ಭಾರತೀಯರೇ ತಕ್ಷಣ ವೀಸಾ ಪಡೆದುಕೊಳ್ಳಿ

visa,
ರಿಯಾದ್, ಜು.1 : ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯಿಂದಾಗಿ ದೇಶ ತೊರೆಯುವ ಭಾರತೀಯ ಸಂಜಾತರು, ತಕ್ಷಣ ತಮ್ಮ ಅಂತಿಮ ವೀಸಾವನ್ನು ಪಡೆದುಕೊಳ್ಳಬೇಕೆಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿ ಮನವಿ ಮಾಡಿದೆ.

'ನಿತಾಕತ್' ನಿಯಮದ ಅನ್ವಯ ಸಾವಿರಾರು ಭಾರತೀಯರು ಸೌದಿ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಉದ್ಯೋಗ ಕಳೆದುಕೊಂಡ ವಿದೇಶಿಯರು ದೇಶ ತೊರೆಯಲು ಸೌದಿ ಸರ್ಕಾರ ಜು.3ರ ಅಂತಿಮ ಗಡುವು ನೀಡಿದೆ.

ನಂತರವೂ ದೇಶದಲ್ಲಿ ನೆಲೆಸಿದ್ದರೆ, ಬಂಧಿಸುವುದಾಗಿ ಸೌದಿ ಸರ್ಕಾರ ಆದೇಶ ನೀಡಿದೆ. ಆದ್ದರಿಂದ ಸಾವಿರಾರು ಭಾರತೀಯ ಸಂಜಾತರು ದೇಶಕ್ಕೆ ಮರಳಲು ಎಮರ್ಜೆನ್ಸಿ ಸರ್ಟಿಫಿಕೇಟ್ ನಿಡಬೇಕೆಂದು ರಿಯಾದ್‌ ಪ್ರಾಂತ್ಯದಲ್ಲಿರುವ ರಾಯಭಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಸದ್ಯ ಅರ್ಜಿಗಳ ಪರಿಶೀಲನೆ ಮಗಿದಿದ್ದು, ಭಾರತಕ್ಕೆ ಹಿಂದಿರುಗುವ ನಾಗರೀಕರು ಅಂತಿಮ ವೀಸಾವನ್ನು ಪಡೆದುಕೊಳ್ಳಬೇಕೆಂದು ರಾಯಭಾರ ಕಚೇರಿ ಮನವಿ ಮಾಡಿದೆ. ಮೊದಲನೇ ಹಂತದಲ್ಲಿ 15 ಸಾವಿರ ಭಾರತೀಯರು ದೇಶಕ್ಕೆ ಮರಳುವ ಸಾಧ್ಯತೆ ಇದೆ.

ನಿತಾಕತ್ ನಿಯಮದಿಂದಾಗಿ ಸುಮಾರು 27 ಸಾವಿರಕ್ಕೂ ಅಧಿಕ ಭಾರತೀಯರು ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ನಿಯಾಕತ್ ನಿಯಮ ಅನುಷ್ಠಾನಗೊಳಿಸಿದ ನಂತರವೂ 5 ಸಾವಿರ ಭಾರತೀಯರಿಗೆ ಕೆಲಸ ಕೊಡಲು, ಸೌದಿಯ ಅನೇಕ ಕಂಪನಿಗಳು ನಿರ್ಧರಿಸಿವೆ.

ನಿತಾಕತ್ ಎಂದರೇನು : ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯನ್ನು ನಿತಾಕತ್ ಎನ್ನುತ್ತಾರೆ. ಇದರ ಪ್ರಕಾರ, ಕಂಪನಿಗಳು 10 ಮಂದಿ ಹೊರದೇಶದವರ ಜೊತೆ ಒಬ್ಬರು ಸ್ಥಳೀಯ ಕೆಲಸಗಾರನಿಗೆ ಉದ್ಯೋಗ ನೀಡಬೇಕು.

ಈ ನೀತಿ ಜಾರಿಗೆ ಬಂದ ನಂತರ ಸಹಸ್ರಾರು ವಿದೇಶಿಯರು ಸೌದಿಯಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ. ಇವರಲ್ಲಿ ಸುಮಾರು 27 ಸಾವಿರಕ್ಕೂ ಅಧಿಕ ಭಾರತೀಯರಿದ್ದಾರೆ ಎಂದು ಅಂದಾಜಿಸಲಾಗಿದೆ. (ಸೌದಿ ಅರೇಬಿಯಾದಿಂದ ಸಾವಿರಾರು ನೌಕರರು ಭಾರತಕ್ಕೆ)

ಸೌದಿ ಸರ್ಕಾರ ನೀಡಿದ ಜು.3ರ ಅಂತಿಮ ಗಡುವಿನ ನಂತರವೂ ದೇಶದಲ್ಲಿದ್ದರೆ, ಬಂಧಿಸುವುದಾಗಿ ಸರ್ಕಾರ ಆದೇಶ ನೀಡಿದೆ. ಆದ್ದರಿಂದ ಉದ್ಯೋಗ ವಂಚಿತರು ಭಾರತಕ್ಕೆ ಮರಳಲು ಸಿದ್ಧರಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+