ಇವರ ಆರೋಪ ಸಾಬೀತಾದರೆ ಕಾಂಗ್ರೆಸ್ ಖಲಾಸ್
ಬೆಂಗಳೂರು, ಜು. 11 : ಅಪರಾಧ ಸಾಬೀತಾಗಿ 2 ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೆ ಗುರಿಯಾದ ಸಂಸದ ಮತ್ತು ಶಾಸಕ ತನ್ನ ಸದಸ್ಯತ್ವ ಕಳೆದುಕೊಳ್ಳುತ್ತಾನೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಜು.10ರಂದು ನೀಡಿರುವ ಐತಿಹಾಸಿಕ ತೀರ್ಪು ಭಾರತದ ರಾಜಕಾರಣಿಗಳ ಮೇಲೆ ಸಿಡಿಲಿನಂತೆ ಬಂದೆರಗಿದೆ. ಹಿಂಗಾದ್ರೆ ಮುಂದಿನ ಕಥೆ ಏನು ಎಂದು ಥರಥರ ನಡುಗುತ್ತಿದ್ದಾರೆ.
ಕರ್ನಾಟಕದಲ್ಲಿ ರಾಜಕಾರಣಿಗಳ ಸ್ಥಿತಿ ಭಿನ್ನವಾಗೇನೂ ಇಲ್ಲ. ವಿಧಾನಸಭೆಗೆ ಆಯ್ಕೆಯಾಗಿರುವ ಸದಸ್ಯರಲ್ಲಿ ಶೇ.34ರಷ್ಟು, ಅಂದರೆ 74 ಶಾಸಕರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಶೇ.17ರಷ್ಟು, ಅಂದರೆ 38 ಶಾಸಕರು ಗಂಭೀರವಾದ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಅತಿ ಹೆಚ್ಚು ಆರೋಪ ಎದುರಿಸುತ್ತಿರುವುದು ಸಿ.ಪಿ. ಯೋಗೇಶ್ವರ್ (39 ಪ್ರಕರಣ). ಎರಡನೇ ಸ್ಥಾನದಲ್ಲಿ 17 ಪ್ರಕರಣ ಎದುರಿಸುತ್ತಿರುವ ಯಡಿಯೂರಪ್ಪನವರಿದ್ದಾರೆ.
ಈ ಗಂಭೀರ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವವರ ಪಟ್ಟಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಗ್ರಸ್ಥಾನದಲ್ಲಿದೆ. ಕಾಂಗ್ರೆಸ್ಸಿನಿಂದ 17, ಬಿಜೆಪಿಯಿಂದ 9 ಮತ್ತು ಜೆಡಿಎಸ್ ನಿಂದ 6 ಶಾಸಕರ ರಾಜಕೀಯ ಭವಿಷ್ಯ ಸದ್ಯಕ್ಕೆ ತೂಗುಯ್ಯಾಲೆಯಲ್ಲಿದೆ. ಇವರ ಆರೋಪ ಸಾಬೀತಾಗಿ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಪಡೆದರೆ ಅಲ್ಲಿಗೆ ರಾಜಕೀಯ ಜೀವನಕ್ಕೆ ತಿಲಾಂಜಲಿ ಇಡಬೇಕಾಗುತ್ತದೆ.
ಇವರ ಆರೋಪ ಸಾಬೀತಾಗಲೂಬಹುದು, ಖುಲಾಸೆಯೂ ಆಗಬಹುದು. ಆದರೆ, ಸುಪ್ರೀಂಕೋರ್ಟ್ ತೀರ್ಪಿನಿಂದ ಇವರಲ್ಲಿ ಸಣ್ಣನೆ ನಡುಕ ಹುಟ್ಟಿರುವುದಂತೂ ಸತ್ಯ. 121 ಸದಸ್ಯರನ್ನು ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್ ನಿಂದ ಆರೋಪಿ ಸ್ಥಾನದಲ್ಲಿರುವ 17 ಶಾಸಕರು ಅಪರಾಧಿಗಳೆಂದು ಸಾಬೀತಾದರೆ ಸಿದ್ದರಾಮಯ್ಯ ಸರಕಾರ ಬಹುಮತ ಕಳೆದುಕೊಳ್ಳುವುದಂತೂ ಖಚಿತ.
ಕಾಂಗ್ರೆಸ್ ಪಕ್ಷದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವವರು ಯಾರು, ಅವರ ವಿರುದ್ಧ ಎಷ್ಟು ಕೇಸುಗಳಿವೆ, ಎಂಥ ಆರೋಪ ಎದುರಿಸುತ್ತಿದ್ದಾರೆ ಎಂಬ ಮಾಹಿತಿಯತ್ತ ಕಣ್ಣು ಹಾಯಿಸೋಣ. [ಮಾಹಿತಿ : ಮೈನೇತಾ]

ವಿಜಯಾನಂದ ಕಾಶಪ್ಪನವರ್
ಕ್ಷೇತ್ರ : ಹುನಗುಂದ, ಜಿಲ್ಲೆ : ಬಾಗಲಕೋಟೆ.
ಎದುರಿಸುತ್ತಿರುವ ಕೇಸುಗಳು 5 : ಕೊಲೆ ಬೆದರಿಕೆ ಹಾಕಿದ ಎರಡು ಆರೋಪಗಳು. ಕೊಲೆ ಯತ್ನ ಮಾಡಿದ ಆರೋಪ. ಅಪರಾಧ ಎಸಗುವ ಉದ್ದೇಶದಿಂದ ಆಸ್ತಿಪಾಸ್ತಿ ಕಬಳಿಸುವ ಪ್ರಯತ್ನದಲ್ಲಿ ಹಲ್ಲೆ ಮಾಡಿದ ಆರೋಪ. ಅಪಾಯಕಾರಿ ಶಸ್ತ್ರಾಸ್ತ್ರ ಬಳಸಿ ಹಲ್ಲೆ ಮಾಡಿದ ಆರೋಪ. ಈ ಪ್ರಕರಣಗಳಲ್ಲಿ ಕ್ರಮವಾಗಿ ಐಪಿಸಿ ಸೆಕ್ಷನ್ 506, 307, 327 ಮತ್ತು 324 ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಬಿ.ಎಂ. ನಾಗರಾಜ
ಕ್ಷೇತ್ರ : ಶಿರಗುಪ್ಪ, ಜಿಲ್ಲೆ : ಬಳ್ಳಾರಿ.
ಎದುರಿಸುತ್ತಿರುವ ಕೇಸುಗಳು 5 : ಡಕಾಯತಿಯಲ್ಲಿ ಭಾಗಿಯಾದ ಆರೋಪ. ಕೊಲೆ ಯತ್ನ ಮಾಡಿದ ಆರೋಪ. ಅಪಾಯಕಾರಿ ಶಸ್ತ್ರಾಸ್ತ್ರ ಬಳಸಿ ಹಲ್ಲೆ ಮಾಡಿದ ಆರೋಪ. ಬಲವಂತವಾಗಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪ. ಚುನಾವಣೆ ಸಮಯದಲ್ಲಿ ಅಕ್ರಮವಾಗಿ ಹಣ ಹಂಚಿದ ಆರೋಪ. ಈ ಪ್ರಕರಣಗಳಲ್ಲಿ ಕ್ರಮವಾಗಿ ಐಪಿಸಿ ಸೆಕ್ಷನ್ 395, 307, 324, 453 ಮತ್ತು 171ಎಫ್ ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಸುಧಾಕರ ಡಿ.
ಕ್ಷೇತ್ರ : ಹಿರಿಯೂರು, ಜಿಲ್ಲೆ : ಚಿತ್ರದುರ್ಗ.
ಎದುರಿಸುತ್ತಿರುವ ಕೇಸುಗಳು : ಉಯಿಲು ಮತ್ತಿತರ ದಾಖಲೆಗಳ ಸುಳ್ಳು ಸೃಷ್ಟಿದ ಆರೋಪ. ಮೋಸ ಮಾಡುವ ಉದ್ದೇಶದಿಂದ ಸುಳ್ಳು ಪತ್ರ ಸೃಷ್ಟಿ ಮಾಡಿದ ಆರೋಪ. ಕೊಲೆ ಬೆದರಿಕೆ ಹಾಕಿದ ಆರೋಪ. ಸಾರ್ವಜನಿಕ ಸೇವಕನಾಗಿ ನಂಬಿಕೆ ದ್ರೋಹ ಮಾಡಿದ ಆರೋಪ. ಆಸ್ತಿಪಾಸ್ತಿ ವಿಷಯದಲ್ಲಿ ಅಪ್ರಾಮಾಣಿಕತೆಯಿಂದ ಮೋಸ ಮಾಡಿದ ಆರೋಪ. ಈ ಪ್ರಕರಣಗಳಲ್ಲಿ ಕ್ರಮವಾಗಿ ಐಪಿಸಿ ಸೆಕ್ಷನ್ 467, 468, 506, 409, 420 ಸೆಕ್ಷನ್ ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಯಶವಂತರಾಯಗೌಡ ಪಾಟೀಲ
ಕ್ಷೇತ್ರ : ಇಂಡಿ, ಜಿಲ್ಲೆ : ಬಿಜಾಪುರ.
ಎದುರಿಸುತ್ತಿರುವ ಕೇಸುಗಳು 5 : ಕೊಲೆ ಬೆದರಿಕೆ ಹಾಕಿದ ಎರಡು ಆರೋಪಗಳು. ಅಪಾಯಕಾರಿ ಶಸ್ತ್ರಾಸ್ತ್ರ ಬಳಸಿ ಹಲ್ಲೆ ಮಾಡಿದ ಎರಡು ಆರೋಪಗಳು. ಮತ್ತು ಯುವತಿಯನ್ನು ಬಲವಂತವಾಗಿ ಅಪಹರಿಸಿ ಮದುವೆ ಮಾಡಲು ಯತ್ನಿಸಿದ ಆರೋಪ. ಈ ಪ್ರಕರಣಗಳಲ್ಲಿ ಕ್ರಮವಾಗಿ ಐಪಿಸಿ ಸೆಕ್ಷನ್ 506, 324 ಮತ್ತು 366 ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಬಿ.ಎ. ಬಸವರಾಜ
ಕ್ಷೇತ್ರ : ಕೆ.ಆರ್. ಪುರ, ಜಿಲ್ಲೆ : ಬೆಂಗಳೂರು.
ಎದುರಿಸುತ್ತಿರುವ ಕೇಸುಗಳು 3 : ಆಸ್ತಿಪಾಸ್ತಿ ವಿಷಯದಲ್ಲಿ ಅಪ್ರಾಮಾಣಿಕತೆಯಿಂದ ಮೋಸ ಮಾಡಿದ ಆರೋಪ. ಉಯಿಲು ಮತ್ತಿತರ ದಾಖಲೆಗಳ ಸುಳ್ಳು ಸೃಷ್ಟಿ. ಮೋಸ ಮಾಡುವ ಉದ್ದೇಶದಿಂದ ಸುಳ್ಳು ಪತ್ರ ಸೃಷ್ಟಿ ಮಾಡಿದ ಆರೋಪ. ಈ ಮೂರು ಪ್ರಕರಣಗಳಲ್ಲಿ ಕ್ರಮವಾಗಿ ಐಪಿಸಿ ಸೆಕ್ಷನ್ 420, 467 ಮತ್ತು 468 ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಖಮರುಲ್ ಇಸ್ಲಾಂ
ಕ್ಷೇತ್ರ : ಗುಲಬರ್ಗ ಉತ್ತರ, ಜಿಲ್ಲೆ : ಗುಲಬರ್ಗ.
ಎದುರಿಸುತ್ತಿರುವ ಕೇಸುಗಳು 3 : ಸಾಕ್ಷಿಯನ್ನು ಕಾಣೆಯಾಗಿಸಿದ ಅಥವಾ ನಾಶ ಮಾಡಿದ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪ. ಐಪಿಸಿ ಸೆಕ್ಷನ್ 201ರಲ್ಲಿ ಆರೋಪಪಟ್ಟಿ ಸಲ್ಲಿಕೆ. ಧಾರ್ಮಿಕ ಭಾವನೆಗೆ ಅವಮಾನ ಮಾಡಿ, ಧಾರ್ಮಿಕ ಸ್ಥಳಕ್ಕೆ ಧಕ್ಕೆ ಮಾಡಿದ ಆರೋಪ. ಐಪಿಸಿ 295 ಸೆಕ್ಷನ್ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆ. ಕೊಲೆ ಬೆದರಿಕೆ ಹಾಕಿದ ಆರೋಪ. ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಅಜಯ್ ಧರಂಸಿಂಗ್
ಕ್ಷೇತ್ರ : ಜೇವರ್ಗಿ, ಜಿಲ್ಲೆ : ಗುಲಬರ್ಗ.
ಎದುರಿಸುತ್ತಿರುವ ಕೇಸುಗಳು 2 : ಚುನಾವಣೆ ಸಮಯದಲ್ಲಿ ಅಕ್ರಮವಾಗಿ ಹಣ ಹಂಚಿದ ಎರಡು ಆರೋಪ. ಐಪಿಸಿ ಸೆಕ್ಷನ್ 171ಎಚ್ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಉಮಾಶ್ರೀ
ಕ್ಷೇತ್ರ : ತೇರದಾಳ, ಜಿಲ್ಲೆ : ಬಾಗಲಕೋಟೆ.
ಎದುರಿಸುತ್ತಿರುವ ಕೇಸುಗಳು 2 : ಚುನಾವಣೆ ಸಮಯದಲ್ಲಿ ಅಕ್ರಮವಾಗಿ ಹಣ ಹಂಚಿದ ಮತ್ತು ಆಮಿಷ ತೋರಿಸಿದ ಆರೋಪ. ಐಪಿಸಿ ಸೆಕ್ಷನ್ 171ಎಚ್ ಮತ್ತು 171ಎಫ್ ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಡಾ. ಶರಣಪ್ರಕಾಶ್ ಪಾಟೀಲ
ಕ್ಷೇತ್ರ : ಸೇಡಂ, ಜಿಲ್ಲೆ : ಗುಲಬರ್ಗ.
ಎದುರಿಸುತ್ತಿರುವ ಕೇಸುಗಳು 2 : ಮೋಸ ಮಾಡುವ ಉದ್ದೇಶದಿಂದ ಸುಳ್ಳು ಪತ್ರ ಸೃಷ್ಟಿ ಮಾಡಿದ ಆರೋಪ. ಅಕ್ರಮವಾಗಿ ಮದುವೆ ಸಮಾರಂಭ ನಡೆಸಿದ ಆರೋಪ. ಕ್ರಮವಾಗಿ ಐಪಿಸಿ ಸೆಕ್ಷನ್ 468 ಮತ್ತು 496 ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಡಾ. ರಫೀಕ್ ಅಹ್ಮದ್
ಕ್ಷೇತ್ರ : ತುಮಕೂರು ನಗರ, ಜಿಲ್ಲೆ : ತುಮಕೂರು.
ಎದುರಿಸುತ್ತಿರುವ ಕೇಸುಗಳು : ಐಪಿಸಿ ಸೆಕ್ಷನ್ 409 ಅಡಿಯಲ್ಲಿ ಸಾರ್ವಜನಿಕ ಸೇವಕನಾಗಿ ನಂಬಿಕೆ ದ್ರೋಹ ಮಾಡಿದ ಆರೋಪ. ಐಪಿಸಿ ಸೆಕ್ಷನ್ 477ಎ ಅಡಿಯಲ್ಲಿ ಸುಳ್ಳು ಲೆಕ್ಕಪತ್ರ ತೋರಿಸಿದ ಆರೋಪ.

ಎಸ್.ಎಸ್. ಮಲ್ಲಿಕಾರ್ಜುನ
ಕ್ಷೇತ್ರ : ದಾವಣಗೆರೆ ಉತ್ತರ, ಜಿಲ್ಲೆ : ದಾವಣಗೆರೆ.
ಎದುರಿಸುತ್ತಿರುವ ಕೇಸುಗಳು : ಚುನಾವಣೆ ಸಮಯದಲ್ಲಿ ಅಕ್ರಮವಾಗಿ ಹಣ ಹಂಚಿದ ಮತ್ತು ಆಮಿಷ ತೋರಿಸಿದ ಆರೋಪ. ಐಪಿಸಿ ಸೆಕ್ಷನ್ 171ಎಚ್ ಮತ್ತು 171ಎಫ್ ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಡಿ.ಕೆ. ಶಿವಕುಮಾರ್
ಕ್ಷೇತ್ರ : ಕನಕಪುರ, ಜಿಲ್ಲೆ : ರಾಮನಗರ.
ಎದುರಿಸುತ್ತಿರುವ ಕೇಸುಗಳು : ಮೋಸ ಮಾಡುವ ಉದ್ದೇಶದಿಂದ ಸುಳ್ಳು ಪತ್ರ ಸೃಷ್ಟಿ ಮಾಡಿದ ಆರೋಪ. ಐಪಿಸಿ ಸೆಕ್ಷನ್ 468 ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ರುದ್ರಪ್ಪ ಮಾನಪ್ಪ ಲಮಾಣಿ
ಕ್ಷೇತ್ರ : ಹಾವೇರಿ, ಜಿಲ್ಲೆ : ಹಾವೇರಿ.
ಎದುರಿಸುತ್ತಿರುವ ಕೇಸುಗಳು : ಮೋಸ ಮಾಡುವ ಉದ್ದೇಶದಿಂದ ಸುಳ್ಳು ಪತ್ರ ಸೃಷ್ಟಿ ಮಾಡಿದ ಆರೋಪ. ಅಕ್ರಮವಾಗಿ ಮದುವೆ ಸಮಾರಂಭ ನಡೆಸಿದ ಆರೋಪ. ಕ್ರಮವಾಗಿ ಐಪಿಸಿ ಸೆಕ್ಷನ್ 468 ಮತ್ತು 496 ಅಡಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಡಾ. ಉಮೇಶ್ ಜಿ. ಜಾಧವ್
ಕ್ಷೇತ್ರ : ಚಿಂಚೋಳಿ, ಜಿಲ್ಲೆ : ಗುಲಬರ್ಗ.
ಎದುರಿಸುತ್ತಿರುವ ಕೇಸುಗಳು : ಕೊಲೆ ಬೆದರಿಕೆ ಹಾಕಿದ ಆರೋಪ. ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಜಿ. ಹಂಪಯ್ಯ ಸಾಹುಕಾರ್ ಬೆಲ್ಲಟಗಿ
ಕ್ಷೇತ್ರ : ಮಾನ್ವಿ, ಜಿಲ್ಲೆ : ರಾಯಚೂರು.
ಎದುರಿಸುತ್ತಿರುವ ಕೇಸುಗಳು : ಚುನಾವಣೆ ಸಮಯದಲ್ಲಿ ಅಕ್ರಮವಾಗಿ ಹಣ ಹಂಚಿದ ಆರೋಪ. ಐಪಿಸಿ ಸೆಕ್ಷನ್ 171ಎಚ್ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಜಗದೀಶ್ ಪಾಟೀಲ
ಕ್ಷೇತ್ರ : ಬೀಳಗಿ, ಜಿಲ್ಲೆ : ಬಾಗಲಕೋಟೆ.
ಎದುರಿಸುತ್ತಿರುವ ಕೇಸುಗಳು : ಚುನಾವಣೆ ಸಮಯದಲ್ಲಿ ಅಕ್ರಮವಾಗಿ ಹಣ ಹಂಚಿದ ಆರೋಪ. ಐಪಿಸಿ ಸೆಕ್ಷನ್ 171ಎಚ್ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಮುನಿರತ್ನ ನಾಯ್ಡು
ಕ್ಷೇತ್ರ : ರಾಜರಾಜೇಶ್ವರಿ ನಗರ, ಜಿಲ್ಲೆ : ಬೆಂಗಳೂರು.
ಎದುರಿಸುತ್ತಿರುವ ಕೇಸುಗಳು : ಮೋಸ ಮಾಡುವ ಉದ್ದೇಶದಿಂದ ಸುಳ್ಳು ಪತ್ರ ಸೃಷ್ಟಿ ಮಾಡಿದ ಆರೋಪ. ಐಪಿಸಿ ಸೆಕ್ಷನ್ 468 ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.












Click it and Unblock the Notifications