ಅಂಬಿಗೆ ಚೆಲುವರಾಯಸ್ವಾಮಿ ನೀಡಿದ್ದರು ಟಾಂಗ್

2009ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ನ ಚೆಲುವರಾಯಸ್ವಾಮಿ, 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಪೈಕಿ, ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಅತಿ ಹೆಚ್ಚು ಮತಗಳು ಸಿಕ್ಕಿತ್ತು ಅನ್ನೋದನ್ನ ನೋಡೋಣ.

ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್?

ಮಳವಳ್ಳಿ - ಕಾಂಗ್ರೆಸ್
ಮದ್ದೂರು - ಕಾಂಗ್ರೆಸ್
ಮೇಲುಕೋಟೆ - ಜೆಡಿಎಸ್
ಮಂಡ್ಯ - ಕಾಂಗ್ರೆಸ್
ಶ್ರೀರಂಗಪಟ್ಟಣ - ಕಾಂಗ್ರೆಸ್
ನಾಗಮಂಗಲ - ಜೆಡಿಎಸ್
ಕೆ.ಆರ್.ಪೇಟೆ - ಜೆಡಿಎಸ್
ಕೆ.ಆರ್.ನಗರ - ಕಾಂಗ್ರೆಸ್

Mandya Lok Sabha election : Ambareesh Vs Cheluvarayaswamy
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲರಿಗಿಂತಾ ಹೆಚ್ಚು ಅಂದ್ರೆ, 55,346 ಮತಗಳು ಕಾಂಗ್ರೆಸ್‍ನ ಅಂಬರೀಶ್ ಪಾಲಾಗಿದ್ದವು. ಮದ್ದೂರಿನಲ್ಲೂ ಅಂಬರೀಶ್ ಅವರೇ ಮುನ್ನಡೆ ಸಾಧಿಸಿದ್ದರು. ಮೇಲುಕೋಟೆಯಲ್ಲಿ ಮಾತ್ರ, ಜೆಡಿಎಸ್‍ನ ಚೆಲುವರಾಯಸ್ವಾಮಿ ಮುನ್ನಡೆ ಸಾಧಿಸಿದ್ದರು. ಇನ್ನು ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷವೇ ಲೀಡ್‍ನಲ್ಲಿತ್ತು. ನಾಗಮಂಗಲ ಹಾಗೂ ಕೆ. ಆರ್. ಪೇಟೆಯಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದರೆ, ಕೆ.ಆರ್‍ನಗರನಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಮತಗಳು ಲಭಿಸಿದ್ದವು.

ಒಟ್ಟು 8 ಕ್ಷೇತ್ರಗಳ ಪೈಕಿ, ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುಂದಿತ್ತು. ಆದರೂ ಕೂಡ, ಚೆಲುವರಾಯಸ್ವಾಮಿ 23,500 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನು ಈ ಬಾರಿ, ಜೆಡಿಎಸ್‍ನಿಂದ ಸಿ.ಎಸ್.ಪುಟ್ಟರಾಜು ಕಣಕ್ಕಿಳಿದಿದ್ದರೆ, ಕಾಂಗ್ರೆಸ್‍ನಿಂದ ನಟಿ ರಮ್ಯಾ ಅಖಾಡದಲ್ಲಿದ್ದಾರೆ. ರಮ್ಯಾ ಗೆಲುವು ಅಂಬಿ ಹಾಗೂ ಕೃಷ್ಣ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಪುಟ್ಟರಾಜು ಬೆನ್ನಿಗೆ ದೇವೇಗೌಡ ಕುಟುಂಬವೇ ನಿಂತಿದೆ. ಮತದಾರ ಪ್ರಭು ಯಾರಿಗೆ ಮಣೆ ಹಾಕ್ತಾನೋ ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+