Get Updates
Get notified of breaking news, exclusive insights, and must-see stories!

ಬ್ರಾಹ್ಮಣರು ತಿಂದಷ್ಟು ಗೋಮಾಂಸ ಬೇರಾರೂ ತಿಂದಿಲ್ಲ

ಬೆಂಗಳೂರು, ಆ 19: ಬ್ರಾಹ್ಮಣ ಸಮುದಾಯ, ಪೇಜಾವರ ಶ್ರೀಗಳು ಮತ್ತು ಮಡೆಸ್ನಾನದ ವಿರುದ್ದ ನಿಡುಮಾಮಿಡಿ ಶ್ರೀಗಳು ಮತ್ತು ಚಂದ್ರಶೇಖರ ಪಾಟೀಲ್ ಮಗುದೊಮ್ಮೆ ಹರಿಹಾಯ್ದಿದ್ದಾರೆ. ಬ್ರಾಹ್ಮಣರು ತಿಂದಷ್ಟು ಗೋಮಾಂಸ ಬೇರಾರೂ ತಿಂದಿಲ್ಲ ಎಂದು ಚಂಪಾ ಹೇಳುವ ಮೂಲಕ ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಉಡುಪಿಯ ಪೇಜಾವರ ಶ್ರೀಗಳು ಬೆರಕಿ ಸ್ವಾಮಿ. ಈ ಇಳಿ ವಯಸ್ಸಲ್ಲೂ ಕೊಕ್ಕೆ ಇಡುವ ಚಾಣಾಕ್ಷ ಸ್ವಾಮೀಜಿ. ಭಕ್ತರು ಸ್ವಾಮೀಜಿಗಳ ಪಾದಕ್ಕೆ ಎರಗುತ್ತಾರೆ, ಸಮಾಜದಲ್ಲಿ ಸಮಾನತೆ ಬಯಸುವ ಮಠಾಧೀಶರು ಭಕ್ತರ ಪಾದಕ್ಕೆ ಎರಗಲಿ ನೋಡೋಣ ಎಂದು ಚಂಪಾ ಸವಾಲೆಸೆದಿದ್ದಾರೆ.

ಶಾಸಕರ ಭವನದಲ್ಲಿ ಸಿಪಿಐ (ಎಂ) ಆಯೋಜಿಸಿದ್ದ ಮಡೆಸ್ನಾನ ಮತ್ತು ಪಂಕ್ತಿಭೇದ ಪದ್ದತಿ ವಿರೋಧಿಸುವ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಚಂಪಾ, ಸಾಹಿತಿ ಅನಂತಮೂರ್ತಿ ಮರಿ ಪೇಜಾವರ ಶ್ರೀಗಳಿದ್ದಂತೆ.

ಒಂದು ಪಕ್ಷ ಪೇಜಾವರರ ಬಳಿ ಜಗಳ ಆಡಬಹುದು, ಆದರೆ ಯು ಆರ್ ಅನಂತಮೂರ್ತಿ ಜೊತೆ ಜಗಳವಾಡಲು ಸಾಧ್ಯವಿಲ್ಲ. ಪಾದಪೂಜೆ ಮಾಡಿದ ನೀರನ್ನು ಮನೆ ಪೂರ್ತಿ ಚಿಮುಕಿಸುತ್ತಾರೆ. ಇದಕ್ಕಿಂತ ಅಸಹ್ಯ ಇನ್ನೊಂದು ಇದೆಯಾ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಎಲ್ಲಾ ಮಠಗಳ ಆಡಳಿತ ರಾಜಕೀಯ ಪ್ರೇರಿತ. ರಾಜಕೀಯ, ಅನಿಷ್ಟ ಪದ್ದತಿ, ಮೂಢನಂಬಿಕೆ ಆರಂಭವಾಗುವುದೇ ಮಠಗಳಿಂದ. ಇದನ್ನು ಹೊರತು ಪಡಿಸಿದ ಸಮಾಜ ಮಠಗಳಿಗೂ ಬೇಕಿಲ್ಲ, ರಾಜಕೀಯ ಪಕ್ಷಗಳಿಗೂ ಬೇಕಿಲ್ಲ ಎಂದು ಚಂಪಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುಳ್ಳು ಹೇಳುವ ಪೇಜಾವರ, ಕುಕ್ಕೆ ದೇವಾಲಯದ ಕಾಣಿಕೆ ಹುಂಡಿ ಪಾಪದ ಹಣದ್ದು.. ಮುಂದೆ ಓದಿ..

ನಿಡುಮಾಮಿಡಿ ಶ್ರೀ

ನಿಡುಮಾಮಿಡಿ ಶ್ರೀ

ಕುಕ್ಕೆ ಸುಬ್ರಮಣ್ಯ, ತಿರುಪತಿ ಮತ್ತು ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಹಣದ ಮಹಾಪೂರವೇ ಹರಿದು ಬರುತ್ತದೆ. ಇದೆಲ್ಲಾ ಕಷ್ಟಪಟ್ಟು ದುಡಿದ ಹಣವಲ್ಲ, ಎಲ್ಲಾ ಪಾಪದ ದುಡ್ದು, ಪಾಪಿಗಳು ತನ್ನ ಪಾಪವನ್ನು ತೊಳೆಯಲು ಇಲ್ಲಿನ ಹುಂಡಿಗೆ ಹಣ ಸುರಿಯುತ್ತಾರೆ. ಇದೇ ಹಣವನ್ನು ಬಡಬಗ್ಗರಿಗೆ ದಾನ ಮಾಡುವ ಬುದ್ದಿಯನ್ನು ದೇವರು ಅಂಥಹ ಪಾಪಿಗಳಿಗೆ ಕರುಣಿಸಲಿ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

ಶ್ರೀಗಳ ವಾಗ್ದಾಳಿ

ಶ್ರೀಗಳ ವಾಗ್ದಾಳಿ

ಪುರೋಹಿತಶಾಹಿ ವರ್ಗ ಮಾಂಸಾಹಾರಿ ಎನ್ನುವ ನೆಪದಲ್ಲಿ ಸಮಾಜದಲ್ಲಿ ತಾರತಮ್ಯ ಮಾಡುತ್ತಿದೆ. ವಾಸ್ತವವಾಗಿ ಉನ್ನತ ವರ್ಗವೇ ಅತಿಹೆಚ್ಚು ಗೋಮಾಂಸ ಭಕ್ಷ್ಯ ಮಾಡುತ್ತಿದೆ. ಬೌದ್ದ ಧರ್ಮದ ಜನಪ್ರಿಯತೆಯನ್ನು ತಗ್ಗಿಸಲು ಉನ್ನತ ವರ್ಗದವರು ತಮ್ಮ ಊಟದ ಶೈಲಿಯನ್ನೇ ಬದಲಾಯಿಸಿಕೊಂಡರು ಎಂದು ನಿಡುಮಾಮಿಡಿ ಶ್ರೀಗಳು ಹೇಳಿದ್ದಾರೆ.

ಮುಜರಾಯಿ ದೇವಸ್ಥಾನಗಳು

ಮುಜರಾಯಿ ದೇವಸ್ಥಾನಗಳು

ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ, ಮಡೆಸ್ನಾನ, ಪಂಕ್ತಿಭೇದ ಮುಂತಾದ ಅನಿಷ್ಟ ಪದ್ದತಿಗಳು ಜಾರಿಯಲ್ಲಿದ್ದರೆ ಸರಕಾರ ಆ ದೇವಾಲಯದ ಆಡಳಿತವನ್ನು ಸಂಪೂರ್ಣ ತನ್ನ ವಶಕ್ಕೆ ತೆಗೆದು ಕೊಳ್ಳಬೇಕು. ಹಾಗೆಯೇ ಎಲ್ಲಾ ಅನುದಾನವನ್ನು ಸ್ಥಗಿತಗೊಳಿಸ ಬೇಕೆಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಮನಸೋ ಇಚ್ಛೆ ವಾಗ್ದಾಳಿ

ಮನಸೋ ಇಚ್ಛೆ ವಾಗ್ದಾಳಿ

ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಯೊಬ್ಬರೂ, ಪೇಜಾವರ ಶ್ರೀಗಳನ್ನು ಗುರಿಯಾಗಿಸಿ ಕೊಂಡು ಮನಸೋ ಇಚ್ಛೆ ವಾಗ್ದಾಳಿ ನಡೆಸಿದ್ದಾರೆ. ಪೇಜಾವರ ಶ್ರೀಗಳದ್ದು ಅನುಕೂಲಸಿಂದು ನಿಲುವು ಎಂದು ಜರಿದಿದ್ದಾರೆ.

ದಲಿತರ ಮನೆಯಲ್ಲಿ ಉಣ್ಣಲಿ

ದಲಿತರ ಮನೆಯಲ್ಲಿ ಉಣ್ಣಲಿ

ಸಮಾಜದಲ್ಲಿ ಬದಲಾವಣೆ ತರಲು ಬಯಸುವ ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಭೋಜನ ಸ್ವೀಕರಿಸಲಿ. ಒಂದು ವೇಳೆ ಅವರು ದಲಿತರ ಕೇರಿಯಲ್ಲಿ ಭೋಜನ ಸ್ವೀಕರಿಸಿದರೆ ಭಾರತ ನಿಜವಾಗಲೂ ಬದಲಾವಣೆಗೆ ತೆರೆದುಕೊಂಡಿದೆ ಎಂದರ್ಥ ಎಂದು ಸಾಹಿತಿ ಮುರಳಸಿದ್ದಪ್ಪ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+