ನವವಿವಾಹಿತೆ ನಾಪತ್ತೆ, ಸೈನಿಕನ ಪತ್ನಿ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದಾಗಿ ಸೈನಿಕನ ಪತ್ನಿ ಪ್ರತಿಮಾ (33) ತಮ್ಮ ಪುತ್ರಿ 6 ವರ್ಷದ ದಿಯಾಳನ್ನು ಮನೆ ಸಮೀಪದ ಬಾವಿಗೆ ತಳ್ಳಿ, ತದನಂತರ ತಾವೂ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪತಿ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ರಾತ್ರಿ ವೇಳೆ ಮೊಬೈಲಿನಿಂದ ಮೆಸೇಜ್ ಮಾಡುತ್ತಿರುವುದನ್ನು ಮತ್ತು ಈಕೆಯ ಮೊಬೈಲಿಗೆ ಬರುವ ಮೆಸೆಜನ್ನು ನಿಲ್ಲಿಸುವಂತೆ ಪತಿ ನವೀನ್ ಕುಮಾರ್ ಬುದ್ಧಿವಾದ ಹೇಳಿದ್ದರಿಂದ ಮನನೊಂದು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಸ್ಸಾಂ: ದೋಣಿ ದುರಂತದಲ್ಲಿ ರಾಜ್ಯ ಯೋಧ ಸಾವು
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯ ಜಯರಾಮೇಗೌಡ (32) ಎಂಬ ಯೋಧ ಅಸ್ಸಾಂನ ಮಿಜೋರಾಂನಲ್ಲಿ ಬುಧವಾರ ಸಂಜೆ ನಡೆದ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. 11 ವರ್ಷಗಳಿಂದ ಅವರು BSFನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಿಜೋರಾಂನ ಬ್ರಹ್ಮಪುತ್ರ ನದಿ ದಾಟುವ ವೇಳೆ ಪ್ರವಾಹದಲ್ಲಿ ಮೋಟಾರ್ ಬೋಟ್ ಮುಳುಗಿ ಈ ದುರ್ಘಟನೆ ನಡೆದಿದೆ. ಜಯರಾಮೇಗೌಡರು ಪತ್ನಿ ಮಮತಾ ಮತ್ತು ಒಬ್ಬ ಪುತ್ರಿ ಹಾಗೂ ತಾಯಿ ನಂಜಮ್ಮ, ಒಬ್ಬ ಸಹೋದರಿ ಸೇರಿ ನಾಲ್ವರು ಸಹೋದರರನ್ನು ಅಗಲಿದ್ದಾರೆ.
ನವವಿವಾಹಿತೆ ನಾಪತ್ತೆ
ಬೆಳ್ತಂಗಡಿಯ ಸಂಗಬೆಟ್ಟು ಗ್ರಾಮದ ಕಲ್ಕುರಿಯಲ್ಲಿ ನವವಿವಾಹಿತೆ ನಾಪತ್ತೆಯಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಶಶಿಕಲಾ ಎಂಬ 29 ವರ್ಷದ ಮಹಿಳೆ ಜುಲೈ 8ರಿಂದ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈಶ್ವರ್ ನಾಯ್ಕ್ ಎಂಬುವವರ ಪುತ್ರಿ ಶಶಿಕಲಾ ಅವರು ಸೋಮವಾರ ಅಪ್ಪನ ಮನೆಯಿಂದ ಗಂಡನ ಮನೆಗೆ ಎಂದು ಹೊರಟವರು ಇನ್ನೂ ಮನೆಗೆ ತಲುಪಿಲ್ಲ.
2 ತಿಂಗಳ ಹಿಂದೆ ಪ್ರಭಾಕರ್ ಎಂಬುವವರ ಜತೆ ಅವರ ವಿವಾಹವಾಗಿತ್ತು. ಒಂದು ವಾರದ ಹಿಂದೆ ಆಕೆ ತನ್ನ ತವರಿಗೆ ಬಂದಿದ್ದರು. ಶಶಿಕಲಾರ ಅಣ್ಣ ನೀಲಯ್ಯ ಅವರು ತಮ್ಮ ಸೋದರಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದಾರೆ.












Click it and Unblock the Notifications