'ರಮ್ಯಾ ತಂದೆ ಮಂಡ್ಯದವರೇ, ತಾತ ನಗರಸಭೆ ಅಧ್ಯಕ್ಷರು'
ಮಂಡ್ಯ, ಆಗಸ್ಟ್ 10: ಛೆ! ರಾಜಕೀಯ ನಿಜಕ್ಕೂ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದೆಯಾ!? ಇದ್ಯಾರೋ ಹರದನಹಳ್ಳಿ ಕಟ್ಟೆ ಮೇಲೆ ಕುಳಿತು ಮಾತನಾಡಿಕೊಂಡಿದ್ದರೆ 'ಏನೋ ಬಿಡು ಪರೋಡಿಗಳಿಗೆ ಬೇರೆ ಕೆಲಸ ಇಲ್ಲ ಅನಿಸುತ್ತೆ. ಅದಕ್ಕೇ ಆ ಮಟ್ಟಕ್ಕೆ ಇಳಿದು ಮಾತನಾಡಿಕೊಳ್ಳುತ್ತಿದ್ದಾರೆ' ಎನ್ನಬಹುದಿತ್ತು.
ಆದರೆ 'ಇದೇನಿದು ಒಬ್ಬ ಮಾಜಿ ಜನಪ್ರತಿನಿಧಿ, ಇರೋದರಲ್ಲಿ ಸಜ್ಜನ ಎಂದೇ ಎನಿಸಿಕೊಂಡಿರುವ ಜೆಡಿಎಸ್ ಮಾಜಿ ಶಾಸಕ ಎಂ ಶ್ರೀನಿವಾಸ್ ಹೀಗೆ ಹಗುರವಾದ ಮಾತನ್ನಾಡುವುದೆ? ಅದೂ ಒಬ್ಬ ಹೆಣ್ಣುಮಗಳ ಬಗ್ಗೆ. ಅದೂ ಆಕೆ ದುಃಖ ಸಾಗರದಲ್ಲಿ ಮುಳುಗಿರುವಾಗ' ಎಂದು ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕೆ, ಶ್ರೀನಿವಾಸ್ ಹೇಳಬಾರದಂಥಾದ್ದು ಏನು ಹೇಳಿದರು ಅಂದರೆ... 'ತಂದೆ ಯಾರು, ಯಾವ ಊರು, ಜಾತಿ ಯಾವುದು ಎಂಬುದೇ ಗೊತ್ತಿಲ್ಲದ ಪ್ರನಾಳ ಶಿಶು ಕಾಂಗ್ರೆಸ್ ಪಕ್ಷ ಅಭ್ಯರ್ಥಿ ರಮ್ಯಾ' ಎಂದಿದ್ದಾರೆ.
ಮಂಡ್ಯದಲ್ಲಿ ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ರಾತ್ರಿ ದಿಢೀರನೆ ಪ್ರತಿಭಟನೆ ನಡೆಸಿದರು. ಈ ಮಧ್ಯೆ 'ಮಂಡ್ಯದ ಗಂಡು' ಅಂಬರೀಶ್ ಅವರು ಶ್ರೀನಿವಾಸರನ್ನು ತರಾಟೆಗೆ ತೆಗೆದುಕೊಳ್ಳುತ್ತಾ 'ರಮ್ಯಾ ತಂದೆ ಮಂಡ್ಯದವರೇ, ತಾತ ನಗರಸಭೆ ಅಧ್ಯಕ್ಷರಾಗಿದ್ದರು' ಎಂಬ ಮಾಹಿತಿಯನ್ನು ನೀಡಿದ್ದಾರೆ.
ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ ಕಾನೂನು ಸಮರಕ್ಕೂ ನಾಂದಿ ಹಾಡುವ ಸಾಧ್ಯತೆಯಿದೆ. ಜಿಲ್ಲಾ ಚುನಾವಣಾಧಿಕಾರಿ 'ಭಾಷಣದ ವಿಡಿಯೋ ಅವತರಿಣೆ ಪರಾಮರ್ಶಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇನ್ನು ಜೆಡಿಎಸ್ ಶಾಸಕ ಶ್ರೀನಿವಾಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡವಂತೆ ಕಾಂಗ್ರೆಸ್ ಮಂದಿ ರಮ್ಯಾಗೆ ಸಲಹೆ ನೀಡಿದ್ದಾರೆ. ಈ ಮಧ್ಯೆ, ಮತದಾನದ ವೇಳೆ ಜನತಾ ನ್ಯಾಯಾಲಯಲ್ಲಿ ಇದಕ್ಕೆ ಸೂಕ್ತ ಉತ್ತರ ಸಿಗಲಿದೆ ಎಂದೂ ಕೆಲವರು ಸುಮ್ಮನಾಗಿದ್ದಾರೆ.

'ಒನ್ ಇಂಡಿಯಾ ಕನ್ನಡ' ಓದುಗರ ಆಕ್ಷೇಪ
ಇದನ್ನು ಕೇಳಿ ಕೆಂಡವಾಗಿರುವ ಜನ, ಸಾಕುತಂದೆ ನಾರಾಯಣ್ ಅವರ ನೆನೆಪಿನಲ್ಲಿ ನೋವುಂಡುತ್ತಿರುವ ನಟಿ ರಮ್ಯಾಗೆ ಎಲ್ಲೆಡೆಯಿಂದ ಸಾಂತ್ವನ/ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ. 'ಒನ್ ಇಂಡಿಯಾ ಕನ್ನಡ' ಓದುಗರು ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೆಣ್ಣಿನ ಮೂಲ, ಸಾಗರದ ಆಳ ಅರಿಯುವ ಪ್ರಯತ್ನ ಮಾಡಬಾರದು ಎಂಬ ವಿವೇಕವಾಣಿ ಅರಿಯದಷ್ಟು ವಿವೇಕ/ ಸಂವೇದನೆ ಕಳೆದುಕೊಂಡರಾ ಶಾಸಕ ಎಂ ಶ್ರೀನಿವಾಸ್ ಎಂದು ಜನ ಮರುಗಿದ್ದಾರೆ.

ಶ್ರೀನಿವಾಸ್ ಹಗುರ ಮಾತು ವ್ಯಾಪಕ ಆಕ್ಷೇಪ
ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ನಡೆದ ಬಹಿರಂಗ ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ಮುಖಂಡ ಶ್ರೀನಿವಾಸ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಮಂಡ್ಯ ಲೋಕಸಭಾ ಚುನಾವಣಾ ಹಣಾಹಣಿಯಲ್ಲಿ ಹಗುರ ಮಾತಿನ ಆರೋಪ-ಪ್ರತ್ಯಾರೋಪಕ್ಕೆ ಚಾಲನೆ ಸಿಕ್ಕಿದೆ.
'ನಾಲಿಗೆ ಸಂಸ್ಕೃತಿಯನ್ನು ಹೇಳುತ್ತದೆ ಎನ್ನುವ ಮಾತು ಶ್ರೀನಿವಾಸ್ ವಿಷಯದಲ್ಲಿ ನಿಜವಾಗಿದೆ. ಹೆಣ್ಣು ಮಗಳೊಬ್ಬಳ ಬಗ್ಗೆ ಇಂಥದೊಂದು ಕೆಟ್ಟ ಅಭಿರುಚಿಯ ಹೇಳಿಕೆ ನೀಡುವ ಮೂಲಕ ತಾವೇನು ಎಂಬುದನ್ನು ಸಾಬೀತುಪಡಿಸಿದ್ದಾರೆ' ಎಂದು ಹಲವರು ಛೀಮಾರಿ ಹಾಕಿದ್ದಾರೆ.

ಎಲ್ಲರೂ ರಾಜಕೀಯವಾಗಿ ಪ್ರನಾಳ ಶಿಶುಗಳೇ
ಮಾಜಿ ಶಾಸಕ ಶ್ರೀನಿವಾಸ್ ಗೆ ಅವರದೇ ಆದ ಘನತೆ ಇದೆ. ಇಂಥ ಹೇಳಿಕೆ ನೀಡಿ ಅದಕ್ಕೆ ಚ್ಯುತಿ ತಂದುಕೊಂಡಿದ್ದಾರೆ. ಹೆಣ್ಣು ಮಗಳ ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿರುವುದು ತಪ್ಪು. ಎಲ್ಲರೂ ರಾಜಕೀಯವಾಗಿ ಪ್ರನಾಳ ಶಿಶುಗಳೇ. ಎಲ್ಲರೂ ಎಲ್ ಕೆಜಿಯಿಂದಲೇ ಓದಿಕೊಂಡು ಮೇಲೆ ಬರಬೇಕು. ರಮ್ಯಾ ತಂದೆ-ತಾಯಿ ಮಂಡ್ಯದವರೇ. ಅವರ ತಾತ ಮಂಡ್ಯ ನಗರಸಭೆ ಅಧ್ಯಕ್ಷರಾಗಿದ್ದರು. ಅವರೂ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು ಎಂದು ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ಅಂಬರೀಷ್ ಹೇಳಿದ್ದಾರೆ.

ರಮ್ಯಾಗೆ ನೋವಾಗಿದ್ದರೆ ವೈಯಕ್ತಿಕವಾಗಿ ವಿಷಾದಿಸುತ್ತೇನೆ
ಛೇ ಛೇ ಯಾವುದೇ ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದೂ ತಪ್ಪ. ಹಾಗೆಯೇ ಕೇಳುವುದೂ ಸಹ ತಪ್ಪು. ರಮ್ಯಾ ಮಾತ್ರ ಅಲ್ಲ, ಯಾರೊಬ್ಬರ ಬಗ್ಗೆಯೂ ನಾನೇನೂ ಪ್ರತಿಕ್ರಿಯಿಸುವುದಿಲ್ಲ.
ಮಾಜಿ ಶಾಸಕ ಶ್ರೀನಿವಾಸ್ ಹೇಳಿಕೆ ಸರಿಯಲ್ಲ. ರಮ್ಯಾ ಅವರಿಗೆ ನೋವಾಗಿದ್ದರೆ ವೈಯಕ್ತಿಕವಾಗಿ ವಿಷಾದಿಸುತ್ತೇನೆ. ಮುಂದೆ ಈ ರೀತಿ ಹೇಳಿಕೆ ನೀಡದಂತೆ ಜೆಡಿಎಸ್ ನಾಯಕರು ಎಚ್ಚರಿಕೆ ವಹಿಸಬೇಕು - ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ವಿಳಾಸವೇ ಇಲ್ಲದ ಹುಡುಗಿ
ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎರಡೂ ಕ್ಷೇತ್ರಗಳಲ್ಲಿ ಒಬ್ಬ ಯೋಗ್ಯ ಅಭ್ಯರ್ಥಿ ಸಿಗಲಿಲ್ಲವೆಂದರೆ ನಮಗೆ ಕನಿಕರವಾಗುತ್ತೆ. ನಮಗೆ ಬೇರೆಯವರ ಬಗ್ಗೆ ಮಾತನಾಡುವ ಚಾಳಿಯಿಲ್ಲ. ಪಾಪ, ವಿಳಾಸವೇ ಇಲ್ಲದ ಹುಡುಗಿಯನ್ನು ದುಂಬಾಲು ಬಿದ್ದು ತಂದು ನಿಲ್ಲಿಸಿದ್ದೀರಿ. ಶ್ರೀರಾಮುಲು ಕೂಡ ಸಿನಿಮಾ ನಟಿಯನ್ನು ಕರೆದುಕೊಂಡು ಹೋಗಿ ಚುನಾವಣೆಗೆ ನಿಲ್ಲಿಸಿಕೊಂಡಿದ್ದರು. ಠೇವಣಿ ಕೂಡಾ ಉಳಿಯಲಿಲ್ಲ. ಇಲ್ಲೂ ಹಾಗೇ ಆಗುತ್ತೆ.- ಎಚ್ ಡಿ ರೇವಣ್ಣ, ಮಾಜಿ ಸಚಿವ

ಕುಮಾರಣ್ಣನ ಬಗ್ಗೆನು ತುಂಬಾ ಗೊಂದಲ ಇದೆ
ಸಾರ್ವಜನಿಕವಾಗಿ ಜನರ ಮನದಲ್ಲಿ ಗೊಂದಲ ಮೂಡುವಂತೆ ಮಾಡಿದ್ದು ರಮ್ಯ ಅವರೇ ! ಇದಕ್ಕೆಲ್ಲ ಉತ್ತರ ಅವರೇ ನೀಡಬೇಕು ಅಷ್ಟೇ ! ಇನ್ನು ಅವಕಾಶವಾದಿಗಳು ಇಂತಹ ಸಮಯವನ್ನು ದುರುಪಯೋಗಪಡಿಸಿಕೊಳ್ಳುವುದು ತಪ್ಪು ! ಶ್ರೀನಿವಾಸ ಅವರೇ ತಮ್ಮ ನಾಯಕ ಕುಮಾರಣ್ಣನ ಬಗ್ಗೆನು ಜನರಲ್ಲಿ ತುಂಬಾ ಗೊಂದಲ ಇದೆ ! ಸ್ವಲ್ಪ ಬಿಡಿಸಿ ಹೇಳಿ ರಾಜ್ಯದ ಜನಕ್ಕೆ ಅನುಕೂಲ ಆಗುತ್ತೆ ! ಎಂದು 'ಒನ್ ಇಂಡಿಯಾ ಕನ್ನಡ' ಕಾಯಂ ಓದುಗರಾದ Raghavendra Navada ಕೇಳಿದ್ದಾರೆ.
ಶ್ರೀನಿವಾಸ್ ನಿಮ್ ತಂದೆ ಹೆಸರು ನಿಮಗೆ ಗೊತ್ತ ? ಗೊತ್ತು ಮಾಡ್ಕೊಂಡ್ ಏನು ಮಹಾ ಸಾಧನೆ ಮಾಡಿದ್ದಿರಿ? ಎಂದು ಮತ್ತೊಬ್ಬರು ಕೇಳಿದ್ದಾರೆ.

ರಮ್ಯಾ ತಂದೆ, ಜಾತಿ ಕಟ್ಟಿಕೊಂಡು ಇವರಿಗೇನಾಗಬೇಕು
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು. ರಮ್ಯಾ ತಂದೆ, ಜಾತಿ ಕಟ್ಟಿಕೊಂಡು ಇವರಿಗೇನಾಗಬೇಕು. ಇಂತಹ ಕೀಳುಮಟ್ಟದ ಹೇಳಿಕೆಗಳು ಶೋಭೆ ತರುವುದಿಲ್ಲ.- ಉಮಾಶ್ರೀ. ಹಿರಿಯ ನಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ.

ಮಂಡ್ಯ ಚುನಾವಣಾಧಿಕಾರಿ ಏನನ್ನುತ್ತಾರೆ?
ಮಾಜಿ ಶಾಸಕ ಶ್ರೀನಿವಾಸ್ ಭಾಷಣವನ್ನು ಪರಿಶೀಲಿಸಲು ವಿಡಿಯೋ ಪ್ರತಿ ಒದಗಿಸುವಂತೆ ಶ್ರೀರಂಗಪಟ್ಟಣ ತಹಸೀಲ್ದಾರ್ ಅವರಿಗೆ ಸೂಚಿಸಿದ್ದೇನೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಿಎನ್ ಕೃಷ್ಣಯ್ಯ ತಿಳಿಸಿದ್ದಾರೆ. ಪ್ರಜಾಪ್ರತಿನಿಧಿ ಕಾಯಿದೆಯಡಿ ಅಶ್ಲೀಲ/ಅವಹೇಳನಕಾರಿ/ ಕೀಳುಮಟ್ಟದ/ ವೈಯಕ್ತಿಕ ನಿಂದನೆಗೆ ಅವಕಾಶವಿಲ್ಲ. ವಿಡಿಯೋ ದಾಖಲೆ ಪರಿಶೀಲಿಸಿದ ಬಳಿಕ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications