ಹೆಂಡತಿಯನ್ನು ತುಂಡರಿಸಿ ಬಾವಿಗೆಸೆದ ಪತಿ ಬಂಧನ

ಗುರುವಾರ ಬೆಳಗ್ಗೆ ಕೋಲಾರದ ನಂದಂಬಳ್ಳಿ ಗ್ರಾಮದಲ್ಲಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃಷ್ಣಪ್ಪ ಎಂಬ ವ್ಯಕ್ತಿಯನ್ನು ಬಂಧಿಸಿದ ಪೊಲೀಸರಿಗೆ ಈ ಅಮಾನವೀಯ ಕೃತ್ಯದ ಬಗ್ಗೆ ಮಾಹಿತಿ ದೊರಕಿದೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಆರೋಪಿ ಕೃಷ್ಣಪ್ಪನನ್ನು ಬಂಧಿಸುವ ಮೂಲಕ ಕೆಲವು ತಿಂಗಳ ಹಿಂದೆ ನಡೆದಿದ್ದ ನಂದಂಬಳ್ಳಿ ಗ್ರಾಮದ ಸುಶೀಲಮ್ಮ(35) ಕೊಲೆ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದಾರೆ. ಕೃಷ್ಣಪ್ಪ ಕೊಲೆ ಮಾಡಿರುವ ರೀತಿ ಕೇಳಿ ಪೊಲೀಸರೇ ಒಮ್ಮೆ ಬೆಚ್ಚಿ ಬಿದ್ದಿದ್ದಾರೆ.
ಆಸ್ತಿ ಕೇಳಿದ್ದಕ್ಕೆ ಪತ್ನಿ ಕೊಂದ : ಕೊಲೆ ಯಾಗಿರುವ ಸುಶೀಲಮ್ಮ ಮತ್ತು ಕೃಷ್ಣಪ್ಪ ಗಂಡ ಹೆಂಡತಿಯಾಗಿದ್ದರು. ಇಬ್ಬರು 12 ವರ್ಷ ಒಟ್ಟಿಗೆ ಸಂಸಾರ ಮಾಡಿದ್ದರು. ಆದರೆ, ಕೃಷ್ಣಪ್ಪನ ಕಾಟ ಸಹಿಸಲಾರದೆ ಸುಶೀಲಮ್ಮ ಆತನಿಂದ ದೂರವಾಗಿದ್ದಳು.
ನನ್ನಿಂದ ಬೇರೆಯಾದ ಸುಶೀಲಮ್ಮ ಬೇರೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು ಎಂದು ಆರೋಪಿ ಕೃಷ್ಣಪ್ಪ ಪೊಲೀಸರಿಗೆ ಹೇಳಿದ್ದಾನೆ. ನಾವು ಬೇರೆಯಾದರೂ ಕಾನೂನಿನ ಪ್ರಕಾರ ವಿಚ್ಛೇದನ ಪಡೆದಿರಲಿಲ್ಲ ಎಂದು ಆತ ತಿಳಿಸಿದ್ದಾನೆ.
ಆದರೆ ಕೆಲವು ತಿಂಗಳುಗಳ ಹಿಂದೆ ಕೃಷ್ಣಪ್ಪನನ್ನು ಭೇಟಿ ಮಾಡಿದ್ದ ಸುಶೀಲಮ್ಮ ಇಬ್ಬರು ವಿಚ್ಛೇದನ ಪಡೆದುಕೊಳ್ಳೋಣ. ನನಗೆ ಜೀವನಾಂಶಕ್ಕಾಗಿ ಆಸ್ತಿಯಲ್ಲಿ ಪಾಲು ನೀಡಬೇಕೆಂದು ಜಗಳವಾಡಿದ್ದಳು.
ಇದರಿಂದ ಕೋಪಗೊಂಡ ಕೃಷ್ಣಪ್ಪ ಆಕೆಯನ್ನು ಕೊಲೆ ಮಾಡಿ ದೇಹವನ್ನು ತುಂಡು-ತುಂಡು ಮಾಡಿ ಕೆಟ್ಟು ಹೋಗಿದ್ದ ಬೋರ್ ವೆಲ್ ನಲ್ಲಿ ಹಾಕಿದ್ದ. ಸುಶೀಲಮ್ಮ ನಾಪತ್ತೆ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಗುರುವಾರ ಕೃಷ್ಣಪ್ಪನನ್ನು ಬಂಧಿಸಿದ್ದಾರೆ.












Click it and Unblock the Notifications