ಮಳೆಗಾಲ ಸಾರಿಗೆ ಬಸ್‌ಗಳ ಪ್ರಯಾಣ ದರ ಇಳಿಕೆ

Monsoon : KSRTC reduces bus fare
ಮಂಗಳೂರು, ಜು. 5 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಸಾರಿಗೆಗಳ ಪ್ರಯಾಣ ದರದಲ್ಲಿ ಶೇ. 15% ರಷ್ಟು ಇಳಿಕೆ ಮಾಡಲಾಗಿದೆ.

ಮಲ್ಟಿ ಆಕ್ಸಿಲ್ ಮಾದರಿಯ ಸಾರಿಗೆ

ಮಂಗಳೂರು - ಬೆಂಗಳೂರು ದರ ರು.660.
ಉಡುಪಿ - ಬೆಂಗಳೂರು ದರ ರು. 675.
ಕುಂದಾಪುರ - ಬೆಂಗಳೂರು ದರ ರು.725.
ಮಂಗಳೂರು - ಹೈದರಾಬಾದ್ ದರ ರು.1302.
ಮಂಗಳೂರು - ಎರ್ನಾಕುಲಂ ದರ ರು.715.
ಮಂಗಳೂರು - ಮುಂಬೈ ದರ ರು.1100 ಆಗಿರುತ್ತದೆ.

ಎಸಿ ಸ್ಲೀಪರ್ ಮಾದರಿ ಸಾರಿಗೆ

ಮಂಗಳೂರು - ಬೆಂಗಳೂರು ದರ ರು.670.
ಉಡುಪಿ - ಬೆಂಗಳೂರು ದರ ರು.685.
ಕುಂದಾಪುರ - ಬೆಂಗಳೂರು ದರ ರು.735 ಆಗಿರುತ್ತದೆ.

ವೋಲ್ವೋ ಐರಾವತ ಮಾದರಿಯ ಸಾರಿಗೆ

ಮಂಗಳೂರು - ಬೆಂಗಳೂರು ದರ ರು.605.
ಉಡುಪಿ - ಬೆಂಗಳೂರು ದರ ರು.660.
ಕುಂದಾಪುರ - ಬೆಂಗಳೂರು ದರ ರು.715 ಆಗಿರುತ್ತದೆಯೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು ತಿಳಿಸಿರುತ್ತಾರೆ.

ಈ ನಡುವೆ, ಬೆಂಗಳೂರಿನಲ್ಲಿ ಸ್ಥಳೀಯ ಬಸ್ಸು ಪ್ರಯಾಣದ ಮೊದಲ ಸ್ಟೇಜ್ ದರವನ್ನು ಮಾತ್ರ 1 ರು.ನಷ್ಟು ಇಳಿಸಲಾಗಿದೆ. ಕೇವಲ 1 ಸ್ಟೇಜ್ ದರ ಮಾತ್ರ ಇಳಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಆಸೆ ತೋರಿಸಿ ಮೋಸ ಮಾಡಿದ ಹಾಗೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+