• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

|
Google Oneindia Kannada News
ಹೈದರಾಬಾದ್, ಆ.11 : ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಕನಸು ಹೊತ್ತಿರುವ ಗುಜರಾತ್‌ ಸಿಎಂ ನರೇಂದ್ರ ಮೋದಿ, ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಹೈದರಾಬಾದ್ ನವಭಾರತ್ ಯುವಭೇರಿ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ.

ಜನರಿಂದ ತುಂಬಿ ತುಳುಕುತ್ತಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಮಾಡುವ ಮೂಲಕ ದೇಶದ ಕೋಟ್ಯಾಂತರ ಯುವಕರಲ್ಲಿ ಸಂಚಲನ ಮೂಡಿಸಿದ್ದಾರೆ. ನರೇಂದ್ರ ಮೋದಿ ತಮ್ಮ ಸುಮಾರು 50 ನಿಮಿಷಗಳ ಭಾಷಣದಲ್ಲಿ ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಪ್ರಗತಿಗಾಗಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.

ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು
*
ತೆಲುಗು ಭಾಷೆಯಲ್ಲಿಯೇ ಭಾಷಣ ಆರಂಭಿಸಿದ ನರೇಂದ್ರ ಮೋದಿ ಆಂಧ್ರಪ್ರದೇಶದ ಜನರಿಗೆ ಅಭಿನಂದನೆ ಸಲ್ಲಿಸಿದರು. ಭಾರತ ದೇಶದ ಅಭಿವೃದ್ಧಿಗೆ ಆಂಧ್ರಪ್ರದೇಶದ ಕೃಷಿ ಹೆಚ್ಚಿನ ಕೊಡುಗೆ ನೀಡಿದೆ ಎಂದು ಮೋದಿ ಬಣ್ಣಿಸಿದರು.

* ಸಮಾಜ ಸೇವೆಗಾಗಿ ಈ ಸಮಾವೇಶವನ್ನು ರಾಜ್ಯ ಬಿಜೆಪಿ ಘಟಕ ಆಯೋಜಿಸಿದೆ. ಆಂಧ್ರಪ್ರದೇಶದ ಯುವಕರು ಸಮಾವೇಶದಲ್ಲಿ ಭಾಗವಹಿಸಿ 5 ರೂ.ಗಳನ್ನು ಉತ್ತರಾಖಂಡ ನರೆ ಸಂತ್ರಸ್ತರಿಗೆ ನೀಡಿದ್ದೀರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

* ಸ್ಟೇಡಿಯಂ ಚಿಕ್ಕದಾಗಿದೆ ಸಾವಿರಾರು ಯುವಕರು ಇದರವೊಳಗೆ ಬರಲು ಸಾಧ್ಯವಾಗಿಲ್ಲ ಅವರಿಗೆ ನನ್ನ ಹೃದಯದಲ್ಲಿ ಸ್ಥಾನ ನೀಡುತ್ತೇನೆ ಎಂದು ಹೇಳುವ ಮೂಲಕ ಮೋದಿ ಯುವಕರಲ್ಲಿ ಸಂಚಲನ ಉಂಟು ಮಾಡಿದರು.

* ಸಾವಿರಾರು ಯುವಕರು ಟಿವಿಯಲ್ಲಿ ನನ್ನನ್ನು ನೋಡುತ್ತಿದ್ದೀರಿ ನನಗೆ ನಿಮ್ಮನ್ನು ನೋಡಲು ಸಾಧ್ಯವಾಗುತ್ತಿಲ್ಲ. ನಾನು ನಿಮ್ಮ ನಗರಕ್ಕೂ ಬರುತ್ತೇನೆ ಎಂದು ಮೋದಿ ಭರವಸೆ ನೀಡಿದರು.

* ಪಾಕಿಸ್ತಾನ ಭಾರತದ ಯೋಧರ ತಲೆ ಕಡಿದಾಗಲೂ ಕೇಂದ್ರ ಸರ್ಕಾರ ಸುಮ್ಮನಿತ್ತು. ಅವರ ವಿರುದ್ಧ ಕೇಂದ್ರ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಮೋದಿ ಯುಪಿಎ ಸರ್ಕಾರವ ಮೇಲೆ ವಾಗ್ದಾಳಿ ನಡೆಸಿದರು.

* ದೇಶವನ್ನು ರಕ್ಷಿಸಬೇಕಾದ ಪ್ರಧಾನ ಮಂತ್ರಿಗಳು ಮೌನಕ್ಕೆ ಶರಣಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಭಾರತ ದೇಶದ ಬಗ್ಗೆ ಕಾಳಜಿಯೇ ಇಲ್ಲ ಎಂದು ಮೋದಿ ಆರೋಪಿಸಿದರು.

* ಕಾಂಗ್ರೆಸ್ ಪಕ್ಷಕ್ಕೆ ತಿರುಪತಿ ವೆಂಕಟೇಶ್ವರ ಒಳ್ಳೆಯ ಬುದ್ದಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ವ್ಯಂಗ್ಯವಾಡಿದರು.

* ಭಾರತದ ಜನರು ಶಾಂತಿ ಪ್ರಿಯರು, ಅವರಿಗೆ ಭದ್ರತೆ ಬೇಕಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ನೀಡುವಲ್ಲಿ ವಿಫಲವಾಗಿದೆ. ವಿದೇಶದಲ್ಲಿರುವ ಕೋಟಿ -ಕೋಟಿ ಕಪ್ಪು ಹಣವನ್ನು ದೇಶಕ್ಕೆ ತರಲು ವಿಫಲವಾಗಿದೆ.

* ಭಾರತ ಯುವಕರ ದೇಶ. ಯುವಕರಿಗೆ ದೇಶದ ಬಗ್ಗೆ ಚಿಂತೆ ಇದೆ. ದೇಶದ ಜನರಿಗೆ ಉದ್ಯೋಗ ಸಿಗದೆ ಕಂಗಾಲಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ವಿರುವ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

* ದೇಶದ ಗಡಿ ಸಮಸ್ಯೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಬಾಂಗ್ಲಾದೇಶದಿಂದ ಒಳ ನುಸುಳುವ ಜನರನ್ನು ತಡೆಯುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದೆ. ದೇಶದ ಜನರಿಗೆ ಭದ್ರತೆ ಬೇಕಾದರೆ ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸಬೇಕು.

* ಅಟಲ್ ಜಿ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದಾಗ ಜನರಿಗೆ ರೊಟ್ಟಿ ದೊರೆಯುತ್ತಿತ್ತು. ಕಾಂಗ್ರೆಸ್ ಸರ್ಕಾರ ಜನರ ಹಿತವನ್ನು ಕಡೆಗಣಿಸಿದೆ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಆರ್ಥಿಕ ತಜ್ಞರು ದೇಶದ ಚುಕ್ಕಾಣಿ ಹಿಡಿದಿದ್ದರೂ ಇಂತಹ ಸ್ಥಿತಿ ಬಂದಿದೆ ಎಂದು ಚಾಟಿ ಬೀಸಿದರು.

* ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದು ಹೋಗಿದೆ. ಡಾಲರ್ ಮತ್ತು ರೂಪಾಯಿ ಮೌಲ್ಯ ದೇಶದ ಹಣಕಾಸು ಸಚಿವರ ವಯಸ್ಸಿಗೆ ಸರಿಸಮವಾಗಿದೆ.

* ಆಂಧ್ರಪ್ರದೇಶದಿಂದ ಹೆಚ್ಚಿನ ಸಂಸದರು ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಆದರೆ, ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನು?. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಆಂಧ್ರಪ್ರದೇಶವನ್ನು ಏಕೆ ಅಭಿವೃದ್ಧಿ ಪಡಿಸಿಲ್ಲ.

* ದೇಶದಲ್ಲಿ ವೈದ್ಯರ ಕೊರತೆ ಇದೆ. ಎಂಬಿಬಿಎಸ್ ಓದಲು ಸರಿಯಾದ ಕಾಲೇಜುಗಳಿಲ್ಲ. ಔಷಧಿ ಉತ್ಪಾದನಾ ಕ್ಷೇತ್ರದಲ್ಲಿ ದೇಶ ಸಾಧನೆ ಮಾಡಿದೆ. ಆದರೆ, ಅದನ್ನು ನೀಡಲು ಸರಿಯಾದ ವೈದ್ಯರಿಲ್ಲ.

* ದೆಹಲಿ ಸರ್ಕಾರ ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ. ಖಜಾನೆ ಖಾಲಿ ಮಾಡಿ, ಮತ ಗಳಿಸುವುದನ್ನು ಕಾಂಗ್ರೆಸ್ ಸರ್ಕಾರ ಆಡಳಿತ ಎಂದು ತಿಳಿದುಕೊಂಡಿದೆ.

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

English summary
The BJP's national election campaign chief Narendra Modi will start the party's campaign for the Lok Sabha elections with a youth rally in Hyderabad. On August 11, Sunday, he addressed huge rally at Lal Bahadur Shastri stadium Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X