ಕಾಂಗ್ರೆಸ್ ಜೊತೆ ಮೈತ್ರಿ: ದೇಶದ ರಾಜಕೀಯದಿಂದ ನಿರ್ನಾಮ

ಪಾಟ್ನಾ, ಜೂ 25: ಜೆಡಿಯು ಬಿಜೆಪಿಯಿಂದ ದೂರವಾದ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ನಿತೀಶ್ ಕುಮಾರ್ ವಿರುದ್ದ ಹರಿಹಾಯ್ದಿದ್ದಾರೆ. ಒಂದು ವೇಳೆ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾದರೆ ಭಾರತದ ರಾಜಕೀಯದಿಂದ ನಿರ್ನಾಮವಾಗಲಿದ್ದೀರಾ ಎನ್ನುವ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, ಸುಮಾರು ಹನ್ನೊಂದು ವರ್ಷ ನಿಮಗೆ ನರೇಂದ್ರ ಮೋದಿ ಸಮಸ್ಯೆಯಾಗಿ ಕಾಣಲಿಲ್ಲ, ಈಗ ಏಕಾಏಕಿ ಅವರಿಗೆ ಕೋಮುವಾದಿ ಪಟ್ಟ ಕಟ್ಟುತ್ತಿದ್ದೀರಾ. ದೇಶದ ಜನತೆ ದಡ್ಡರಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

You will be wiped out Rajanth Singh cautions Nitish Kumar

ಜೆಡಿಯು ಕಮಲದ ಮೇಲಿನ ಮುತ್ತುರತ್ನದಂತಿತ್ತು. ಆದರೆ ನಿಮಗೆ ಇದು ಬೇಡವಾಗಿ ಕೇವಲ ನೀರಾಗಿ ಮಾರ್ಪಟ್ಟಿದೆ. ಹದಿನೇಳು ವರ್ಷಗಳ ಮೈತ್ರಿಯನ್ನು ಕಡಿದುಕೊಂಡಿದ್ದೀರಾ.

ಕಮಲದ ಮೇಲೆ ಬಿದ್ದ ಒಂದು ಹನಿ ನೀರು ಮುತ್ತಾಗಿ ಹೊಳೆಯುತ್ತದೆ. ಅದು ಎಲೆ ಮೇಲೆ ಬಿದ್ದರೆ ಅದನ್ನು ಯಾರೂ ಕೇಳುವವರಿಲ್ಲ ಎಂದು ನಿತೀಶ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

NDA ಮೈತ್ರಿ ತೊರೆದಾಕ್ಷಣ ನಿತೀಶ್ ಕುಮಾರ್ ಅವರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಜಾತ್ಯಾತೀತ ನಾಯಕರನ್ನು ಕಾಣುತ್ತಾರೆ. ಪ್ರಧಾನಿ ಹೊಗಳಿಕೆಗೆ ನಿತೀಶ್ ಸಂತಶ ವ್ಯಕ್ತ ಪಡಿಸುತ್ತಾರೆ.

ಇದು ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಹೊಂದಲು ಪೂರ್ವ ತಯಾರಿಯೇ? ಕಾಂಗ್ರೆಸ್ಸಿನೊಂದಿಗೆ ನೀವು ಮೈತ್ರಿಗೆ ಮುಂದಾದರೆ ಜೆಡಿಯು ಧೂಳೀಪಟವಾಗುವುದು ನಿಶ್ಚಯ ಎಂದು ರಾಜನಾಥ್ ಸಿಂಗ್ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+