ಚಿತ್ರಗಳಲ್ಲಿ: 'ರಕ್ಷಣಾ ಸಚಿವ ಒಬ್ಬ ನಾಮರ್ದ'
ಬೆಂಗಳೂರು, ಆ.13: ಪಾಕಿಸ್ತಾನ ಸೈನಿಕರು ಗಡಿ ಉಲ್ಲಂಘನೆ ಮಾಡಿ ಐವರು ಭಾರತೀಯ ಯೋಧರನ್ನು ಕೊಂದರೂ ಈ ಬಗ್ಗೆ ನಿರ್ಲಕ್ಷ ಧೋರಣೆ, ವಿಳಂಬ ನೀತಿ ಅನುಸರಿಸುತ್ತಿರುವ ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಯುವಮೋರ್ಚಾ ಕಿಡಿ ಕಾರಿದೆ.
'ರಕ್ಷಣಾ ಸಚಿವ ಎ.ಕೆ ಅಂಟನಿ ಒಬ್ಬ ನಾಮರ್ದ' ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಕಟುವಾಗಿ ಟೀಕಿಸಿದ್ದಾರೆ. ಸೋಮವಾರ ಸಂಜೆ ರಾಷ್ಟ್ರೀಯ ಸೈನಿಕ ಸ್ಮಾರಕದ ಬಳಿ ಬಿಜೆಪಿ ಯುವಮೋರ್ಚಾದ ಸದಸ್ಯರು ಮೊಂಬತ್ತಿ ಹಚ್ಚಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪಾಕಿಸ್ತಾನದಂಥ ಚಿಕ್ಕ ದೇಶದ ಕಪಟ ಯುದ್ಧವನ್ನು ಎದುರಿಸಲಾಗದ ಯುಪಿಎ ಸರ್ಕಾರ ಇನ್ನು ಚೀನಾದಂಥ ದೊಡ್ಡ ದೇಶ ಎರಗಿದರೆ ಏನು ಮಾಡುತ್ತದೆ. ಯೋಧರನ್ನು ಕೊಂದಿದ್ದು ಪಾಕಿಸ್ತಾನಿ ಸೈನಿಕರು ಎಂದು ದೃಢಪಡಿಸಲು ಮೂರು ದಿನ ತೆಗೆದುಕೊಂಡ ಅಂಟನಿ ಹಾಗೂ ಈಗಲೂ ಪಾಕಿಸ್ತಾನದ ಜೊತೆ ಮಾತುಕತೆಗೆ ಮುಂದಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನಮ್ಮ ಧಿಕ್ಕಾರವಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ಉಳಿದಂತೆ, ಶ್ರಾವಣ ಮಾಸ ಆರಂಭದಿಂದ ವಾರಣಸಿ ಸೇರಿದಂತೆ ಹಲವೆಡೆ ಪೂಜೆ ಪುನಸ್ಕಾರ ನಡೆಸಿದ ಚಿತ್ರಗಳು ಇಲ್ಲಿವೆ. ಸ್ವಾತಂತ್ರೋತ್ಸವ ಅಂಗವಾಗಿ ಗಡಿಯಲ್ಲಿ ಹಾಗೂ ದೆಹಲಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಸೋಲಾರ್ ಹಗರಣದ ಕಾರಣ ಒಡ್ಡಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರಾಜೀನಾಮೆ ಕೇಳಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೇರಳದ ತನಕ ಹೋಗಿ ಬಂದಿರುವ ಚಿತ್ರ ಕೂಡಾ ಸಿಕ್ಕಿದೆ..ತಪ್ಪದೇ ನೋಡಿ

ಹುತಾತ್ಮರಿಗೆ ನಮನ
ಬೆಂಗಳೂರು: ಪಾಕಿಸ್ತಾನ ಸೈನಿಕರು ಗಡಿ ಉಲ್ಲಂಘನೆ ಮಾಡಿ ಐವರು ಭಾರತೀಯ ಯೋಧರನ್ನು ಕೊಂದರೂ ಈ ಬಗ್ಗೆ ನಿರ್ಲಕ್ಷ ಧೋರಣೆ, ವಿಳಂಬ ನೀತಿ ಅನುಸರಿಸುತ್ತಿರುವ ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಯುವಮೋರ್ಚಾ ಕಿಡಿ ಕಾರಿದೆ.

ರಾಜಮಂಡ್ರಿಯಲ್ಲಿ
ಸೀಮಾಂಧ್ರದ ಸುಮಾರು 4.5 ಲಕ್ಷ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಬಂದ್ ಆಚರಿಸುತ್ತಿದ್ದಾರೆ.

ಇಂಗ್ಲೆಂಡ್ ಆಷ್ಯಸ್ ಚಿತ್ರ
ಚೆಸ್ಟರ್ ಲೆ ಸ್ಟ್ರೀಟ್: ಇಂಗ್ಲೆಂಡಿನ ಇಯಾನ್ ಬೆಲ್ ಔಟಾಗಿ ಪೆವಿಲಿಯನ್ ಗೆ ಮರಳುವ ಚಿತ್ರ. ನಾಲ್ಕನೇ ಟೆಸ್ಟ್ ಪಂದ್ಯವನ್ನು ನಾಲ್ಕನೇ ದಿನದಂದೆ ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ. ಆಷ್ಯಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.

ವಾರಣಸಿಯಲ್ಲಿ
ವಾರಣಸಿಯಲ್ಲಿ ಕವಾರಿಯಗಳು ಶ್ರಾವಣ ಸೋಮವಾರದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು.

ಚಿಣ್ಣರ ಓಟ, ನೆಗೆತ
ಸಂಭಾಲ್: ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸ್ವಾತಂತ್ರೋತ್ಸವಕ್ಕೆ ಅಣಿಯಾಗುತ್ತಿರುವ ಚಿಣ್ಣರ ಓಟ, ನೆಗೆತ

ಕೋಲ್ಕತ್ತಾದಲ್ಲಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ವರುಣ್ ಗಾಂಧಿ ಅವರನ್ನು NSCBI ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಸ್ವಾಗತಿಸಿದ್ದು ಹೀಗೆ.. PTI Photo by Ashok Bhaumik

ಐಎನ್ಎಸ್ ವಿಕ್ರಾಂತ್ ನೌಕೆ
ಭಾರತದ ಮೊಟ್ಟಮೊದಲ ದೇಸಿ ನಿರ್ಮಾಣವಾದ ವಿಮಾನವಾಹಕ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ಪತ್ನಿ ಎಲಿಜಬೆತ್ ಆಂಟನಿ ಅವರು ಕೊಚ್ಚಿ ಬಂದರಿನಲ್ಲಿ ಸೋಮವಾರ ಲೋಕಾರ್ಪಣೆ ಮಾಡಿದರು.

ಚಾಂಡಿ ರಾಜೀನಾಮೆಗೆ ಆಗ್ರಹ
ತಿರುವನಂತಪುರ: ಸೋಲಾರ್ ಹಗರಣದಲ್ಲಿ ಸಿಲುಕಿರುವ ಕೇರಳ ಸಿಎಂ ಉಮ್ಮನ್ ಚಾಂಡಿ ರಾಜೀನಾಮೆಗೆ ಸಿಪಿಐ(ಎಂ) ನಾಯಕ ಪ್ರಕಾಶ್ ಕಾರಟ್, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಇತರರು ಪ್ರತಿಭಟನಾಕಾರರು ಆಗ್ರಹಿಸಿದರು.

ಅಲಹಾಬಾದ್ ನಲ್ಲಿ
ಅಲಹಾಬಾದ್ : ಶಿವ ದೇಗುಲದಲ್ಲಿ ಭಕ್ತರು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ಪೃಥ್ವಿ -II ಪರೀಕ್ಷೆ
ಬಾಲಸೋರ್: ದೇಸಿ ನಿರ್ಮಿತ ಅಣ್ವಸ್ತ್ರ ಕ್ಷಿಪಣಿ ಪೃಥ್ವಿ -II ಪರೀಕ್ಷೆ ಯಶಸ್ವಿಯಾಗಿದೆ.

ಗಡಿಯಲ್ಲಿ ಯೋಧರು
ಪೂಂಛ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಯೋಧರು ಅವಿರತವಾಗಿ ಗಡಿ ಕಾಯುತ್ತಿದ್ದಾರೆ.

ಬಾಡ್ಮಿಂಟನ್ ಪಟು ಸಿಂಧು
ಹೈದರಾಬಾದ್: ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಪಿವಿ ಸಿಂಧು ಅವರು ಪೋಷಕರ ಜೊತೆ

ನವದೆಹಲಿಯಲ್ಲಿ
ನವದೆಹಲಿ: ಸ್ವಾತಂತ್ರೋತ್ಸವದ ಅಂಗವಾಗಿ ತಾಲೀಮು ಜೋರಾಗಿ ನಡೆದಿದೆ.












Click it and Unblock the Notifications