ಅಪ್ಪನ ಪಿಸ್ತೂಲಿಂದ ಇನ್ಸ್ ಪೆಕ್ಟರ್ ಪುತ್ರನ ಆತ್ಮಹತ್ಯೆ

mumbai-inspector-arvind-sawant-son-tejas-shoots-self
ಮುಂಬೈ, ಜುಲೈ11: ಅವನಿಗಿನ್ನೂ 21 ವರ್ಷವಷ್ಟೇ. ಗೊತ್ತಿಲ್ಲ, ಅವನು ಯಾಕೆ ಹಾಗೆ ಮಾಡಿಕೊಂಡನೋ, ಅಂತೂ ಅಪ್ಪನ ಸರ್ವೀಸ್ ಪಿಸ್ತೂಲಿನಿಂದ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾಯಾನಗರಿ ಮುಂಬೈನ ಚೆಂಬೂರಿನಲ್ಲಿರುವ ತಿಲಕ್ ನಗರದಲ್ಲಿ ಕ್ರೈಂ ಬ್ರಾಂಚಿನಲ್ಲಿ ಹಿರಿಯ ಇನ್ಸ್ ಪೆಕ್ಟರ್ ಆಗಿರುವ ಅರವಿಂದ್ ಸಾವಂತ್ ಅವರ ಪುತ್ರ ತೇಜಸ್ (21) ಮಂಗಳವಾರ ರಾತ್ರಿ ತಲೆಗೆ ಹೊಡೆದುಕೊಂಡ ಗುಂಡು ಈ ಕಡೆಯಿಂದ ನುಗ್ಗಿ ಆ ಕಡೆಯಿಂದ ಹೊರಬಿದ್ದಿದೆ.

ಪಾಪಿ ತೇಜಸ್ ಸಾಯುವ ಮುನ್ನ ತನ್ನ ಗೆಣೆಕಾರರಿಗೆಲ್ಲ ಸಾವಕಾಶವಾಗಿ SMS ಮಾಡಿ, One Day You Will Miss Me As I Will Be No More In The World ಎಂದು ಹೇಳಿಕೊಂಡಿದ್ದಾನೆ.

ಅವರು ಯಾರೂ ಅದನ್ನು ಸೀರಿಯದ್ದಾಗಿ ತೆಗೆದುಕೊಂಡಿಲ್ಲ. ಆದರೆ ತೇಜಸ್ ನ ಅಮ್ಮ ಬೆಳಗ್ಗೆ ಅವನು ಮಲಗಿದ್ದ ರೂಮಿಗೆ ಹೋಗಿ ನೋಡಿದಾಗಲೆ ಪುತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡುಬಂದಿದ್ದು.

ಅಪ್ಪ ಇನ್ಸ್ ಪೆಕ್ಟರ್ ಅರವಿಂದ್ ಸಾವಂತ್ ನಿಜಕ್ಕೂ ತೇಜಸ್ಸುವಂತರೇ. ಪಾತಕಿ ಅಜ್ಮಲ್ ಕಸಬ್ ಮುಂಬೈ ಮೇಲೆ ಮುಗಿಬಿದ್ದಾಗ ಖುದ್ದು ಅರವಿಂದ್ ಸಾವಂತ್ ಅಂದು ಕಾರ್ಯಾಚರಣೆಯಲ್ಲಿ ಹೋರಾಡಿದ್ದರು.

Mumbai Crime Branch ಮತ್ತು Anti-Terrorist Squadನಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದೆ. ಅಂತಹವರ ಪುತ್ರ ಬಲ್ಲ ಮೂಲಗಳ ಪ್ರಕಾರ ನಿಕೃಷ್ಟ ಪ್ರೇಮ ಪಾಶಕ್ಕೆ ಸಿಲುಕಿ ಬದಕನ್ನು ಕೊನೆಗಾಣಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ತೇಜಸ್, ಆತನ ತಂಗಿ ಮತ್ತು ಅರವಿಂದ್ ಸಾವಂತ್ ದಂಪತಿ ಹೀಗೆ ಮನೆ ಮಂದಿಯೆಲ್ಲಾ ಮಂಗಳವಾರ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಮುಂದೆ ಮನೆಯಲ್ಲಿ ದೊಡ್ಡ ಬಿರುಗಾಳಿ ಏಳಲಿದೆ ಎಂಬುದರ ಸುಳಿವು ಅವರಿಗ್ಯಾರಿಗೂ ಸಿಕ್ಕಿಲ್ಲ.

ಹೊರಗೆ ಧೋ ಅಂತ ಮಳೆಯಾಗುತ್ತಿತ್ತು. ಊಟವಾಗುತ್ತಿದ್ದಂತೆ ಅಪ್ಪ ಒಂದು ರೂಮಿಗೆ, ತಂಗಿ-ಅಮ್ಮ ಒಂದು ರೂಮಿನಲ್ಲಿ ಮಲಗಲು ಹೊರಟಿದ್ದಾರೆ. ಇವನೊಬ್ಬನೇ ಹಾಲಿನಲ್ಲಿ ಮಲಗಲು ಸಿದ್ಧತೆ ನಡೆಸಿದ್ದಾನೆ.

ಆದರೆ ಅದಕ್ಕೂ ಮುನ್ನ, ಇದ್ದಬದ್ಧ ಸ್ನೇಹಿತರಿಗೆಲ್ಲಾ SMS ಕಳಿಸಿ, ಟಾಟಾ ಹೇಳಿದ್ದಾನೆ. ಅದಾಗುತ್ತಿದ್ದಂತೆ ರಾತ್ರಿಯೆಲ್ಲ ಯೋಚಿಸಿ ಯೋಚಿಸಿ, ಒಂದು ನಿರ್ಧಾರಕ್ಕೆ ಬಂದವನೆ ಬೆಳಗ್ಗೆ 7 ಗಂಟೆಯಲ್ಲಿ ಅಪ್ಪನ ಪಿಸ್ತೂಲಿನ ಟ್ರಿಗರ್ ಎಳೆದು ತನ್ನ ಕೊನೆಯುಸಿರೆಳೆದಿದ್ದಾನೆ.

ಡ್ಯೂಟಿಯಿಂದ ಸುಸ್ತಾಗಿ ಬಂದಿದ್ದ ಇನ್ಸ್ ಪೆಕ್ಟರ್ ಅರವಿಂದ್ ಸಾವಂತ್ ಅವರು ದಿಂಬಿನ ಬಳಿ ಪಿಸ್ತೂಲನ್ನಿಟ್ಟು, ನಿದ್ದೆಗೆ ಜಾರಿದ್ದಾರೆ. ಹೊರಗೆ ಮಳೆಯಾಗುತ್ತಿದ್ದರಿಂದ ಮಗ ಹಾರಿಸಿಕೊಂಡ ಗುಂಡಿನ ಸದ್ದು ಅವರಿಗೆ ಕೇಳಿಸಿಲ್ಲ.

ಬೆಳಗ್ಗೆ ತೇಜಸ್ ನ ಅಮ್ಮ ಬಂದು ನೋಡಿದಾಗಲೇ ಮಗನ ಕುಕೃತ್ಯ ಕಂಡುಬಂದಿರುವುದು. ಆದರೆ ಅಷ್ಟೊತ್ತಿಗೆ ಎಲ್ಲವೂ ಮುಗಿದುಹೋಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+