ಬೆಂಗಳೂರು ಯುವತಿ ಮೇಲೆ ಸ್ನೇಹಿತರಿಂದಲೇ ರೇಪ್

ಸದರಿ ಯುವತಿ ಮತ್ತು ಅವಳ ಸ್ನೇಹಿತರು ಒಂದು ವರ್ಷದಿಂದ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಅವರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು. ಅದನ್ನು ದುರುಪಯೋಗಪಡಿಸಿಕೊಂಡು ಯುವತಿ ಅತ್ಯಾಚಾರದ ಕತೆ ಕಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಇದೇ ವೇಳೆ, ಸದರಿ ಯುವತಿ ಕಳೆದೊಂದು ವರ್ಷದಲ್ಲಿ ವೇಶ್ಯವಾಟಿಕೆ ನಡೆಸಿದ ಆರೋಪದ ಮೇಲೆ ಅನೇಕ ಬಾರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಳು ಎಂದೂ ತಿಳಿದುಬಂದಿದೆ.
ಹಿಂದಿನ ಸುದ್ದಿ: ಆಡುಗೋಡಿಯ ನಂಜಪ್ಪ ಲೇ ಔಟಿನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ. ಅತ್ಯಾಚಾರಕ್ಕೊಳಗಾದ ಯುವತಿ ಮುಂಬೈ ಮೂಲದವಳು. ಸ್ನೇಹಿತರಿಂದಲೇ ಅತ್ಯಾಚಾರ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಸ್ನೇಹಿತರು ಪೊಲೀಸರಿಗೆ ತಕ್ಷಣ ದೂರು ನೀಡಿದ್ದಾರೆ. ಮೂವರು ಸ್ನೇಹಿತರು ಈ ಕುಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ದೆಹಲಿ ಮೂಲದ ರಾಣಿ ಕಲ್ಯಾಣ್ ಬಿಸ್ವಾಸ್ ಎಂಬ ಕ್ಯಾಬ್ ಚಾಲಕ ಮತ್ತು ಅವನ ಸಹಚರರು ಈ ಕುಕತ್ಯವೆಸಗಿದ್ದಾರೆ. ಬಿಸ್ವಾಸ್ ಮತ್ತು ಬಾಧಿತ ಯುವತಿ ಒಂದೇ ಮನೆಯಲ್ಲಿ ಒಂದು ತಿಂಗಳಿಂದ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಬೆಳಗಾವಿಯಲ್ಲಿ ರೇಪ್ ಅಂಡ್ ಮರ್ಡರ್: ಜಿಲ್ಲೆಯ ರಾಮದುರ್ಗದ ತಾಲೂಕಿನ ಬೋಸಬಾಳ ಗ್ರಾಮದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ದುರುಳರು ಆಕೆಯನ್ನು ಬರ್ಬವಾಗಿ ಹತ್ಯೆ ಮಾಡಿದ್ದಾರೆ.
ಭೀಮವ್ವ (23) ಮೃತ ದುರ್ದೈವಿ. ನಿನ್ನೆ ಬಹಿರ್ದೆಸೆಗೆಂದು ಹೊರಗೆ ಬಂದಾಗ ಮೂರ್ನಾಲ್ಕು ಮಂದಿ ಈಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಡಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications