ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡು ಬಡತನ, ಕಂದಮ್ಮನನ್ನೇ ಮಾರಿದ ತಾಯಿ!

|
Google Oneindia Kannada News

baby
ತುಮಕೂರು, ಜೂ.26 : ಒಂದು ಸಾವಿರ ರೂ.ಗಳಿಗಾಗಿ ಮಹಿಳೆಯೊಬ್ಬಳು ತನ್ನ ಮಗುವನ್ನೇ ಮಾರಾಟ ಮಾಡಿರುವ ಘಟನೆ ಪಾವಗಡ ತಾಲೂಕಿನ ಕ್ಯಾತಗಾನಕೆರೆ ತಾಂಡಾದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಪಾವಗಡ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾತಗಾನಕೆರೆ ತಾಂಡಾದ ನಾಗವೇಣಿ ಎಂಬುವವರು 22 ದಿನಗಳ ಹಿಂದೆ, ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ, ಆಸ್ಪತ್ರೆಯಿಂದ ಮರಳಿ ಬಂದ ಮೇಲೆ, ನಾಗವೇಣಿ ತನ್ನ ಮಗುವನ್ನು ಮಾರಾಟ ಮಾಡಿದ್ದಾರೆ.

ಮಗುವನ್ನು ಒಂದು ಸಾವಿರ ರೂ. ನೀಡಿ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರಳಾಗಿರುವ ನಳಿನಿ ಎಂಬುವವರು ಖರೀದಿ ಮಾಡಿರುವುದು ತಿಳಿದು ಬಂದಿದೆ. ಮಗುವನ್ನು ವಶಕ್ಕೆ ಪಡೆದಿರು ಪೊಲೀಸರು, ಮಕ್ಕಳ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ : ಗ್ರಾಮದಲ್ಲಿ ಮಗುವಿನ ಜನನವಾಗಿರುವ ಮಾಹಿತಿ ನಾಗಲಮಡಿಕೆ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸರಸ್ವತಿ ಅವರಿಗೆ ತಿಳಿದಿತ್ತು. ಮಗುವಿಗೆ ತಿಂಗಳ ಲಸಿಕೆ ಹಾಕಲು ನಾಗವೇಣಿಯವರ ಮನೆಗೆ ಸರಸ್ವತಿ ಅವರು ತೆರಳಿದಾಗ ಮಗುವನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸರಸ್ವತಿ ಅವರು ತಕ್ಷಣ ಸಿ.ಡಿ.ಪಿ.ಓ (ಮಕ್ಕಳ ಕಲ್ಯಾಣ ಯೋಜನಾಧಿಕಾರಿ) ಉಷಾ ಅವರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ಸಹಾಯದಿಂದ ನಳಿನಿ ಅವರ ಮನೆಗೆ ಭೇಟಿ ನೀಡಿದಾಗ ಮಗು ಅಲ್ಲಿ ಪತ್ತೆಯಾಗಿದೆ. ಮಗುವನ್ನು ಮಕ್ಕಳ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ಮಗುವನ್ನು ಮಾರಾಟ ಮಾಡಲು ಬಡತನವೇ ಕಾರಣವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. (ಬಡತನ ಮಗುವನ್ನೇ ಕೊಂದ ತಾಯಿ!)

English summary
A 22-day-old baby girl, who was allegedly sold by her poverty stricken mother for a paltry sum of Rs 1,000. indecent reported at Tumkur district, Pavagada taluk, child is now under the care of the child welfare committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X