ಚಿತ್ರ ಸುದ್ದಿಗಳಲ್ಲಿ : ರಕ್ಷಾಬಂಧನ, ಈರುಳ್ಳಿ ಖರೀದಿ
ನವದೆಹಲಿ, ಆ.19 : ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಹುಟ್ಟು ಹಬ್ಬದ ಅಂಗವಾಗಿ ನವದೆಹಲಿಯಲ್ಲಿರುವ ಕರ್ಮಭೂಮಿಯಲ್ಲಿನ ಸಮಾಧಿಗೆ ಗೌರವ ಸಲ್ಲಿಸಿದ ಬಳಿಕ ರಾಷ್ಟಪತಿ ಪ್ರಣಬ್ ಮುಖರ್ಜಿ ಸಮಾಧಿ ಸ್ಥಳದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕರು.
ಅಯ್ಯೋ ಈರುಳ್ಳಿ : ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರ ಮೊಬೈಲ್ ವ್ಯಾನ್ ಗಳ ಮೂಲಕ ಜನರಿಗೆ ಈರುಳ್ಳಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಕೊಲ್ಕತ್ತಾದಲ್ಲಿ ವ್ಯಾನ್ ನಲ್ಲಿ ಈರುಳ್ಳಿ ಕೊಳ್ಳುವ ಗ್ರಾಹಕ ಕಂಡಿದ್ದು ಹೀಗೆ.
ರಾಜೀವ್ ಗಾಂಧಿಗೆ ಕ್ಷೀರಾಭಿಷೇಕ : ಆ.9ರಿಂದ ಆರಂಭವಾಗಿದ್ದ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯ ಸೋಮವಾರ ನವದೆಹಲಿಯಲ್ಲಿ ಮುಕ್ತಾಯವಾಯಿತು. ಆಗ ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ರಾಜೀವ್ ಗಾಂಧಿ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು.
ಯಾವ ರಾಖಿ ಕೊಳ್ಳೂದು : ಮಂಗಳವಾರ ದೇಶಾದ್ಯಂತ ರಕ್ಷಾಬಂಧನದ ಸಂಭ್ರಮ. ಮುಂಬೈನ ಮಾರುಕಟ್ಟೆಯೊಂದರಲ್ಲಿ ಯುವತಿಯೊಬ್ಬಳು ರಾಖಿ ರಾಶಿಗಳ ಮಧ್ಯೆನಿಂತು ಪ್ರೀತಿಯ ಅಣ್ಣನಿಗಾಗಿ ಯಾವ ರಾಖಿ ಕೊಳ್ಳೋದು ಎಂದು ಆಲೋಚಿಸುತ್ತಿರುವಾಗ ಕ್ಯಾಮರಾಗೆ ಸೆರೆ ಸಿಕ್ಕಿದ್ದು ಹೀಗೆ.(ವಿಶ್ವ ಫೋಟೋಗ್ರಫಿ ದಿನಕ್ಕೊಂದಿಷ್ಟು ವಿಶಿಷ್ಟ ಚಿತ್ರಗಳು)

ಯಾವ ರಾಕಿ ತಗೋಳೋದು
ಮಂಗಳವಾರ ರಕ್ಷಾ ಬಂಧನದ ಹಿನ್ನಲೆಯಲ್ಲಿ ಸೋಮವಾರ ಮುಂಬೈನ ಮಾರುಕಟ್ಟೆಯಲ್ಲಿ ಯುವತಿಯೊಬ್ಬಳು ರಾಕಿಯ ಆಯ್ಕೆಯಲ್ಲಿ ತೊಡಗಿರುವುದು.

ಸ್ಪಲ್ಪ ರೆಸ್ಟ್ ತಗೊಳ್ಳೋಣ
ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಹುಟ್ಟುಹಬ್ಬದಂದು, ಅವರ ಸಮಾಧಿ ಇರುವ ದೆಹಲಿಯ ಪುಣ್ಯಭೂಮಿಯಲ್ಲಿ ಗೌರವ ವಂದನೆ ನೀಡಿದ ಬಳಿಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ರಾಜೀವ್ ಗಾಂಧಿಗೆ ಕ್ಷೀರಾಭಿಷೇಕ
ಆ.9ರಿಂದ ಆರಂಭವಾಗಿದ್ದ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು ಸೋಮವಾರ ನವದೆಹಲಿಯಲ್ಲಿ ಮುಕ್ತಾಯವಾಯಿತು. ಆಗ ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ರಾಜೀವ್ ಗಾಂಧಿ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು.

ಅಬ್ಬಾ 1 ಕೆ.ಜಿ.ಸಾಕು
ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರ ಮೊಬೈಲ್ ವ್ಯಾನ್ ಗಳ ಮೂಲಕ ಜನರಿಗೆ ಈರುಳ್ಳಿಯನ್ನು ಕೆ.ಜಿ.ಗೆ 36 ರೂ.ದರದಲ್ಲಿ ಒದಗಿಸುತ್ತಿದೆ. ಕೊಲ್ಕತ್ತಾದ ಬೀದಿಯಲ್ಲಿ ಈರುಳ್ಳಿ ಕೊಂಡ ಗ್ರಾಹಕ ಕಂಡಿದ್ದು ಹೀಗೆ

ಇದು ರಜೆಯ ಕಾಲ
ರಾಜಕೀಯ ಜಂಜಾಟಗಳಿಂದ ಕೊಂಚ ಬಿಡುವು ತೆಗೆದುಕೊಂಡ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಲಕ್ನೋದಲ್ಲಿ ಭಾನುವಾರ ರಾತ್ರಿ ನಡೆದ ಐಬಿಎಲ್ ಪಂದ್ಯವನ್ನು ಕುಟುಂಬ ಸದಸ್ಯರೊಂದಿಗೆ ಕುಳಿತು ವೀಕ್ಷಿಸಿದರು.

ಹಬ್ಬಕ್ಕೆ ಗಣೇಶ್ ಸಿದ್ಧ
ಗಣೇಶ ಚತುರ್ಥಿ ಆಚರಣೆಗೆ ಕೆಲವು ದಿನಗಳು ಬಾಕಿ ಇವೆ. ಚೆನ್ನೈನಲ್ಲಿ ಮಹಿಳೆಯೊಬ್ಬಳು ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ತಲ್ಲೀನರಾದಾಗ ಕಂಡಿದ್ದು ಹೀಗೆ.

ನಮಗೆ ಯಾರ ಭಯವೂ ಇಲ್ಲ
ದೇಶದ ಹೆಮ್ಮೆಯ ಸಂಸತ್ ಭವನದಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಆದರೆ, ಸೋಮವಾರ ನಮಗೆ ಯಾರ ಭಯವೂ ಇಲ್ಲ ಎಂದು ನಾಯಿಗಳು ಸಂಸತ್ ಭವನದ ಮೆಟ್ಟಿಲ ಮೇಲೆ ನಿದ್ರೆಗೆ ಶರಣಾಗಿದ್ದವು.

ನಮಸ್ಕಾರ, ನಮಸ್ಕಾರ
ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಆಗಮಿಸಿದಾಗ, ಸಂಸದೆ ಮತ್ತು ನಟಿ ಜಯಪ್ರದಾ ಅವರು ನಮಸ್ಕರಿಸಿದ್ದು ಹೀಗೆ.

ಶಂಕರ ನಿನಗೆ ನಮನ
ಶ್ರವಣ ಮಾಸದ ಕೊನೆಯ ಸೋಮವಾರದಂದು ಭಕ್ತರು ಅಲಹಾಬಾದ್ ನಲ್ಲಿರುವ ಶಿವಲಿಂಗಗಳಿಗೆ ಶದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಅಯ್ಯೋ ಸ್ವಲ್ಪ ತಿನ್ನಿ ಸಾರ್
ಪಶ್ಚಿಮ ಬಂಗಾಳದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಶಿಕ್ಷಣ ಸಚಿವರ ಭಾವಚಿತ್ರಕ್ಕೆ ಚಪಾತಿ ತಿನ್ನಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೋಹಕ ನಗು
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಕ್ಯಾಮರಾ ಕಂಡು ಮೋಹಕ ನಗೆ ಚೆಲ್ಲಿದ್ದು ಹೀಗೆ.












Click it and Unblock the Notifications