ಕ್ರೈಂ ರೌಂಡಪ್: ಅತ್ತೆ -ಸೊಸೆ ಒಂದೇ ದಿನ ನೇಣಿಗೆ

ಬೆಂಗಳೂರು, ಜು.4: ಅಮ್ಮನ ಮೇಲೆ ಕಣ್ಣು ಹಾಕಿದ ಎಂಬ ಕಾರಣಕ್ಕೆ ಚಿಕ್ಕಪ್ಪನನ್ನು ಕೊಂದು ರುಂಡವನ್ನು ಚೀಲದಲ್ಲಿ ಹಾಕಿಕೊಂಡು ಪರಪ್ಪನ ಅಗ್ರಹಾರ ಜೈಲಿನ ಕಡೆಗೆ ಬಂದ ಕೋಲಾರದ ಶೇಖರ್ ಕಥೆ ಇಲ್ಲಿ ಓದಿರುತ್ತೀರಿ. ಕರ್ನಾಟಕದಲ್ಲಿ ಕ್ರೈಂ ರೇಟ್ ದಿನೇ ದಿನೇ ಹೆಚ್ಚಾಗುತ್ತಿರುವುದು ಗುಟ್ಟಿನ ವಿಷಯವೇನಲ್ಲ.

ಅದರಲ್ಲೂ ರಾಜಧಾನಿ ಬೆಂಗಳೂರು ಹಾಗೂಸುತ್ತಮುತ್ತಲಿನ ಜಿಲ್ಲೆಗಳು ಮಹಿಳೆ ಹಾಗೂ ಮಕ್ಕಳ ಸುರಕ್ಷತೆ ಕಾಯುವಲ್ಲಿ ವಿಫಲವಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರ ಮಾಧ್ಯಮಗಳ ಒತ್ತಡದಿಂದ ಮಣಿಪಾಲ್ ಕೇಸ್ ಬಗ್ಗೆ ತಲೆ ಕೆಡಿಸಿಕೊಂಡಿದೆ. ಬೆಳ್ತಂಗಡಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯದ ಕೇಸ್ ಹಳ್ಳ ಹಿಡಿದಿದ್ದು ಮರತೇ ಹೋಗಿದ್ದು ದುರಂತ.

ಇಂದಿನ ಕ್ರೈಂ ನ್ಯೂಸ್ ಗಳ ಸಂಗ್ರಹದಲ್ಲಿ ಆತ್ಮಹತ್ಯೆ, ಮಾನಭಂಗ, ಅಸ್ವಾಭಾವಿಕ ಸಾವು ಮುಂತಾದ ಪ್ರಕರಣಗಳಿವೆ. ಕೋಲಾರ, ಉಡುಪಿ, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ಜಿಲ್ಲೆಗಳ ಆಯ್ದ ಚುಟುಕು ಕ್ರೈಂ ನ್ಯೂಸ್ ನಿಮಗಾಗಿ ಓದಿ...

ರಾಮನಗರ ಆತೆ ಸೊಸೆ ಕಥೆ

ರಾಮನಗರ ಆತೆ ಸೊಸೆ ಕಥೆ

ರಾಮನಗರ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೈಲಾಂಚ ಗ್ರಾಮದಲ್ಲಿ ಅತ್ತೆ ಹಾಗೂ ಸೊಸೆ ಒಂದೇ ದಿನ ನೇಣಿಗೆ ಶರಣಾಗಿದ್ದಾರೆ.

27 ವರ್ಷದ ಸೊಸೆ ವಿಶಾಲಾಕ್ಷಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದ ಕೂಡಲೇ 60 ವರ್ಷದ ಅತ್ತೆ ಪುಟ್ಟಮ್ಮ ಕೈಲಾಂಚ ಊರಿನಿಂದ 2 ಕಿ.ಮೀ ದೂರದ ಹೊಳೆ ಪಕ್ಕದ ಮರಕ್ಕೆ ಹಗ್ಗ ಬಿಗಿದುನೇಣು ಹಾಕಿಕೊಂಡಿದ್ದಾರೆ.

ವಿಶಾಲಾಕ್ಷಿ ಪತಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ. ಅತ್ತೆ -ಮಾವನ ಜೊತೆ ವಿಶಾಲಾಕ್ಷಿ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಅತ್ತೆ-ಸೊಸೆ ನಿರಂತರವಾಗಿ ಜಗಳವಾಡುತ್ತಿದ್ದರು. ಬುಧವಾರ ಬೆಂಗಳೂರಿಗೆ ಹೋಗಿ ಬಂದ ಸೊಸೆ ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ. ನಂತರ ಅತ್ತೆ ಸಾವಿಗೆ ಶರಣಾಗಿದ್ದಾರೆ. ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಬಿಇ ಪದವೀಧರೆ ಆತ್ಮಹತ್ಯೆ

ಬಿಇ ಪದವೀಧರೆ ಆತ್ಮಹತ್ಯೆ

ಬೆಂಗಳೂರು: ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯ ನಂಜರಸಪ್ಪ ಲೇನ್ ನಿವಾಸಿ ಭಾರತಿ ಬುಧವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಬೆಳಗ್ಗೆ ಮನೆಯವರಿಗೆ ವಿಷಯ ಗೊತ್ತಾಗಿದೆ.

ಡಿಯರ್ ಅಪ್ಪ, ತಾಯಿ ಹಾಗೂ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸೂಸೈಡ್ ನೋಟ್ ನಲ್ಲಿ ಭಾರತಿ ಬರೆದಿದ್ದಾರೆ. ಬಿಇ ಪದವೀಧರೆಯಾಗಿದ 22 ವರ್ಷದ ಭಾರತಿ ಅವರ ಆತ್ಮಹತ್ಯೆಯ ನಿಖರ ಕಾರಣ ತಿಳಿದು ಬಂದಿಲ್ಲ.

ದಾವಣಗೆರೆ ಕ್ರೈಂ

ದಾವಣಗೆರೆ ಕ್ರೈಂ

ಅಶೋಕ್ ಕುಮಾರ್ ಎಂಬುವರು ಹರಿಹರ ನಗರಕ್ಕೆ ಹೋಗಲು ಶಿವಮೊಗ್ಗ ರಸ್ತೆಯ ಎಪಿಎಂಸಿ ಮುಂದೆ ಸ್ಕೂಲ್ ಬಸ್ ಸ್ಟಾಪ್ ಹತ್ತಿರ ಹೀರೋ ಹೊಂಡ ಮೋಟರ್ ಸೈಕಲ್ನಲ್ಲಿ ತಮ್ಮ ಮಗಳನ್ನು ಶಾಲೆಯ ಬಸ್ಸಿಗೆ ಕಳುಹಿಸಿ ಮನೆಗೆ ವಾಪಸ್ ಬರುವಾಗ ಆಪಘಾತವಾಗಿದೆ.

ಹರಿಹರದ ಕಡೆಯಿಂದ ಕೆಎ-27-ಎಂ-4492ನೇ ಇಂಡಿಗೋ ಕಾರ್ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಗುದ್ದಿದ್ದಾನೆ.

ಎಡ ಕಾಲಿಗೆ, ಎಡ ಕಣ್ಣಿಗೆ, ತುಟಿಗೆ ಮತ್ತು ದೇಹದ ಇತರೆ ಭಾಗಗಳಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದ ಅಶೋಕ್ ಕುಮಾರ್ ಅವರನ್ನು ಕಂಡು ಕಾಣದಂತೆ ನೂರುಲ್ಲಾ ಖಾನ್ ಹೋಗಿರುತ್ತಾನೆ. ಸೂಕ್ತ ಕ್ರಮ ಜರುಗಿಸಿ ಎಂದು ದೂರು ದಾಖಲಿಸಲಾಗಿದೆ.
WRT : ಗುನ್ನೆ ನಂ: 131/2013, ಕಲಂ: 279.337 ಐಪಿಸಿ ರೆ/ವಿ 187 ಐ.ಎಂ.ವಿ. ಆಕ್ಟ್. ಸ್ಲೈಡ್ ನಲ್ಲಿ ಸಾಂದರ್ಭಿಕ ಚಿತ್ರ

ಗಂಡನಿಂದ ಕಿರುಕುಳ ಪ್ರಕರಣ

ಗಂಡನಿಂದ ಕಿರುಕುಳ ಪ್ರಕರಣ

ಕಡೂರು:ಶ್ರೀಮತಿ ಶೈಲಜಾ ಮಲ್ಲೇಶ್ವರ ಗ್ರಾಮದ ವಾಸಿ ಇವರು ಈಗ್ಗೆ 15 ವರ್ಷಗಳ ಹಿಂದೆ ಶಿವಯ್ಯ ರವರೊಂದಿಗೆ ಮದುವೆಯಾಗಿದ್ದು. 02 ಜನ ಗಂಡು ಮಕ್ಕಳಿದ್ದಾರೆ.

ತನ್ನ ಗಂಡ ಅನುಮಾನಪಟ್ಟು ಹಿಂಸಿಸುತ್ತಿದ್ದಾರೆ. ಮನೆ ಅವರ ಹೆಸರಿಗೆ ಬರೆದುಕೊಡುವಂತೆ ಪೀಡಿಸಿದ್ದಾರೆ. ಈ ಹಿಂದೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ಘಟನೆಯಲ್ಲಿ ನನ್ನ ಎರಡು ಕಾಲುಗಳು ಸುಟ್ಟಿವೆ. ನನ್ನ ಗಂಡ ಶಿವಯ್ಯ ನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ದೂರು ಸಲ್ಲಿಸಿದ್ದಾರೆ.

* ಕಡೂರು ಪೊಲೀಸ್ ಠಾಣೆ 173/2013 - ಕಲಂ: 498(ಎ) 307 ಐಪಿಸಿ

ಬ್ರಹ್ಮಾವರದಿಂದ ಬಂದ ಸುದ್ದಿ

ಬ್ರಹ್ಮಾವರದಿಂದ ಬಂದ ಸುದ್ದಿ

ಉಡುಪಿ ತಾಲೂಕು ಹನೆಹಳ್ಳಿ ಗ್ರಾಮದ ಬಾರ್ಕೂರು ಎನ್.ಎಸ್ ಕಂಪೌಂಡಿನಲ್ಲಿ ಅಸಹಜ ಸಾವು ಸಂಭವಿಸಿದೆ.

ಮಹಾಬಲ ಗಾಣಿಗ ಅವರ ಪುತ್ರ ವಿವೇಕಾನಂದ ಗಾಣಿಗ ಅಲಿಯಾಸ್ ಬಾಬು ನೀಡಿರುವ ಮಾಹಿತಿ ಪ್ರಕಾರ ಅವರ ತಮ್ಮ 45 ವರ್ಷದ ಜಯ ಗಾಣಿಗ ಅವರು ಬಾವಿಯ ನೀರು ಸೇದುವಾಗ ಹಗ್ಗ ರಾಟೆಗೆ ಸಿಕ್ಕಿಕೊಂಡು ಅದನ್ನು ಸರಿಪಡಿಸಲು ಬಾವಿಯ ದಂಡೆ ಹತ್ತಿದಾಗ ಆಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದು ಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿದೆ.

ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 34/13 ಕಲಂ:174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋಲಾರ ಕ್ರೈಂ

ಕೋಲಾರ ಕ್ರೈಂ

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ರಾಯಲ್ಪಾಡು ಗ್ರಾಮದ ವಾಸಿಯಾದ ಸಿರಾಜ್ ಪಾಷಾ ಎಂಬುವರು ಅದೇ ಗ್ರಾಮದ ವಾಸಿಯಾದ ಜಿಗಣು ಎಂಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ರಾಯಲ್ಪಾಡು ಗ್ರಾಮದಿಂದ ಕರೆದುಕೊಂಡು ಹೋಗಿ ಕೋಲಾರ ಮತ್ತು ಚಿಂತಾಮಣಿಯಲ್ಲಿ ಅತ್ಯಾಚಾರ ಮಾಡಿ ನಂತರ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾರೆ.

ಜಿಗಣು ರವರು ರಾಯಲ್ಪಾಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+