ಭ್ರಷ್ಟ ಅಧಿಕಾರಿಯ ಚಿನ್ನ ಚಿನ್ನ ಆಸೈ!

ಚಿನ್ನ ಚಿನ್ನ ಆಸೈ ಆದರೆ ವಿಶೇಷ ಅದಲ್ಲ. ಏನಪ್ಪಾ ಅಂದರೆ ಆ ಅಧಿಕಾರಿ ಲಂಚ ತೆಗೆದುಕೊಂಡಾಗಲೆಲ್ಲ ಹೆಂಡತಿಗೆ ಒಂದೊಂದು ಚಿನ್ನಾಭರಣ ಕೊಡಿಸುತ್ತಿದ್ದನಂತೆ. ಇಂತಿಪ್ಪ ಅಧಿಕಾರಿ ತನ್ನ ಹೆಂಡತಿಗೆ 230 ಕಿವಿಯೋಲೆ, 53 ಉಂಗುರ, 36 ಬಳೆ, 30 ಚೈನು, 6 ನೆಕ್ ಲೇಸ್ ಕೊಡಿಸಿದ್ದಾಗ ಆತನ ಪಾಪದ ಕೊಡ ತುಂಬಿತ್ತು ಅನ್ನಿಸುತ್ತದೆ. ಕೊನೆಗೂ ಆತ ಗುಡ್ಡೆ ಹಾಕಿಕೊಂಡಿದ್ದ ಅಕ್ರಮ ಆಸ್ತಿ ಪೊಲೀಸರ ಕಣ್ಣು ಕುಕ್ಕಿ, ಎಲ್ಲವನ್ನೂ ಜಪ್ತಿ ಮಾಡಿಕೊಂಡು ಹೋಗಿದ್ದಾರೆ.
ಆ ಅಧಿಕಾರಿಯ ನಾಮಧೇಯ ಏನಪ್ಪಾ ಅಂದರೆ ರಾಧಾಕೃಷ್ಣ ಸಿಂಗ್ ಯಾದವ್. ಈತ ಮಾಧ್ಯಮಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ. ಹೆಂಡತಿಯೆಡೆಗಿನ ಚೆನ್ನದ ಪ್ರೀತಿಯನ್ನು ದಾಳಿ ವೇಳೆ ಖುದ್ದು ಆತನೇ ಹೇಳಿಕೊಂಡಿದ್ದಾನೆ.
ಇನ್ನು ಈತನ ಬಳಿ ಸ್ಥಿರಾಸ್ತಿಯೂ ಅಪಾರವಾಗಿದೆಯಂತೆ. ಮನೆ, ಪ್ಲಾಟ್, ನಿವೇಶನಗಳು, ಬ್ಯಾಂಕ್ ಖಾತೆಗಳು ಎಲ್ಲ ಸೇರಿ ರಾಧಾ ಕೃಷ್ಣ ಸಿಂಗ್ ಯಾದವ್ 2.39 ಕೋಟಿ ರೂ. ಆಸ್ತಿವಂತ!
ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಧಾಕೃಷ್ಣ ಸಿಂಗ್ ಯಾದವ್ ಬಳಿ ಇಷ್ಟು ಮಾತ್ರವಲ್ಲ ಬೆಳ್ಳಿಯ ಸೊಂಟಪಟ್ಟಿ, ದಪ್ಪ ಕಡಗ, ಬ್ರೇಸ್ ಲೆಟ್ ಸಹಿತ ಸುಮಾರು 8.5 ಕೆಜಿಯಷ್ಟು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ದಾಳಿ ಮಾಡಿದ ಅಧಿಕಾರಿಗಳಿಗೆ ಸಿಕ್ಕಿವೆ.












Click it and Unblock the Notifications