ರಂಜಾನ್: ಸರಳುಗಳ ಹಿಂದೆ ಅವ್ರೂ ಇವ್ರೂ ಭಾಯಿ ಭಾಯಿ

ರಂಜಾನ್ ಹಬ್ಬ ಅದಕ್ಕಿರುವ ಪಾತಿವ್ರತೆಯೇ ಅಂತಹುದು. ಏನಪ ಅಂದರೆ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ಪೈಕಿ 160 ಮಂದಿ ಮುಸಲ್ಮಾನರೂ ಇದ್ದಾರೆ. ಇವರೆಲ್ಲ ಈಗ ರಂಜಾನ್ ಉಪವಾಸ ವ್ರತದಲ್ಲಿ ತೊಡಗಿದ್ದಾರೆ. ಅದರಲ್ಲೇನೂ ವಿಶೇಷ ಇಲ್ಲ. ಆದರೆ ಇವರಿಗೆ 20 ಮಂದಿ ಹಿಂದೂಗಳೂ ಸಾಥ್ ನೀಡಿದ್ದಾರೆ.
ಸುಮಾರು 20 ಮಂದಿ ಹಿಂದೂ ಕೈದಿಗಳು ರಂಜಾನ್ ಪ್ರಯುಕ್ತ ತಾವೂ ಉಪವಾಸ ಆಚರಿಸುತ್ತೇವೆ. ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಅದನ್ನು ತಮಗೆ ಅತೀವ ಸಂತೋಷವಾಯ್ತು; ಹೃದಯ ತುಂಬಿ ಬಂತು ಎಂದು ಜೈಲು ಸೂಪರಿಂಟೆಂಡೆಂಟ್ ಕೃಷ್ಣ ಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಒಟ್ಟು 800 ಮಂದಿ ಮುಸ್ಲಿಮರು ಇದ್ದಾರೆ.
ತಕ್ಷಣ ಇದಕ್ಕೆ ಸ್ಪಂದಿಸಿರುವ ಜೈಲು ಅಧಿಕಾರಿ ಕೃಷ್ಣ ಕುಮಾರ್ ಅವರು ಎಲ್ಲ 180 ಮಂದಿಗೂ single barrack ಒದಗಿಸಿದ್ದಾರೆ. ಮತ್ತು ಉಪವಾಸದಲ್ಲಿರುವವರಿಗೆ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಊಟ ಒದಗಿಸಲು ಆಹಾರ ಪದಾರ್ಥಗಳನ್ನು ಒದಗಿಸಿದ್ದಾರೆ. ಜೈಲು ಆವರಣದಲ್ಲಿ ಮಸೀದಿಯೂ ಇದೆ. ಮುಸ್ಲಿಂ ಬಾಂಧವರಿಗೆ ಶುಭ ಕೋರಿ ಇಫ್ತಾರ್ ಕೂಟವನ್ನೂ ಆಯೋಜಿಸುವುದಾಗಿ ಕೃಷ್ಣ ಕುಮಾರ್ ತಿಳಿಸಿದ್ದಾರೆ.












Click it and Unblock the Notifications