ಕರ್ನಾಟಕ ಭೇಟಿಗೆ ಷರತ್ತು ವಿಧಿಸಿದ ಮೋದಿ

deecide-yeddyurappa-reentry-well-before-my-visit-to-karnataka-modi
ಬೆಂಗಳೂರು, ಆಗಸ್ಟ್ 16: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಲು ಮಹತ್ವದ ಷರತ್ತು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

ಅಂದರೆ ತಾವು ಕರ್ನಾಟಕಕ್ಕೆ ಬರುವ ಮುನ್ನ ಮಾಜಿ ಮುಖ್ಯಮಂತ್ರಿ, ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ವಿಷಯವನ್ನು ಇತ್ಯರ್ಥಪಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವರಿಷ್ಠರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡುವುದು ವಿಳಂಬವಾಗುವ ಲಕ್ಷಣಗಳಿವೆ.

ಲೋಕಸಭಾ ಚುನಾವಣೆ ದಿನಗಳು ಹತ್ತಿರವಾಗುತ್ತಿರುವಂತೆ ಪಕ್ಷದಲ್ಲಿ ಯಾವುದೇ ಗೊಂದಲಗಳು ಇರಬಾರದು ಎಂಬುದು ಮೋದಿ ಆಶಯವಾಗಿದೆ. ಆದ್ದರಿಂದಲೇ ತಾವು ಚುನಾವಣಾ ಪ್ರಚಾರ ಪ್ರವಾಸ ಕೈಗೊಳ್ಳುವ ಮುನ್ನ ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳಲಾಗುವುದೋ ಅಥವಾ ಬೇಡವೋ ಎಂಬುದು ಸ್ಪಷ್ಟವಾಗಬೇಕು ಎಂದು ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸದ್ಯ ಮಾಹಿತಿ ಪ್ರಕಾರ ಮೋದಿ ಕರ್ನಾಟಕಕ್ಕೆ ಸೆಪ್ಟೆಂಬರಿನಲ್ಲಿ 22-23 ರಂದು ಆಗಮಿಸುವ ಅಂದಾಜಿದೆ. ತಾವು ಬಂದಾಗ ಯಡಿಯೂರಪ್ಪ ವಿಷಯವಾಗಿ ಯಾವುದೇ ಮುಖಂಡರು ವ್ಯತಿರಿಕ್ತವಾಗಿ ಮಾತನಾಡುವಂತಹ ಪರಿಸ್ಥಿತಿ ಇರಬಾರದು ಎಂಬುದು ಆಶಯವೆನ್ನಲಾಗಿದೆ. ಅದಕ್ಕಾಗಿಯೇ ಅವರು ಹೈಕಮಾಂಡಿಗೆ ಈ ರೀತಿ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+