ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಕನ್ನಡಿಗ ವಿಕಾಸ್ ಗೌಡಗೆ ಚಿನ್ನ

By Mahesh
|
Google Oneindia Kannada News

ಪುಣೆ, ಜು.5 : ಇಲ್ಲಿನ ಬಾಲೆವಾಡಿ ಶಿವ ಛತ್ರಪತಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಒಲಿಂಪಿಯನ್ ಕರ್ನಾಟಕದ ವಿಕಾಸ್ ಗೌಡ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ.

ಅಂದ ಹಾಗೆ ಶುಕ್ರವಾರ(ಜು.5) ಮೈಸೂರು ಮೂಲದ ವಿಕಾಸ್ ಗೌಡ ಅವರ ಹುಟ್ಟುಹಬ್ಬ ಚಿನ್ನ ಗೆದ್ದು ಸಂಭ್ರಮದಿಂದ ಆಚರಣೆ ಮಾಡಲು ಸಜ್ಜಾಗಿದ್ದಾರೆ. ನೀವೂ ಶುಭ ಹಾರೈಸಿ..

ಡಿಸ್ಕಸ್ ಎಸೆತದಲ್ಲಿ ವಿಕಾಸ್ ಗೌಡ ಚಿನ್ನದ ಪದಕ ಗೆದ್ದರೆ, ಕರ್ನಾಟಕದ ಎಂ.ಆರ್ ಪೂವಮ್ಮ 400 ಮೀ ಓಟದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ. ಪುರುಷರ 10 ಸಾವಿರ ಓಟದಲ್ಲಿ ರತಿರಾಮ್ ಸೈನಿ ಕಂಚು ಗಳಿಸಿದ್ದಾರೆ.. ಎರಡನೆ ದಿನದ ಅಂತ್ಯಕ್ಕೆ ಭಾರತದ ಖಾತೆಗೆ 3 ಪದಕ(1ಚಿನ್ನ, 1ಬೆಳ್ಳಿ ಮತ್ತು 1ಕಂಚು) ಜಮೆಯಾಗಿತ್ತು.

ವಿಕಾಸ್ ಸಾಧನೆ: ವಿಕಾಸ್ ಅವರು ನಾಲ್ಕನೆ ಯತ್ನದಲ್ಲಿ 64.90 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ಚಿನ್ನದ ಪದಕವನ್ನು ಕೊರಳಲ್ಲಿ ಧರಿಸಿದ್ದಾರೆ. ಈ ವರೆಗೆ ಏಷ್ಯನ್ ಚಾಂಪಿಯನ್ ಷಿಪ್ ನ ಐದು ಕೂಟಗಳಲ್ಲಿ ಸ್ಪರ್ಧಿಸಿ ಮೊದಲ ಚಿನ್ನ ಪಡೆದಿದ್ದಾರೆ.

ಅವರು 2005 ಮತ್ತು 2011ರ ಕೂಟಗಳಲ್ಲಿ ಬೆಳ್ಳಿ ಜಯಿಸಿದ್ದರು. ವಿಕಾಸ್ ಗೌಡ ಈ ಗೆಲುವಿನೊಂದಿಗೆ ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್ ಷಿಪ್ ಸ್ಫರ್ಧೆಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಭಾರತದ ಅಥ್ಲೀಟ್ ಗಳ ಸಂಭ್ರಮವನ್ನು ಚಿತ್ರಗಳಲ್ಲಿ ನೋಡಿ...

ಚಿತ್ರಗಳಲ್ಲಿ ಅಥ್ಲೀಟ್ ಗಳ ಸಂಭ್ರಮ

ಚಿತ್ರಗಳಲ್ಲಿ ಅಥ್ಲೀಟ್ ಗಳ ಸಂಭ್ರಮ

ಗುರುವಾರದ ಅಂತ್ಯಕ್ಕೆ ಈ ಕೂಟದಲ್ಲಿ ಚೀನಾ 5 ಚಿನ್ನ 2 ಬೆಳ್ಳಿ ಮತ್ತು 1 ಕಂಚು ಪಡೆದು ಮೊದಲ ಸ್ಥಾನ ಕಾಯ್ದುಕೊಂಡಿದೆ. ಭಾರತ ನಾಲ್ಕನೆ ಸ್ಥಾನವನ್ನು ಬಹರೈನ್ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನ ಪಡೆದಿದೆ

ವಿಕಾಸ್ ಸಾಧನೆ

ವಿಕಾಸ್ ಸಾಧನೆ

ವಿಕಾಸ್ ಅವರು ನಾಲ್ಕನೆ ಯತ್ನದಲ್ಲಿ 64.90 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ಚಿನ್ನದ ಪದಕವನ್ನು ಕೊರಳಲ್ಲಿ ಧರಿಸಿದ್ದಾರೆ.

ವಿಕಾಸ್ ಕೊರಳಲ್ಲಿ ಚಿನ್ನ

ವಿಕಾಸ್ ಕೊರಳಲ್ಲಿ ಚಿನ್ನ

ಚಿನ್ನದ ಪದಕದೊಂದಿಗೆ ವಿಕಾಸ್ ಗೌಡ ಪಿಟಿಐ ಚಿತ್ರ: Shirish Shete

ಚೀನಾದ ಓಟ

ಚೀನಾದ ಓಟ

ಪುಣೆ: 100 ಮೀ ಪುರುಷರ ಓಟದಲ್ಲಿ ಚೀನಾದ ಸು ಬಿಂಗ್ಟೈನ್ ಅವರು ಮತ್ತೊಮ್ಮೆ ಚಿನ್ನದ ಪದ ಗೆದ್ದುಕೊಂಡಿದ್ದಾರೆ.

ಪೂವಮ್ಮಗೆ ಬೆಳ್ಳಿ

ಪೂವಮ್ಮಗೆ ಬೆಳ್ಳಿ

400 ಮೀ. ನಲ್ಲಿ ಎಂ.ಆರ್.ಪೂವಮ್ಮ ಅವರಿಂದ ಚಿನ್ನ ನಿರೀಕ್ಷಿಸಲಾಗಿತ್ತು. ಆದರೆ ಅವರು 53:37 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದರು. ಚೀನಾದ ಝಾಹೊ ಯಾನ್ ಮಿನ್(52:49) ಚಿನ್ನ ಹಾಗೂ ಲೆಬನಾನ್ ನ ತಸ್ಲಾಕಿಯನ ಗ್ರೆಟ್ಟಾ(53:43 ) ಕಂಚು ಹಂಚಿಕೊಂಡರು.

English summary
Pune : India's Discus thrower Vikas Gowda, picked up India's first gold in the Asian Athletics Championships on in Pune on Thursday. Poovamma gets bronze in women's 400 metres in the Asian Athletics Championships
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X