳ ಕಾರ್ಯ ನಿರ್ವಹಣೆಯ ಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು

ಸಿಐಡಿ ಸೈಬರ್ ವಿಭಾಗದ ಎಸ್ ಪಿ ಡಿ .ರೂಪಾ: ನಮಗೆ ಸಿಬಿಐನಿಂದ ಯಾವುದೇ ವರದಿ ಬಂದಿಲ್ಲ. ಕಳೆದ ಐದು ವರ್ಷಗಳಲ್ಲಿ ಈ ರೀತಿ ಪ್ರಕರಣ ನಡೆದಿಲ್ಲ ಹಾಗೂ ಮಾಹಿತಿ ಸಿಕ್ಕಿಲ್ಲ

ಸಿಬಿಐ ಮುಂದಿನ ಕ್ರಮ ಏನು?

ಸಿಬಿಐ ಮುಂದಿನ ಕ್ರಮ ಏನು?

ಸಿಬಿಐ ಎಸ್ಪಿ ಸುಬ್ರಮಣ್ಯೇಶ್ವರರಾವ್ ಅವರು ಮಾತನಾಡಿ, ಯಾವುದೇ ತನಿಖೆ ಮಾಹಿತಿ ಸಂಗ್ರಹ ಕಾರ್ಯ ನಡೆಸಿಲ್ಲ. ಸಿಬಿಐ ಯಾವುದೇ ವರದಿಯನ್ನು ಸಿಐಡಿಗೆ ಕಳಿಸಿಲ್ಲ ಎಂದಿದ್ದಾರೆ.

ಮುಂದಿನ ಕ್ರಮವಾಗಿ ದೂರು ಬಂದರೆ ಸಿಐಡಿಗೆ ಸೂಚಿಸಲಾಗುವುದು. ಇ ಆಡಳಿತ ಜಾರಿಯಲ್ಲಿರುವುದರಿಂದ ಎಲ್ಲಾ ಕಂಪ್ಯೂಟರ್ ಮೇಲೆ ಏಕಕಾಲಕ್ಕೆ ಹಿಡಿತ ಸಿಗುತ್ತದೆ. ಸೂಕ್ತ ರೀತಿಯಲ್ಲಿ ನಿಯಂತ್ರಣ, ಕಡತಗಳನ್ನು ಡಿಲೀಟ್ ಮಾಡುವುದು ಸಾಧ್ಯವಿದೆ.

ನಿಯಂತ್ರಣ ಹೇಗೆ

ನಿಯಂತ್ರಣ ಹೇಗೆ

ಅನೇಕ ಖಾಸಗಿ ಕಂಪನಿಗಳು ಗುಪ್ತವಾಗಿ ಇಂಥ ಪ್ರವೃತ್ತಿಯನ್ನು ಪತ್ತೆಹಚ್ಚಿ ತಮ್ಮ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದುಂಟು. ಇಲ್ಲವಾದರೆ ಆ ರಗಳೆಯೇ ಬೇಡ ಎಂದು ಪೋರ್ನ್ ಸೈಟುಗಳನ್ನು filter - firewalls ಮೂಲಕ ಬ್ಲಾಕ್ ಮಾಡಬಹುದು. ಐಪಿ ಅಡ್ರೆಸ್ ಆಧಾರದ ಮೇಲೆ ಆಯಾ ಕಂಪ್ಯೂಟ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ಕಳಿಸಬಹುದು.

ಆದರೆ, ಸರಕಾರಿ ಕಚೇರಿಗಳಲ್ಲಿ ಇನ್ನೂ ಅಂತಹ ಕ್ರಮಗಳನ್ನು ಕೈಗೊಂಡಿಲ್ಲ. ಅದಕ್ಕೇ ನಮ್ಮ ಸರಕಾರಿ ಉದ್ಯೋಗಿಗಳು ಕಡಿವಾಣ ಇಲ್ಲದೆ ಏನು ಬೇಕಾದರೂ ವೀಕ್ಷಿಸುವ ಅವಕಾಶ ಪಡೆದಿದ್ದಾರೆ.

ಮಾಹಿತಿ ಸಿಕ್ಕಿದ್ದು ಹೇಗೆ

ಮಾಹಿತಿ ಸಿಕ್ಕಿದ್ದು ಹೇಗೆ

ಇತ್ತೀಚೆಗೆ ಕರ್ನಾಟಕದಲ್ಲೂ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗತೊಡಗಿದಾಗ ಸೈಬರ್ ಪರಿಣತರು ಸರಕಾರಿ ಕಚೇರಿಗಳಲ್ಲಿರುವ ಕಂಪ್ಯೂಟರುಗಳ ಮೇಲೆ ಒಂದು ಕಣ್ಣಿಟ್ಟರು. ಆಗ ಬೆತ್ತಲೆ ಜಗತ್ತು ಅನಾವರಣಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕಾನೂನು ಏನು ಹೇಳುತ್ತದೆ

ಕಾನೂನು ಏನು ಹೇಳುತ್ತದೆ

ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಖಾಸಗಿ ಕಂಪ್ಯೂಟರಿನಲ್ಲಿ ಅಶ್ಲೀಲ ಸರಕನ್ನು ಅವರವರ ಇಚ್ಛಾನುಸಾರ ನೋಡಬಹುದು. ಆದರೆ ಸಾರ್ವಜನಿಕವಾಗಿ ಅಥವಾ ಸರಕಾರಿ ಕಂಪ್ಯೂಟರುಗಳಲ್ಲಿ ಇಂಥದಕ್ಕೆ ಅವಕಾಶವೇ ಇಲ್ಲ. ಒಂದು ವೇಳೆ ಹಾಗೆ ನೋಡಿದ್ದೇ ಆದರೆ ಅದು ಶಿಕ್ಷಾರ್ಹ ಅಪರಾಧ.

ಐಟಿ ಕಾಯ್ದೆ

ಐಟಿ ಕಾಯ್ದೆ

Whoever publishes or transmits or causes to be published in electronic form any material which is lascivious or appeals to the prurient interest, or if its effect is such as to tend to deprave and corrupt persons who are likely... to read, see or hear the matter contained or embodied in it, shall be punished on first conviction with imprisonment of either description for a term which may extend to five years and with fine which may extend to Rs 1 lakh. In the event of a second or subsequent conviction, with imprisonment of either description for a term which may extend to ten years and also with fine which may extend to Rs 2 lakh.

English summary
DG & IGP Lalrokhuma Pachau said his office has not received any information about The dossier, which has been forwarded to the criminal investigation department (CID) by CBI. A secret CBI dossier is an offshoot of the monitoring internet activities in government offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X