ಬಿಗ್ ಬಾಸ್ ವಿನ್ನರ್ - ಸಮೀಕ್ಷಾ ವರದಿ
ಬೆಂಗಳೂರು, ಜೂ.30 : ಕೋಟ್ಯಂತರ ಕನ್ನಡಿಗರ ಮೆಚ್ಚುಗೆ, ಟೀಕೆ, ಟಿಪ್ಪಣಿ, ಗೇಲಿ, ಕುಹಕಕ್ಕೆ ಪಾತ್ರವಾಗಿರುವ ಈಟಿವಿ ವಾಹಿನಿಯ ಬಹುಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ವಿಜಯಶಾಲಿಯಾಗಿದ್ದಾರೆ.
ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ನಟ, ವಿಜಯ ರಾಘವೇಂದ್ರ ಅವರಿಗಿಂತ 574 ಹೆಚ್ಚು ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಆನಂತರದ ಸ್ಥಾನಗಳನ್ನು ನರೇಂದ್ರ ಬಾಬು ಶರ್ಮಾ ಮತ್ತು ನಿಖಿತಾ ತುಕ್ರಾಲ್ ಗಳಿಸಿದ್ದಾರೆ.
ಒಟ್ಟು ಚಲಾವಣೆಯಾದ ಮತಗಳು 5263 ( ಭಾನುವಾರ ಮಧ್ಯಾನ್ಹ 1 ಗಂಟೆಯವರೆಗೆ) ಒನ್ ಇಂಡಿಯ ಕನ್ನಡ ನಡೆಸಿದ ರಿಯಲ್ ಸಮೀಕ್ಷೆಯಲ್ಲಿ ಈ ಫಲಿತಾಂಶ ಹೊರಬಿದ್ದಿದೆ. "ಸ್ಪರ್ಧೆಯ ಅಂತಿಮ ಹಂತ ತಲುಪಿದ್ದ ನಾಲ್ವರಲ್ಲಿ ವಿಜೇತರಾಗುವವರು ಯಾರು? ಊಹಿಸಿ" - ಎನ್ನುವುದು ನಮ್ಮ ಅಂತರ್ ಜಾಲ ತಾಣದ ಪ್ರಶ್ನೆ ಆಗಿತ್ತು. [ಬಿಗ್ ಬಾಸ್ ವಿನ್ನರ್ ಇಲ್ಲಿದ್ದಾರೆ ನೋಡಿ]

ನಾಲ್ವರೂ ಸ್ಪರ್ಧಿಗಳು ಗಳಿಸಿದ ಒಟ್ಟಾರೆ ಮತ ಹಾಗೂ ಪ್ರತಿಶತ ಮತಗಳಿಕೆ ಪ್ರಮಾಣವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. ತುಂಬ ತುರುಸಿನಿಂದ ನಡೆಯುತ್ತಿರುವ ಬಿಗ್ ಬಾಸ್ ಸ್ಪರ್ಧೆಯ ವಿಜೇತರನ್ನು ಆರಿಸಲು ನಮ್ಮ ಓದುಗ ಸಮೂಹ ಅಷ್ಟೇ ಉತ್ಸಾಹದಿಂದ ಸಮೀಕ್ಷೆಯಲ್ಲಿ ಪಾಲ್ಗೊಂಡಿತ್ತು. ಮತ ಚಲಾಯಿಸಿದ ಎಲ್ಲ ಮತದಾರ ಬಂಧುಗಳಿಗೆ ಧನ್ಯವಾದಗಳು.
ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಅಂತಿಮ ಹಣಾಹಣಿ ಈಟಿವಿ ಕಿರುತೆರೆ ಮೇಲೆ ಇಂದು ( ಭಾನುವಾರ, ಜೂ 30) ಸಂಜೆ 8 ಗಂಟೆಗೆ ಆರಂಭವಾಗತ್ತೆ. ಆಟೋ ರಾಜ ಗಣೇಶ್ ಸೇರಿದಂತೆ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಪಾತ್ರಧಾರಿಗಳೂ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಡು, ಕುಣಿತ, ಜಾಹಿರಾತು ಹಾಗೂ ಬಿಗ್ ಬಾಸ್ ವಿಜೇತರಾರು? ಎಂಬ ಕುತೂಹಲ ಭರಿತ ರಿಯಾಲಿಟಿ ಶೋವನ್ನು ಕಣ್ತುಂಬಿಕೊಳ್ಳಿ. ಆಲ್ ದಿ ಬೆಸ್ಟ್.
ಇಂತಹ ಶೋಗಳನ್ನು ನೋಡುವುದಕ್ಕೆ ಆಸಕ್ತಿ ಇಲ್ಲದವರು ನಿರಾಶರಾಗುವಂತಿಲ್ಲ. ನೂರಾರು ಚಾನಲ್ಲುಗಳಿವೆ, ಸಾವಿರಾರು ಕಾರ್ಯಕ್ರಮಗಳಿವೆ. ಅದರಲ್ಲಿ ಗಮನ ಸೆಳೆಯುವುದು ಶ್ರೀಲಂಕ-ಭಾರತ-ವೆಸ್ಟ್ ಇಂಡೀಸ್ ನಡುವೆ ವೆಸ್ಟ್ ಇಂಡೀಸ್ ನೆಲದಲ್ಲಿ ನಡೆಯುತ್ತಿರುವ 50 ಓವರುಗಳ ತ್ರಿಕೋಣ ಸರಣಿ ಪಂದ್ಯ. ಇಂದೇ ಅಂದರೆ ಭಾನುವಾರ ಸಂಜೆ 8 ಗಂಟೆಗೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಕಿಂಗ್ ಸ್ಟನ್ ನಲ್ಲಿ ಪಂದ್ಯ ಇದೆ. ಚಾನಲ್ : ಟೆನ್ ಸ್ಪೋರ್ಟ್ಸ್












Click it and Unblock the Notifications