ಇಷ್ಟಕ್ಕೂ RPA ಸವಲತ್ತು ಇತ್ತಾದರೂ ಏಕೆ ಗೊತ್ತಾ !?
ಬೆಂಗಳೂರು, ಜು.11: ಆಗಿನ್ನೂ ಭಾರತದ ಸಂಸತ್ತು, ರಾಜ್ಯ ಸರಕಾರಿ ಆಡಳಿತಗಳು ಬ್ರಿಟೀಷರ ಆಡಳಿತದಿಂದ ಮುಕ್ತಿ ಪಡೆದಿದ್ದ ಕಾಲ. ಆ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಬೇಕಾದವರು ಬ್ರಿಟೀಷರ ದಬ್ಬಾಳಿಕೆ/ದೌರ್ಜನ್ಯದಡಿ ನಲುಗಿದವರು. ಮತ್ತು ಬ್ರಿಟೀಷರು ಅಂತಹ ಸಂಭಾವ್ಯ ಜನಪ್ರತಿನಿಧಿಗಳನ್ನು ಉದ್ದೇಶ ಪೂರ್ವಕವಾಗಿ ಜೈಲು ಶಿಕ್ಷೆಗೆ ಗುರಿಪಡಿಸುತ್ತಿತ್ತು.
ಮುಂದೆ ತಮ್ಮ ಆಡಳಿತ ಕಾಲ ಕೊನೆಗೊಂಡು ಇದೇ ಜನಪ್ರತಿನಿಧಿಗಳು ಆಡಳಿತ ಚುಕ್ಕಾಣಿ ಹಿಡಿಯಲು ಬಂದರೆ ಜೈಲು ಶಿಕ್ಷೆಗೆ ಗುರಿಯಾದವರು ಚುನಾವಣೆಗೆ ಸ್ಪರ್ಧಸುವಂತಿಲ್ಲ ಎಂದು ಸಬೂಬು ಹೇಳಿ ಅವರನ್ನು ಅವಕಾಶವಂಚಿತರಾಗಿಸಬಹುದು ಎಂಬ ದುರುದ್ದೇಶ ಬ್ರಿಟೀಷರದ್ದಾಗಿತ್ತು.

ಆದರೆ ಈ hideden agendaವನ್ನು ಅರಿತರ ಸ್ವಾತಂತ್ರ್ಯೋತ್ತರದ ಜನನಾಯಕರು ಆ ಸಂದರ್ಭದಲ್ಲಿ ಅನಿವಾರ್ಯವಾಗಿ/ ಅತ್ಯಗತ್ಯವಾಗಿ RPAಗೆ ತಿದ್ದುಪಡಿ ತಂದರು. (ಬ್ರಿಟೀಷರಿಂದ) ಜೈಲು ಶಿಕ್ಷೆಗೊಳಗಾಗಿದ್ದರೂ ಚುನಾವಣೆಗೆ ನಿಲ್ಲಲಿ ಎಂಬ ಸದುದ್ದೇಶವಿತ್ತು.
ಆದರೆ ಮುಂದೆ... ಅಂದರೆ ನಿನ್ನೆಯವರೆಗೂ ನಮ್ಮ ಜನಪ್ರತಿನಿಧಿಗಳು ಅದೇ RPA ಅಸ್ತ್ರವನ್ನು ಬಳಸುತ್ತಾ, ಜೈಲು ಶಿಕ್ಷೆಗೊಳಗಾಗಿದ್ದರೂ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಮುಂದೆ ಹಾಗಾಗುವುದಿಲ್ಲ.
ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು. ಜೈಲು ಶಿಕ್ಷೆಗೆ ಗುರಿಯಾದವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದಾಗಿದ್ದರೆ ಸಂಸತ್ತಿಗೆ ಒಬ್ಬರೂ ಆರಿಸಿಬರುತ್ತಿರಲಿಲ್ಲ. ಏಕೆಂದರೆ ಒಬ್ಬರಲ್ಲಾ ಒಬ್ಬರು ಆಗಿನ ದಿನಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾದವರೆ ಆಗಿದ್ದರು. ಗಮಾರ್ಹವೆಂದರೆ ಈಗಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.
ಸುಪ್ರೀಂಕೋರ್ಟ್ ಹೇಳುವಂತೆ ಜೈಲು ಶಿಕ್ಷೆಗೆ ಗುರಿಯಾದವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದಾದರೆ ಸಂಸತ್ತು ಖಾಲಿ ಖಾಲಿಯಾಗಲಿದೆ!
(ಚಿತ್ರ ಕೃಪೆ: beontheroad.com)












Click it and Unblock the Notifications