ಆಚಾರ್ಯ ವಿದ್ಯಾಸಂಸ್ಥೆಯಲ್ಲಿ ವಿಶೇಷ ಸಮಾವೇಶ
ಬೆಂಗಳೂರು, ಜು.29: ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್ ಹಾಗೂ ಜಾಂಗ್ ಜಿಯಾನ್ ಮ್ಯಾಥೆಮೆಟಿಕಲ್ ಸೊಸೈಟಿ ಸಹಯೋಗಯೊಂದಿಗೆ ಗಣಿತ GAM 2013 ಸಮಾವೇಶವನ್ನು ಆಯೋಜಿಸಿದೆ.
JANGJEON ಮ್ಯಾಥೆಮೆಟಿಕ್ ಸೊಸೈಟಿ ಆಯೋಜಿಸಿರುವ 'ಗ್ಲೋಬಲ್ ಅಡ್ವಾನ್ಸ್ ಮೆಂಟ್ ಆಫ್ ಮ್ಯಾಥೆಮೆಟಿಕ್ಸ್ GAM 2013 26ನೇ ಸಮಾವೇಶವಾಗಿದೆ. ಆಗಸ್ಟ್ 1 ರಂದು ಬೆಂಗಳೂರಿನ ಹೆಸರಘಟ್ಟ ರಸ್ತೆಯ ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ ಈ ಸಮಾವೇಶ ನಡೆಯಲಿದೆ.
ಗಣಿತ ವಿಷಯದಲ್ಲಿ ಆಗಿರುವ ಸಂಶೋಧನೆ ಹಾಗೂ ಅನ್ವಯ ಅಭಿವೃದ್ಧಿ ಬಗ್ಗೆ ಬೆಳಕು ಚೆಲ್ಲಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಗಣಿತದ ಬಗ್ಗೆ ಉಪನ್ಯಾಸ, ಚರ್ಚೆ ಹಾಗೂ ಪ್ರಾತ್ಯಕ್ಷಿಕೆಗಳಲ್ಲದೆ ಸಂಶೋಧನಾ ವರದಿಗಳನ್ನು ಈ ಸಮಾವೇಶದಲ್ಲಿ ಕಾಣಬಹುದು.

ವಿವಿಧ ದೇಶಗಳಿಂದ ಸುಮಾರು 32ಕ್ಕೂ ಅಧಿಕ ಪ್ರತಿನಿಧಿಗಳು ವಿವಿಧ ವಿಷಯಗಳ ಮೇಲೆ ತಮ್ಮ ಪ್ರಬಂಧ ಮಂಡಿಸಲಿದ್ದಾರೆ. ಇದರ ಜೊತೆಗೆ 150 ಅಧಿಕ ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ದೇಶಗಳ ಗಣಿತಜ್ಞ ಸಮಾವೇಶ ಆಯೋಜನೆ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಗಣಿತ ಸಂಶೋಧಕರಿಗೆ ತಮ್ಮ ಅಭಿಪ್ರಾಯ ಹಂಚಿಕೆಗೆ ಸೂಕ್ತ ವೇದಿಕೆ ಒದಗಿಸಲಾಗುತ್ತಿದೆ.
1996ರಲ್ಲಿ ಡಾಕ್ಟರ್ ಟೆಕ್ಯಾನ್ ಕಿಮ್ ಅವರಿಂದ ಆರಂಭವಾದ JANGJEON ಮ್ಯಾಥೆಮೆಟಿಕ್ ಸೊಸೈಟಿ (JMS ) ಗಣಿತ ಸಂಶೋಧನೆ ವಿಷಯದಲ್ಲಿ ಮುಕ್ತವಾದ ಸಂವಾದ ಹಾಗೂ ಸಹಕರ ನೀಡುತ್ತಾ ಬಂದಿದೆ. ಹಲವಾರು ವಿದ್ವಾಂಸರು, ಗಣಿತಜ್ಞರು ವಿವಿಧ ರೀತಿಯಲ್ಲಿ ಮನುಕುಲದ ಏಳಿಗೆಗೆ ಶ್ರಮಿಸಿದ್ದಾರೆ.
ಈ ಸಮಾವೇಶದಲ್ಲಿ ಬೀಜ ಗಣಿತ, ಅನ್ವಯ ಗಣಿತ, ಅಂಕ ಗಣಿತ, ಕಂಪ್ಯೂಟರ್ ನೆಟ್ವರ್ಕ್, ಫಂಕ್ಷನಲ್ ಅನಾಲಿಸಿಸ್, ಭೌತ ಗಣಿತ, ಭೌತ ರಸಾಯನ ಶಾಸ್ತ್ರ, ಡಿಫೆರೆಂಟ್ ಈಕ್ವೆಷನ್ ,ನ್ಯೂಮೆರಿಕಲ್ ಅನಾಲಿಸಸ್ ಹಾಗೂ ಕಾಂಬಿನಾಟ್ಟ್ರಿಕ್ಸ್ ಮುಂತಾದ ವಿಷಯಗಳ ಮೇಲೆ ಚರ್ಚೆ, ಸಂವಾದ ನಡೆಯಲಿದೆ. ದೇಶ, ವಿದೇಶದ ಗಣಿತಜ್ಞರು ಒಂದೆಡೆ ಸೇರಿ ಸಂವಾದ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಮಾವೇಶದ ಅಧ್ಯಕ್ಷ, ವಿದ್ಯಾಸಂಸ್ಥೆ ಪ್ರಿನಿಪಾಲ್ ಪ್ರೊಫೆಸರ್ ಗುರುನಾಥ್ ರಾವ್ ವೈದ್ಯ ಹೇಳಿದ್ದಾರೆ.












Click it and Unblock the Notifications