ಇನ್ನೊಂದು ವರ್ಷ ಕೇದಾರ- ಕೈಲಾಸ ಯಾತ್ರೆ ಮಾಡಬೇಡಿ
ನವದೆಹಲಿ, ಜೂನ್ 20: ಶಿವನ ಭಕ್ತರಿಗೆ ಇದು ನಿಜಕ್ಕೂ ನಿರಾಶಾದಾಯಕ ಸುದ್ದಿ. ಉತ್ತರ ಭಾರತದದಲ್ಲಿ ವರುಣರಾಯ ಸುಮಾರು 9 ದಶಕಗಳ ದಾಖಲೆಯನ್ನು ಮುರಿದು ಜಲಪ್ರವಾಹ ಹಾವಳಿ ಮಾಡಿದ್ದಾನೆ. ಅದರ ಫಲವಾಗಿ ಇನ್ನೊಂದು ವರ್ಷ ಕಾಲ ದೇವರು ದಿಂಡಿರು ಎಂದು ಕೇದಾರನಾಥ ದೇವಾಲಯ ಸೇರಿದಂತೆ ಉತ್ತರ ಭಾಗಗಳಲ್ಲಿ ತೀರ್ಥಯಾತ್ರೆ ಕೈಗೊಳ್ಳುವ ಮುನ್ನ ಮತ್ತೆ ಮತ್ತೆ ಯೋಚಿಸಿ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಿಮಾಲಯ ಪರ್ವತಶ್ರೇಣಿಯಲ್ಲಿರುವ ವಿಶ್ವವಿಖ್ಯಾತ ಕೇದಾರನಾಥ ದೇವಾಲಯದ ಗರ್ಭಗುಡಿ ಸುರಕ್ಷಿತವಾಗಿಯೇ ಇದೆ. ಆದರೆ ದೇಗುಲದ ಪರಿಸರವು ಜಲಪ್ರವಾಹದಿಂದ ಹಾಳಾಗಿದೆ.
ಇದನ್ನು ಸ್ವಚ್ಛಗೊಳಿಸಲು ಕನಿಷ್ಠ ಒಂದು ವರ್ಷ ಬೇಕಾದೀತು. ಹೀಗಾಗಿ ಒಂದು ವರ್ಷದವರೆಗೆ ಮಂದಿರವನ್ನು ಯಾತ್ರಿಕರಿಗೆ ಮುಚ್ಚಲು ಉತ್ತರಾಖಂಡ ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೇದಾರನಾಥ ಪಟ್ಟಣವು ಪ್ರವಾಹದಲ್ಲಿ ಬಹುತೇಕ ನಾಶವಾಗಿದೆ. ದೇಗುಲದ ಆವರಣ ಗೋಡೆ ಕುಸಿದಿದೆ. ಆದರೆ ದೇಗುಲದ ಒಳಭಾಗ ಸುರಕ್ಷಿತವಾಗಿದೆ. ಪಟ್ಟಣದ ಬಹುತೇಕ ಕಟ್ಟಡಗಳು, ಅಂಗಡಿ, ಹೋಟೆಲುಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ನವದೆಹಲಿಯಲ್ಲಿ ಪ್ರಧಾನಿ ಸಿಂಗ್ ಅವರನ್ನು ಬುಧವಾರ ಭೇಟಿಯಾದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೈಲಾಸ ಯಾತ್ರೆಯೂ ರದ್ದು
ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಪ್ರಸಕ್ತ ಸಾಲಿನ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ತಂಡ 2 ರಿಂದ 10ರ ವರೆಗಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಒಲ್ಮೋರಾದಿಂದ ತವಾಘಾಟ್ ವರೆಗಿನ ರಸ್ತೆಯು ಮಳೆ ಪ್ರವಾಹದಿಂದಾಗಿ ಕೊಚ್ಚಿ ಹೋಗಿದೆ. ಮಾತ್ರಲ್ಲದೆ ಈ ಮಾರ್ಗದಲ್ಲಿ ಬರುವ ಪ್ರಮುಖ ಸೇತುವೆಗಳು ಹಾನಿಗೊಂಡಿವೆ. ಜತೆಗೆ ತವಾಘಾಟ್ ಪ್ರದೇಶಕ್ಕೆ ನಡೆದುಕೊಂಡು ಹೋಗುವ ದಾರಿಯೂ ಹಾಳಾಗಿದೆ.
ರಾಜ್ಯ ಸರಕಾರದ ನೆರವು:
ಸಂಕಷ್ಟದಲ್ಲಿ ಸಿಲುಕಿರುವವರ ಕನ್ನಡಿಗರ ನೆರವಿಗೆ ರಾಜ್ಯ ಸರಕಾರ ಮುಂದಾಗಿದೆ. ಕೆಲವು ತುರ್ತು ಸೇವೆಗಳನ್ನೂ ಒದಗಿಸಿದೆ. ತುರ್ತು ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು:
Bangalore - 080- 2225 3707
National Disaster Response Force (NDRF): 011- 26701728
Minsitry of Home affairs Contriol Room : 011- 23093563
Rudraprayaga Control Room (Uttarkhand Dist) : 01 3642333727
Rudraprayaga DC Office: 01 364233370












Click it and Unblock the Notifications