ಫುಟ್ಬೋರ್ಡ್ ಪ್ರಯಾಣ: ಬಿಟಿಎಸ್ ಕಂಡಕ್ಟರಿಗೆ ಥಳಿತ

ಅಷ್ಟೇ ಆ ಬಿಸಿರಕ್ತದ ಪರೋಡಿಗಳು ಸೀದಾ ಕಂಡಕ್ಟರ್ ಮೇಲೆ ದಾಳಿ ಮಾಡಿದ್ದಾರೆ. ಅವರಿಗೆ ಸಮಾ ಥಳಿಸಿದ್ದಾರೆ. ಅಷ್ಟೇ ಅಲ್ಲ. ಕಂಡಕ್ಟರ್ ಬಳಿಯಿದ್ದ 3,900 ರೂ. ಮೊತ್ತದ ದೈನಂದಿನ ಪಾಸುಗಳನ್ನೂ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ BMTC ಬಸ್ಸಿನಲ್ಲಿ ಕಳೆದ ಶನಿವಾರ ನಡೆದ ಘಟನೆ. ಸ್ಥಳ ವಿದ್ಯಾರಣ್ಯಪುರ. ಮೆಜಿಸ್ಟಿಕ್ ಮತ್ತು ವಿದ್ಯಾರಣ್ಯಪುರ ನಡುವೆ ಸಂಚರಿಸುವ ರೂಟ್ ನಂ. 276 ಬಸ್ಸಿನಲ್ಲಿ ಸಂಜೆ 4 ಗಂಟೆಯಲ್ಲಿ ಈ ಘಟನೆ ನಡೆದಿದೆ.
ಆದರೆ ಪೆಟ್ಟು ತಿಂದರೂ ಸಮಯ ಪ್ರಜ್ಞೆ ಮೆರೆದಿರುವ ಕಂಡಕ್ಟರ್ ಟಿಎಂ ಮಲ್ಯರಾಜು ಅವರು ನಾಲ್ವರು ಪರೋಡಿಗಳ ಪೈಕಿ ಒಬ್ಬನ ಸ್ಟೂಡೆಂಟ್ ಪಾಸನ್ನು ಕಿತ್ತಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸ್ಟೂಡೆಂಟ್ ಪಾಸು ಪವನ್ ಕೆ ಎಂಬುವವನದ್ದಾಗಿದೆ.
ಆದರೆ ಕಂಡಕ್ಟರ್ ಮಲ್ಯರಾಜು ನೀಡಿದ ದೂರು/ ಮಾಹಿತಿಯನ್ನಾಧರಿಸಿ ಪೊಲೀಸರು ಪವನ್ ಗಾಗಿ ಹುಡಕಾಟ ನಡೆಸಿದಾಗ ಆತ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ಮನವರಿಕೆಯಾಗಿದೆ. ಆದರೆ ಹಾಗೆ ಕಂಡಕ್ಟರ್ ಮಲ್ಯರಾಜು ಮೇಲೆ ದಾಳಿ ಮಾಡಿದವರು ವಿದ್ಯಾರಣ್ಯಪುರದಲ್ಲಿರುವ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಎಂಬುದು ಪಕ್ಕಾ ಆಗಿದೆ. ಆದರೆ ನಿರ್ದಿಷ್ಟವಾಗಿ ದಾಳಿ ಮಾಡಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.
ಬಸ್ಸು ಸದರಿ ಕಾಲೇಜಿನ ಸ್ಟಾಪ್ ಬಳಿ ಬರುತ್ತಿದ್ದಂತೆ ವಿದ್ಯಾರ್ಥಿಗಳು ಕಂಡಕ್ಟರ್ ಮಲ್ಯರಾಜು ಅವರನ್ನು ಹೊರಕ್ಕೆ ಎಳೆದು ಮನಸೋ ಇಚ್ಛೆ ಥಳಿಸಿ, ಪರಾರಿಯಾಗಿದ್ದಾರೆ. ಮಲ್ಯರಾಜು ಸದ್ಯಕ್ಕೆ ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ವಿದ್ಯಾರ್ಥಿಗಳ ಹುಡುಕಾಟದಲ್ಲಿದ್ದಾರೆ.












Click it and Unblock the Notifications