ಮಹಾರಾಷ್ಟ್ರದಲ್ಲಿ ಮಳೆ: ಚಿಕ್ಕೋಡಿ ಗ್ರಾಮಗಳು ಜಲಾವೃತ

Belgaum chikodi 6 villages on the verge of submerge
ಬೆಳಗಾವಿ, ಜುಲೈ1‌3: ಒರಿಸ್ಸಾದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ ಚಿಕ್ಕೊಡಿ ತಾಲೂಕಿನಲ್ಲಿ 6 ಗ್ರಾಮಗಳು ಜಲಾವೃತವಾಗಿದೆ. ಈ ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು, ಜನಭಯಭೀತರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಅನೇಕ ನದಿಗಳು ಮತ್ತು ಜಲಾಶಗಳು ತುಂಬಿಹರಿಯುತ್ತಿವೆ. ಪ್ರವಾದ ನೀರು ಕರ್ನಾಟಕದತ್ತ ನುಗ್ಗುತ್ತಿದ್ದು, ಚಿಕ್ಕೋಡಿ ಗ್ರಾಮಗಳು ಮುಳುಗಡೆಯ ಭೀತಿಯಲ್ಲಿವೆ.

ಮುಂಬೈನಲ್ಲಂತೂ ಮೂರು ದಿನಗಳಿಂದ ವಿಪರೀತವೆನಿಸುವಷ್ಟು ಮಳೆಯಾಗುತ್ತಿದ್ದು ಶುಕ್ರವಾರ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮುಂಬೈ ಮಹಾನಗರ ಸಂಪೂರ್ಣ ಜಲಾವೃತ್ತವಾಗಿದೆ. ಕೊಂಕಣ ಭಾಗಗಳು ಮತ್ತು ಥಾಣೆಯಲ್ಲಿಯೂ ಭಾರಿ ಮಳೆಯಾಗುತ್ತಿದೆ.

ದಿನಾ 80 ಲಕ್ಷ ಮಂದಿ ಸಂಚರಿಸುವ ಮುಂಬೈ ಉಪನಗರ ರೈಲ್ವೆ ಸಂಚಾರವು ಅಸ್ತವ್ಯಸ್ತಗೊಂಡಿದೆ. ಮುಂಬೈ-ಅಹಮದಾಬಾದ್ ಮತ್ತು ಮುಂಬೈ ನವದೆಹಲಿ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.

ಈ ಮಧ್ಯೆ, ಕರ್ನಾಟಕದಲ್ಲಿ ಇನ್ನೂ ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. [ಪ್ರಕೃತಿ ಸೊಬಗು ತುಂಬಿದ ಮಲೆನಾಡ ಮಳೆಯ ಚಿತ್ರ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+