ದೆಹಲಿ ಗ್ಯಾಂಗ್ ರೇಪ್: ಬಾಲಾಪರಾಧಿ ತಪ್ಪಿತಸ್ಥ, ಶಿಕ್ಷೆ 25ಕ್ಕೆ

 Delhi gang-rape case juvenile found guilty- Juvenile Justice Board,
ನವದೆಹಲಿ, ಜುಲೈ 11: ಕಳೆದ ವರ್ಷ ಡಿಸೆಂಬರಿನಲ್ಲಿ ಚಲಿಸುವ ಬಸ್ಸಿನಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಮತ್ತು ತದನಂತರ ಆಕೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಆರೋಪಿ ತಪ್ಪಿತಸ್ಥನೆಂದು ಸಾಬೀತಾಗಿರುವುದಾಗಿ ಬಾಲಾಪರಾಧಿ ನ್ಯಾಯ ಮಂಡಳಿ ಘೋಷಿಸಿದೆ.

ಇದು ನಮ್ಮ ನ್ಯಾಯ ವ್ಯವಸ್ಥೆ:
ತತ್ಸಂಬಂಧ, ಇದೇ ಜುಲೈ 25ರಂದು ಅವನಿಗೆ ಶಿಕ್ಷೆ ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. 6 ಮಂದಿ ಆರೋಪಿಗಳ ಪೈಕಿ ಒಬ್ಬ ಆರೋಪಿ ಅಪ್ರಾಪ್ತ ವಯಸ್ಸಿನವನಾಗಿದ್ದು, ಶಿಕ್ಷೆಯಿಂದ ನುಣುಚಿಕೊಳ್ಳುತ್ತಾನೆ ಎಂಬ ಆತಂಕ ಮನೆ ಮಾಡಿತ್ತು. ಉಳಿದ 5 ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವುದಾದರೂ ಸದರಿ ಬಾಲಾಪರಾಧಿಗೆ ಹೆಚ್ಚಿನ ಶಿಕ್ಷೆಯೇನೂ ಆಗದು.

ಅಪರಾಧ ನಡೆದಾಗ (ಡಿ. 16ರಂದು) ಈತ ಅಪ್ತಾಪ್ತ ವಯಸ್ಸಿನವನಾಗಿದ್ದು, ಬಾಲಾಪರಾಧಿ ಎಂದು ಪರಿಗಣಿಸಲಾಗಿತ್ತು. ಆದರೆ ಕಳೆದ ತಿಂಗಳು ಈ ಬಾಲ ಅತ್ಯಾಚಾರಿ/ಹಂತಕನಿಗೆ 18 ವರ್ಷ ತುಂಬಿತ್ತು.

ಬೇಸರದ ಸಂಗತಿಯೆಂದರೆ ಬಾಲಾಪರಾಧಿಗೆ Juvenile Justice Board ಕಾನೂನು ಪ್ರಕಾರ ಗರಿಷ್ಠ ಮೂರು ವರ್ಷ ಶಿಕ್ಷೆಯಾಗುತ್ತದಷ್ಟೇ. ಜತೆಗೆ, ಅವನು ಮಾಡಿರುವ ಗುರುತರ ಅಪರಾಧ ಮುಂದೆ ಎಲ್ಲೂ ದಾಖಲಾಗುವುದಿಲ್ಲ. ಅಂದರೆ ಮೂರು ವರ್ಷದ ಶಿಕ್ಷೆ ಮುಗಿಯುತ್ತಿದ್ದಂತೆ ಅವನ ಮೇಲಿರುವ ಹೇಯ ಅಪರಾಧ ಅಳಸಿ ಹೋಗುತ್ತದೆ. ಇದು ನಮ್ಮ ನ್ಯಾಯ ವ್ಯವಸ್ಥೆ.

ಸದರಿ ಬಾಲಪರಾಧಿಯ ವಿಚಾರಣೆಯನ್ನು ಜುಲೈ 5ರಂದು ಅಂತ್ಯಗೊಳಿಸಿದ್ದ ಮಂಡಳಿಯ ಮ್ಯಾಜಿಸ್ಟ್ರೇಟ್ ಗೀತಾಂಜಲಿ ಗೋಯಲ್ ಅವರು, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಆದರೆ ಇಂದು ತೀರ್ಪು ಪ್ರಕಟಿಸಿದ ನ್ಯಾ ಗೋಯಲ್ ಅವರು ತೀರ್ಪನ್ನು ಜುಲೈ 25ಕ್ಕೆ ಕಾಯ್ದಿರಿಸಿದ್ದಾರೆ.

ಸದರಿ ಬಾಲಾಪರಾಧಿ ಸೇರಿದಂತೆ ರಾಮ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ಮುಕೇಶ್ ಹೀಗೆ ಒಟ್ಟು 6 ಕಾಮುಕರು ಡಿ. 16ರಂದು ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಡಿ. 29ರಂದು ಅತ್ಯಾಚಾರ ಸಂತ್ರಸ್ತೆ ಸಾವನ್ನಪ್ಪಿದ್ದಳು. ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ತಿಹಾರ್ ಜೈಲಿನಲ್ಲಿ ಮಾ. 11ರಂದು ಪ್ರಕರಣದ ಪ್ರಮುಖ ಆರೋಪಿ ರಾಮ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+