ಬೆಂಗಳೂರಿನಲ್ಲಿ ಹಸಿರೇ ಉಸಿರೆನ್ನುವ ನಿಕ್ ಹಾಲಿಕ್
ಬೆಂಗಳೂರು, ಜೂ. 28 : ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಿಕ ತಜ್ಞ, ಜೀವನೋತ್ಸಾಹಿ ಮಾತುಗಾರ, ಪರಿಸರ ಪ್ರೇಮಿ ನಿಕ್ ಹಾಲಿಕ್ ಬೆಂಗಳೂರಿಗೆ ಆಗಮಿಸಿ ತಮ್ಮ ಪ್ರೇರಣಾದಾಯಕ ಮಾತುಗಳಿಂದ ಯುವ ಹೃದಯಗಳಲ್ಲಿ ಉತ್ಸಾಹದ ಕಿಚ್ಚು ಹಚ್ಚಿದ ಸಂವಾದ ಕಾರ್ಯಕ್ರಮಕ್ಕೆ ಕೆ.ಆರ್.ಪುರಂ ಬಳಿಯ ಹೆಬ್ರಾನ್ ಎನ್‌ಕ್ಲೇವ್ ಸಾಕ್ಷಿಯಾಯಿತು.
"ಮೂಟಿವೇಷನ್ ಟೂರ್" ಅಂಗವಾಗಿ ಬೆಂಗಳೂರಿಗೆ ಆಗಮಿಸಿದ್ದ ನಿಕ್ ಹಾಲಿಕ್ ಅವರೊಂದಿಗೆ ಕೋಶಿಶ್ ಬಿ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಿಕ್ ಮುಕ್ತ ಸಂವಾದ ನಡೆಸಿದರಲ್ಲದೆ ತಮ್ಮ ಮಾತುಗಳುದ್ದಕ್ಕೂ ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿದರು.

ಪರಿಸರ, ಸಾಮಾಜಿಕ ವಿಷಯಗಳ ಮೇಲೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಬೆರಗು ಹುಟ್ಟಿಸಿದರು. ಅವರು "ಪ್ರಕೃತಿಯೊಂದಿಗಿನ ಜೀವನದ ಪ್ರಮುಖ್ಯತೆ" ಎಂಬ ವಿಷಯದ ಮೇಲೆ ನಿರರ್ಗಳವಾಗಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿದರು. ಒಂದು ತಾಸಿಗೂ ಹೆಚ್ಚು ಕಾಲ ಸಂವಾದ ನಡೆಸಿದರು. ಪ್ರಕೃತಿ ಸ್ನೇಹಿಗಳಾಗಿ ಬದುಕುವಂತೆ ಕರೆ ನೀಡಿದರು.
"ನೀವು ಯಾವುದೇ ನಗರ ದೇಶದಲ್ಲಿ ಬದುಕಿ, ನಿತ್ಯ ಜೀವನ ಬಗ್ಗೆ, ಆಗು ಹೋಗುಗಳ ಬಗ್ಗೆ ಕ್ಷಣಕಾಲವಾದರೂ ಚಿಂತಿಸಿ, ಆಗ ನೀವು ನಿಮ್ಮತನವನ್ನು ಅರ್ಥ ಮಾಡಿಕೊಳ್ಳುತ್ತೀರಿ" ಎಂದು ಯುವ ಜನತೆಗೆ ಅವರು ಕಿವಿಮಾತು ಹೇಳಿದರು.
ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಶುದ್ದ ಚಿಂತನೆಗಳು ನಮ್ಮಲ್ಲಿ ಮೂಡಲು ಕಾರವಾಗುತ್ತದೆ. ನಿಸರ್ಗದ ಮಡಿಲಲ್ಲಿ ನಾವು ಮುಗ್ಧ ಕಂದಮ್ಮಗಳಾಗುತ್ತವೆ. ನಿಸರ್ಗವೇ ನಮ್ಮ ಅಭಿವೃದ್ದಿ, ಉನ್ನತಿಗೆ ಕಾರಣವಾಗಿದೆ. ನೈಸರ್ಗಿಕ ಸಂಪತ್ತು ಸೇರಿದಂತೆ ನಾವು ಎಲ್ಲವನ್ನು ಅನುಭವಿಸುತ್ತಿದ್ದೇವೆ. ಅಂತಹ ನಿಸರ್ಗ, ವಾತಾವರಣವನ್ನು ಇಂದು ಹಾಳು ಮಾಡುತ್ತಿದ್ದೇವೆ. ಇದಕ್ಕೆ ಜಗತ್ತು ಯಾವತ್ತಾದರೊಂದು ದಿನ ಬೆಲೆ ಕಟ್ಟಲೇ ಬೇಕಾಗುತ್ತದೆ ಎಂದು ಯುವ ಮನಸ್ಸುಗಳನ್ನು ಎಚ್ಚರಿಸಿದರು.
ಮಳೆ ಕೊಯ್ಲು ಬಳಸಿ ನೀರು ಸಮಸ್ಯೆ ಪರಿಹರಿಸಿಕೊಳ್ಳುವುದು, ಮನೆ ನಿರ್ಮಾಣದ ಸಂದರ್ಭದಲ್ಲಿ ಸಾಕಷ್ಟು ಗಾಳಿ ಬೆಳಕು ಬರುವಂತೆ ಕಿಟಿಕಿ ಬಾಗಿಲು ಹೊರಾಂಗಣಗಳನ್ನು ನಿರ್ಮಿಸಿ ವಿದ್ಯುತ್ ಉಳಿಸುವುದು, ಸೌರಶಕ್ತಿ ಬಳಕೆ ಸೇರಿದಂತೆ ಪರಿಸರ ಸ್ನೇಹಿ ಜೀವನವನ್ನು ಅಳವಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಹೆಬ್ರಾನ್ ಇಂಟರ್‌ನ್ಯಾಷನಲ್ ಸಿಇಓ ಪ್ರೇನಂದ್ ಪ್ರೇಮಚಂದ್ರನ್ ಮಾತನಾಡಿ ನಿಕ್ ಹಾಲಿಕ್ ಮಾತುಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಕರೆ ನೀಡಿದರು.












Click it and Unblock the Notifications