ಕೆಲಸದ ನೆಪದಲ್ಲಿ ಬೆಂಗಳೂರಿನಲ್ಲಿ ಸ್ಟೂಡೆಂಟ್ ರೇಪ್

ಮಂಡ್ಯ ತಾಲೂಕು ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಶಿಕ್ಷಣ ಟ್ರಸ್ಟಿನ ಎಸ್ ಎಸ್ ವಿವೇಕಾನಂದ (52) ಆರೋಪಿ ಶಿಕ್ಷಕ. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ಏನಾಯಿತೆಂದರೆ ಒಳ್ಳೆಯ ಕಡೆ ಕೆಲಸ ಕೊಡಿಸುವುದಾಗಿ ಪಿಯುಸಿ, ಬಿಎಡ್ ಪಾಸಾಗಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಶಿಕ್ಷಕ ವಿವೇಕಾನಂದ ಆಕೆಯನ್ನು ಕಳೆದ ಶನಿವಾರ ಬೆಂಗಳೂರಿಗೆ ಕರೆತಂದು ಕಮಲಾ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ. ಆದರೆ ಶನಿವಾರ ರಾತ್ರಿ ಲಾಡ್ಜ್ ನಲ್ಲಿ ಇಬ್ಬರೇ ಉಳಿದುಕೊಂಡಿದ್ದಾಗ ದೈಹಿಕ ಶಿಕ್ಷಕ ವಿವೇಕಾನಂದ ಸದರಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಊರಿಗೆ ಮರಳಿದ ವಿದ್ಯಾರ್ಥಿನಿ ಮನೆಯವರ ಮುಂದೆ ತನ್ನ ದುಃಖವನ್ನು ತೋಡಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಮುಂದೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.












Click it and Unblock the Notifications