ಚಿತ್ರಗಳಲ್ಲಿ ಕಂಡ ಸೋಮವಾರದ ಸುದ್ದಿಗಳು

ಪಶ್ಚಿಮ ಬಂಗಾಳ, ಜು.22 : ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಪಂಚಾಯಿತು ಚುನಾವಣೆ ಸೋಮವಾರ ನಡೆಯಿತು. ರಾಜ್ಯದಲ್ಲಿ ಚುನಾವಣೆ ವೇಳೆ ವ್ಯಾಪಕ ಹಿಂಸಾಚಾರ ಸಂಭವಿಸಿದ್ದರಿಂದ ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೃಷ್ಣ ನಗರ ಜಿಲ್ಲೆಯಲ್ಲಿ ಯೋಧನೊಬ್ಬ ಕಾವಲು ನಿಂತಿದ್ದು, ಕಂಡಿದ್ದು ಹೀಗೆ.

ಸಿಎಂ ಭೇಟಿ : ಜಳಪ್ರಳಯದ ನಂತರ ಉತ್ತರಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಸೋಮವಾರ ಕೇದಾರನಾಥ ದೇವಾಲಯಕ್ಕೆ ತೆರಳಿದ್ದರು. ಜಲಪ್ರಯಕ್ಕೆ ಸಿಲುಕಿದ್ದ ಉತ್ತರಖಂಡ ರಾಜ್ಯ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಸೋಮವಾರ ದೇಶದಲ್ಲಿ ಗುರುಪೌರ್ಣಿಮೆ ಸಂಭ್ರಮ. ಉತ್ತರಪ್ರದೇಶದ ಮುರದಾಬಾದ್ ನಲ್ಲಿ ಸೋಮವಾರ ಶಾಲಾ ಮಕ್ಕಳು ಶಿಕ್ಷಕರಿಗೆ ಆರತಿ ಬೆಳಗಿ ನಮನ ಸಲ್ಲಿಸುವ ಮೂಲಕ ಗುರುಪೌರ್ಣಿಮೆಯನ್ನು ಆಚರಿಸಿದರು.

ಖಾನ್ ಗಳ ಸಮಾಗಮ : ತಮ್ಮ ನಡುವಿನ ವೈರತ್ವ ಮರೆತು ಒಂದಾಗಿರುವ ಬಾಲಿವುಡ್ ದಿಗ್ಗಜರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬಾಬಾ ಸಿದ್ದಿಕ್ಕಿ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಕ್ಯಾಮರಾ ಕಣ್ಣಿಗೆ ಸರೆಸಿಕ್ಕಿದ್ದರು.

ಮುಗಿಯಿತು ಚುನಾವಣೆ

ಮುಗಿಯಿತು ಚುನಾವಣೆ

ಪಶ್ಚಿಮ ಬಂಗಾಳದ 4ನೇ ಹಂತದ ಪಂಚಾಯತ್ ಚುನಾವಣೆ ಸೋಮವಾರ ಮುಕ್ತಾಯಗೊಂಡಿದೆ. ಹಿಂಸಾಚಾರದ ಕಾರಣ ಚುನಾವಣೆಗೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೃಷ್ಣರಾಜ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಭದ್ರತಾ ಸಿಬ್ಬಂದಿ ಕಂಡಿದ್ದು ಹೀಗೆ.

ಕೇದಾರನಾಥ ಕಾಪಾಡು

ಕೇದಾರನಾಥ ಕಾಪಾಡು

ಜಲಪ್ರಳಯದ ನಂತರ ಉತ್ತರಾಖಂಡ ಸಿಎಂ ವಿಜಯ್ ಬಹುಗುಣ ಸೋಮವಾರ ಕೇದಾರನಾಥ ದೇವಾಲಯಕ್ಕೆ ತೆರಳಿದ್ದರು. ಉತ್ತರಾಖಂಡ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದೆ.

ಮೀಸಲಾತಿ ಆಕ್ರೋಶ

ಮೀಸಲಾತಿ ಆಕ್ರೋಶ

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ರಾಜ್ಯ ಲೋಕಸೇವಾ ಆಯೋಗದ ಮೀಸಲಾತಿ ವಿರುದ್ಧ ಸಿಡಿದು ನಿಂತಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಆಕ್ರೋಶಕ್ಕೆ ಸಿಲುಕಿದ ಕಾರು ಜಖಂಗೊಂಡಿತು.

ಗುರುವಿಗೆ ನಮಿಸಿರೋ

ಗುರುವಿಗೆ ನಮಿಸಿರೋ

ದೇಶದಲ್ಲಿ ಸೋಮವಾರ ಗುರುಪೌರ್ಣಿಮೆಯನ್ನು ಆಚರಿಸಲಾಯಿತು. ಮುರಾದಾಬಾದ್ ನ ಶಾಲೆಯೊಂದರಲ್ಲಿ ಮಕ್ಕಳು ಶಿಕ್ಷಕರಿಗೆ ಆರತಿ ಎತ್ತಿ ಗುರುವಂದೆ ಸಲ್ಲಿಸಿದರು.

ಒಂಗಾಗೋಣ ಬಾ...!

ಒಂಗಾಗೋಣ ಬಾ...!

ತಮ್ಮ ಹಳೆಯ ದ್ವೇಷಗಳನ್ನು ಬದಿಗೊತ್ತಿ ಮತ್ತೆ ಒಂದಾದ ಬಾಲಿವುಡ್ ನಟರಾದ ಸಲ್ಮಾನ್ ಮತ್ತು ಶಾರುಖ್ ಖಾನ್, ಮುಂಬೈನಲ್ಲಿ ಬಾಬಾ ಸೈಯಿದ್ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಕ್ಯಾಮಾರಾಗೆ ಫೋಸ್ ನೀಡಿದ್ದು ಹೀಗೆ.

ಈಗ ಎಲ್ಲವೂ ಶಾಂತ

ಈಗ ಎಲ್ಲವೂ ಶಾಂತ

ಶ್ರೀನಗರದ ಲಾಲ್ ಚೌಕದಲ್ಲಿ ಸೋಮವಾರ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ನಾಲ್ಕು ದಿನಗಳ ಕಾಲ ಶ್ರೀನಗರದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಸೋಮವಾರ ನಿಷೇಧಾಜ್ಞೆ ತೆರವುಗೊಳಿಸಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಅರತಿ ಬೆಳಗಿರೋ

ಅರತಿ ಬೆಳಗಿರೋ

ಗುರುಪೌರ್ಣಿಮೆ ಅಂಗವಾಗಿ ಅಲಹಾಬಾದ್ ನ ತ್ರಿವೇಣಿ ಸಂಗಮದಲ್ಲಿ ಭಕ್ತರೊಬ್ಬರು ನದಿಗೆ ಆರತಿ ಬೆಳಗುವಾಗ ಕಂಡಿದ್ದು ಹೀಗೆ.

ಪೊಲೀಸರ ಹದ್ದಿನ ಕಣ್ಣು

ಪೊಲೀಸರ ಹದ್ದಿನ ಕಣ್ಣು

ದೇಶದ ವಿಮಾನ ನಿಲ್ದಾಣಗಳನ್ನು ಸ್ಪೋಟಿಸುವ ಬೆದರಿಕೆ ಹಿನ್ನಲೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಮಾನ ನಿಲ್ದಾಣದ ಬಳಿ ಪೊಲೀಸರು ಪಹರೆ ಕಾಯುತ್ತಿದ್ದದ್ದು, ಕ್ಯಾಮರಾಗೆ ಕಣ್ಣಿನಲ್ಲಿ ಸೆರೆಯಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+