ರಾಜ್ಯದ ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ
ರಾಜ್ಯದ ಪೊಲೀಸರ ಜತೆಗೆ ಗಡಿ ಭದ್ರತಾಪಡೆಯ ಕಾಮೆಂಡರ್ ಆಗಿರುವ ನಮ್ಮ ರಾಜ್ಯದ ಅಶೋಕ್ ಅರ್ಜುನ್ ಪಾಟೀಲ್ ಅವರಿಗೂ ಶೌರ್ಯ ಪ್ರಶಸ್ತಿ ಲಭಿಸಿದೆ. ಪಕ್ಕದ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯೇಂದ್ರ ಬಿದರಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿಗಳ ಪೊಲೀಸ್ ಪ್ರಶಸ್ತಿ ಸಿಕ್ಕಿದೆ. ವಿಜಯೇಂದ್ರ ಬಿದರಿ ಅವರು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಹಾಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರ ಪುತ್ರರಾಗಿದ್ದಾರೆ.
ಬಿಎಸ್ಎಫ್ ನ ಪಾಟೀಲ್ : ಬೆಳಗಾವಿಯ ಖಾನಪುರ ತಾಲೂಕಿನ ಛಿಕ್ಲಾ ಗ್ರಾಮದ ಪಾಟೀಲರ ತಂದೆ ಆರ್ಮಿಯಲ್ಲಿದ್ದರು, ಸೋದರರೊಬ್ಬರು ಕರ್ನಲ್ ಆಗಿದ್ದಾರೆ. 1989ರಲ್ಲಿ ಸಹಾಯಕ ಕಾಮೆಂಡೆಂಟ್ ಆಗಿ ಗಡಿ ಭದ್ರತಾ ಪಡೆ ಸೇರಿದ ಅಶೋಕ್ ಪಾಟೀಲ್ ಅವರು 'ಸ್ವಾರ್ಡ್ ಆಫ್ ಹಾನರ್' ಗೌರವ ಪಡೆದು ಶ್ರೇಷ್ಠ ಟ್ರೈನಿ ಎನಿಸಿದವರು. ಬೆಳಗಾವಿ ಮಿಲಿಟರಿ ಶಾಲೆ, ಆರ್ಎಲ್ ವಿಜ್ಞಾನ ಕಾಲೇಜು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಬಿಎಸ್ ಎಫ್ ನಲ್ಲಿ ಡಿಜಿ ಹಾಗೂ ಐಜಿಯಾಗಿದ್ದ ಪಾಟೀಲರು ಪಶ್ಚಿಮ ಹಾಗೂ ಪೂರ್ವ ಬೆಟಾಲಿಯನ್ ಕಾಮೆಂಡೆಟ್ ನಲ್ಲಿದ್ದರು ಸದ್ಯ ಬೆಂಗಳೂರಿನ ತರಬೇತಿ ಕೇಂದ್ರ ಮುಖ್ಯ ನಿರ್ವಾಹಕರಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 28 ಮಂದಿಗೆ 2013ನೇ ಸಾಲಿನ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಜೇತರ ವಿವರ ಹೀಗಿದೆ.
ಶೌರ್ಯ ಪ್ರಶಸ್ತಿ: ಕಾರ್ಕಳದ ಎಎನ್ ಎಫ್ ನ ಡಿವೈಎಸ್ಪಿ ಎ.ಎಚ್. ಶಂಕರ್, ಪೇದೆ ನವೀನ್ ಜಿ. ನಾಯಕ್ ಹಾಗೂ ಪೇದೆ ಬಿ.ಡಿ.ಪ್ರದೀಪ್
ಗಣ್ಯ ಪ್ರಶಸ್ತಿ: ಯಲಹಂಕ ಪಿಡಿಎಂಎಸ್ ವಿಭಾಗದ ಎಸ್ಪಿ ವಿಶ್ವನಾಥ ಶೆಟ್ಟಿ
ಶ್ಲಾಘನೀಯ ಪ್ರಶಸ್ತಿ:
* ಮಂಡ್ಯದ ಸಹಾಯಕ ಎಸ್ಪಿ ಎ.ಎನ್. ರಾಜಣ್ಣ, ಬೆಂಗಳೂರು
* ಸಿಐಡಿ ವಿಭಾಗ ಡಿವೈಎಸ್ಪಿ ಕೆ. ಅಶೋಕ್ ಕುಮಾರ್,
* ಗುಪ್ತಚರ ವಿಭಾಗದ ಡಿವೈಎಸ್ಪಿ ಸಿ.ಎಚ್. ಗಂಗಾಧರ್,
* ಬೆಳಗಾವಿ ಕೆಎಲ್ ಎನ ಡಿವೈಎಸ್ಪಿ ಗಣಪತಿ ಆರ್.ಪಾಟೀಲ್,
* ಮೈಸೂರಿನ ಡಿವೈಎಸ್ಪಿ ಟಿ. ಸಿದ್ದಪ್ಪ,
* ಕಾರ್ಕಳದ ಎಎನ್ ಎಫ್ ನ ವಿಶ್ವನಾಥ್ ಎಸ್. ನಾಯಕ್,
* ನೆಲಮಂಗಲದ ಡಿವೈಎಸ್ಪಿ ಆರ್. ಮಲ್ಲೇಶ್,
* ರಾಮನಗರದ ಡಿವೈಎಸ್ಪಿ ಎನ್.ಎಂ. ರಾಮಲಿಂಗಪ್ಪ,
* ಮಂಗಳೂರು ಕೆಎಸ್ ಆರ್ ಪಿ 7ನೇ ಬೆಟಾಲಿಯನ್ ನ ಆರ್ ಪಿಐ ಯು.ಜಿ. ಚಿದಾನಂದ ಆರಾಧ್ಯ,
* ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪಿಐ ಬಿ.ಪಿ. ಸುರೇಶ್ ಕುಮಾರ್,
* ಡಿಸಿಆರ್ ಇ ವಿಭಾಗದ ಪಿಎಸ್ ಐ ಎಂ.ಜಿ. ಶಿವಶಂಕರಪ್ಪ,
* ಉಡುಪಿ ಬ್ರಹ್ಮಾವರದ ಎಎಸ್ ಐ ಶೀನಾ ಬಿಲ್ಲವ,
* ತುಮಕೂರು ಡಿಪಿಓದ ಮಹಿಳಾ ಎಎಸ್ ಐ ಜಿ.ಟಿ. ಪಾರ್ವತಮ್ಮ,
* ಬೆಂಗಳೂರು ಅರಣ್ಯ ವಿಭಾಗದ ಮುಖ್ಯ ಪೇದೆ ಎಂ.ಎಸ್. ರಾಮಮೂರ್ತಿ,
* ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಪೇದೆ ಆರ್. ಪದ್ಮರಾಜು,
* ಬೆಂಗಳೂರು ನಿಸ್ತಂತು ವಿಭಾಗದ ಮುಖ್ಯಪೇದೆ ಎಲ್.ರಾಜು,
* ಬೆಂಗಳೂರಿನ ಕೆಎಸ್ ಆರ್ ಪಿ 4ನೇ ಬೆಟಾಲಿಯನ್ ನ ಮುಖ್ಯಪೇದೆ ಐ.ಪಿ.ಮಾದಯ್ಯ.
ಅಗ್ನಿಶಾಮಕ ದಳ -ವಿಶಿಷ್ಟ ಸೇವಾ ಪದಕ:
* ಬೆಂಗಳೂರು ಉತ್ತರ ವಲಯದ ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಎನ್. ಶಶಿಧರ್,
* ಹುಬ್ಬಳ್ಳಿ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಫಕೀರಪ್ಪ ಎಚ್. ಕುರಕುಂದಿ,
* ಬೆಂಗಳೂರಿನ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಬಸವರಾಜು ಎಚ್.ಬಿ.
ಶ್ಲಾಘನೀಯ ಸೇವಾ ಪದಕ:
* ಮೈಸೂರು ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸಿ. ಬಸವಣ್ಣ,
* ಬೆಂಗಳೂರು ಅಂಜನಾಪುರದ ಅಗ್ನಿಶಾಮಕ ಠಾಣಾಧಿಕಾರಿ ಚಿಕ್ಕಣ್ಣ,
* ಶಿವಮೊಗ್ಗದ ಪ್ರಮುಖ ಅಗ್ನಿಶಾಮಕ -722 ಎಲ್.ಬಿ. ವೀರಭದ್ರಪ್ಪ,
* ಸರ್ಜಾಪುರ ರಸ್ತೆ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ-773 ಬಿ.ಎಂ. ರಾಮಕೃಷ್ಣ.













Click it and Unblock the Notifications