ಆಭರಣ ಮಳಿಗೆಯಲ್ಲಿ ಚಿನ್ನದ ನಾಣ್ಯ ಮಾರಾಟ ಬಂದ್
ಬೆಂಗಳೂರು, ಜು.11: ಆಭರಣ ಮಳಿಗೆಗಳಲ್ಲಿ ಇನ್ಮುಂದೆ ಚಿನ್ನದ ನಾಣ್ಯ ಹಾಗೂ ಬಾರ್ ಗಳನ್ನು ಗ್ರಾಹಕರಿಗೆ ಮಾರಾಟ ನಿಲ್ಲಿಸಲಾಗುತ್ತದೆ. ರುಪಾಯಿ ಅಪಮೌಲ್ಯ, ಚಾಲ್ತಿ ವಿತ್ತೀಯ ಕೊರತೆ, ಆರ್ಥಿಕ ಕುಸಿತಕ್ಕೆ ಸರ್ಕಾರ ಕೈಗೊಂಡುವ ಕ್ರಮಗಳಿಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಜೆಮ್ಸ್ ಹಾಗೂ ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್(GJF) ಹೇಳಿದೆ.
ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಈ ರೀತಿ ನಿರ್ಣಯ ಕೈಗೊಳ್ಳುವುದು ಅನಿವಾರ್ಯವಾಗಿದೆ.ಚಿನ್ನದ ನಾಣ್ಯ ಹಾಗೂ ಬಾರ್ ಗಳ ಮಾರಾಟವನ್ನು ಇನ್ನೂ ಆರು ತಿಂಗಳುಗಳ ಕಾಲ ತಡೆ ಹಿಡಿಯಲಾಗಿದೆ ಅಥವಾ ಚಾಲ್ತಿ ವಿತ್ತೀಯ ಕೊರತೆ ಸಮಸ್ಯೆ ಬಗೆಹರಿಯುವ ತನಕ ಈ ವ್ಯವಸ್ಥೆ ಮುಂದುವರೆಯಲಿದೆ. ಇದರ ಜೊತೆಗೆ ಉತ್ಪನ್ನ ಹಾಗೂ ರಫ್ತು ಕ್ಷೇತ್ರಕ್ಕೆ ಸರ್ಕಾರದಿಂದ ಹೆಚ್ಚಿನ ಉತ್ತೇಜನ ಸಿಗುವ ಭರವಸೆ ಸಿಗುವ ನಿರೀಕ್ಷೆಯಿದೆ ಎಂದು GJF ಚೇರ್ಮನ್ ಹರೇಶ್ ಸೋನಿ ಹೇಳಿದ್ದಾರೆ.

ಚಾಲ್ತಿ ವಿತ್ತೀಯ ಕೊರತೆ ಸಮಸ್ಯೆ ಹಾಗೂ ಅದಕ್ಕೆ ಆಭರಣ ಮಳಿಗೆ ಮಾಲೀಕರು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ಕಳೆದ ಒಂದು ವಾರದಿಂದ ದೇಶದ ಪ್ರಮುಖ ಆಭರಣ ಮಳಿಗೆ ಮಾಲೀಕರು ಸಭೆ ಸೇರಿ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ದೇಶದ ಎಲ್ಲಾ ಆಭರಣ ಮಳಿಗೆಗಳಿಗೆ ಚಿನ್ನದ ನಾಣ್ಯ ಮಾರಾಟ ಮತ್ತು ಚಿನ್ನದ ನಾಣ್ಯ ಮತ್ತು ಬಾರ್ ಗಳ ಮುಂಗಡ ಆರ್ಡರ್ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹರೇಶ್ ಹೇಳಿದರು.
ಚಿನ್ನ ಉತ್ಪಾದಕರು, ಹೋಲ್ ಸೇಲ್ ದಾರರು, ರೀಟೆಲ್ ಸಂಸ್ಥೆಗಳು, ವಿತರಕರು, ಲ್ಯಾಬ್ ಗಳು, ವಿನ್ಯಾಸಗಾರರು ಇತರರು ಸೇರಿ 6,00,000 ನೋಂದಾಯಿತ ವೈಯಕ್ತಿಕ ಹಾಗೂ ಸಂಸ್ಥೆಗಳು GJF ಅಡಿಯಲ್ಲಿ ಬರಲಿದೆ.
ದೇಶದ ಆರ್ಥಿಕ ಪ್ರಗತಿ ಕುಸಿಯುತ್ತಿತ್ತು ಜಿಡಿಪಿ ನಿರೀಕ್ಷಿತ ಮಟ್ಟದ ಕಾರಣ ಚಾಲ್ತಿ ವಿತ್ತೀಯ ಕೊರತೆ ಶೇ 4.8 ರಷ್ಟು ಮುಟ್ಟಿತ್ತು. ರುಪಾಯಿ ಅಪಮೌಲ್ಯ ದಾಖಲೆ ಪ್ರಮಾಣ ಮುಟ್ಟಿ ಡಾಲರ್ ಎದುರು 60 ಪೈಸೆಗೆ ಕುಸಿದಿತ್ತು.
ಚಿನ್ನ ದರ ಏರಿಕೆ ಮೇಲಿನ ನಿಯಂತ್ರಣ ಸಾಧಿಸಲು ಆಮದು ಚಿನ್ನದ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಶೇ 8ರಷ್ಟು ಹೆಚ್ಚಿಸಿತ್ತು. ಚಿನ್ನದ ಆಮದು ಮಾಡದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿದೆ.












Click it and Unblock the Notifications