ಪ್ರಧಾನಿ ಜೂಲಿಯಾ ಬೆಂಬಲಿಸಿ ಎದೆಗಾರ್ತಿಯರ ಪ್ರತಿಭಟನೆ
ಸಿಡ್ನಿ, ಜೂ.19: ಆಸ್ಟ್ರೇಲಿಯಾದ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರ ವಿರುದ್ಧ ಬಂದ ಕೆಟ್ಟ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ವಿಶಿಷ್ಟವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊಪೆನ್ ಹೇಗನ್ ನಲ್ಲಿ ನಡುರಸ್ತೆಯಲ್ಲಿ ತಾಯಂದಿರು ಸ್ತನ್ಯಪಾನ ಪ್ರತಿಭಟನೆ ಮಾಡಿದ್ದನ್ನು ಕಂಡಿದ್ದಿರಿ ಈಗ ಈ ವಿಶಿಷ್ಟ ಪ್ರತಿಭಟನೆ ಬಗ್ಗೆ ತಿಳಿಯಿರಿ
ರೇಡಿಯೋ ಕಾರ್ಯಕ್ರಮವೊಂದರಲ್ಲಿ ಅಂಕಣಕಾರ್ತಿ ಗ್ರೇಸ್ ಕಾಲ್ಲಿಯರ್ ಅವರು ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರು ಸಂಸತ್ತಿನಲ್ಲಿ ತಮ್ಮ ಘನತೆಗೆ ತಕ್ಕ ಉಡುಪು ಧರಿಸುತ್ತಿಲ್ಲ. ಅವರು ಎದೆ ಸೀಳು (cleavage) ಹೆಚ್ಚಾಗಿ ಕಾಣುವ ರೀತಿಯಲ್ಲಿ ಉಡುಪು ಧರಿಸುವುದು ಮುಜುಗರವಾಗಿದೆ ಎಂದು ಹೇಳಿಬಿಟ್ಟ.
ಇದರಿಂದ ಕೆರಳಿದ ಮಹಿಳಾ ಶೋತೃಗಳು ಪ್ರಧಾನಿ ಜೂಲಿಯಾ ಪರ ಆನ್ ಲೈನ್ ಪ್ರತಿಭಟನೆ ಹಮ್ಮಿಕೊಂಡರು. ನೂರಾರು ಮಹಿಳೆಯರು ತಮ್ಮ ಎದೆ ಸೀಳು ಕಾಣುವ ಚಿತ್ರಗಳನ್ನು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ವಿಶಿಷ್ಟ ಪ್ರತಿಭಟನೆಗೆ ಚಾಲನೆ ನೀಡಿದರು.
ಮಹಿಳೆಯ ಎದೆ ಮೇಲೆ ನಿಮಗೇಕೆ ಕಣ್ಣು ಎಂದು ಪ್ರಶ್ನಿಸುತ್ತಾ ಫೇಸ್ ಬುಕ್ ಪುಟದಲ್ಲಿ ಆಸೀಸ್ ಮೂಲದ ಮಹಿಳೆಯರು ತಮ್ಮ ಎದೆ ಪ್ರದರ್ಶಿಸಿದರು. ರೇಡಿಯೋ ಕಾರ್ಯಕ್ರಮದಲ್ಲಿ ಅಂಕಣಕಾರ ಗ್ರೇಸ್ ಕಾಲ್ಲಿಯರ್ ಜೊತೆ ಆರ್ ಜೆ ಗೆ ಕೂಡಾ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಟ್ವೀಟ್ ಗಳ ಸುರಿಮಳೆ, ಬ್ಲಾಗರ್ ಗಳ ಬೆಂಬಲ, ಫೇಸ್ ಬುಕ್ ಪುಟದ ತುಂಬಾ 'ಮಹಿಳೆಯರಿಗೆ ಎದೆಯಿದೆ' ಎಂಬ ಅಡಿ ಬರಹದ ಚಿತ್ರಗಳು ಹರಿದಾಡಿವೆ.. ನೀವು ಕಣ್ಣಾಡಿಸಿ..
|
@Liesseling
cleavage ತೋರ್ಪಡೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ.
|
news.com.au ಹೇಳಿಕೆ
ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಪ್ರಧಾನಿ ಬೆಂಬಲಿಸಿದ ಬಂದ ಸಂದೇಶಗಳನ್ನು ಪ್ರಧಾನ ಸುದ್ದಿ ಮಾಡಲಾಗಿದೆ.
|
@JointDestroyer
ವಿವಿಧ ರೀತಿಯಲ್ಲಿ cleavage ತೋರಿಸಲು ನಾನು ಸಿದ್ಧ

Destroy the Joint ಅಧಿಕೃತ ಹೇಳಿಕೆ
Destroy the Joint ಎಂಬ ಫೇಸ್ ಬುಕ್ ಪುಟದ ವಕ್ತಾರೆ ಮಿಸ್ ಜೆನ್ನಾ ಪ್ರೈಸ್ ಮಾತನಾಡಿ, ಪ್ರಧಾನಿ ಜೂಲಿಯಾ ಬಗ್ಗೆ ಮಿಸ್ ಗ್ರೇಸ್ ಕಾಲ್ಲಿಯರ್ ಈ ರೀತಿ ಹೇಳಿಕೆ ಕೊಟ್ಟು ತಾನೊಬ್ಬ 'ಈಡಿಯೆಟ್' ಎಂಬುದನ್ನು ಜಗತ್ತಿಗೆ ತಿಳಿಸಿದ್ದಾರೆ ಎಂದಿದ್ದಾರೆ.
|
@nazzer ಹೇಳಿಕೆ
ಸಂಸತ್ತಿಗೆ ಬೆತ್ತಲೇ ಹೋಗಬೇಕೇನು. ಪರಸ್ಪರ ಗೌರವ ನೀಡಿಕೆ ಬಗ್ಗೆ ಅಂಕಣಗಾರ್ತಿಗೆ ಗೊತ್ತಿಲ್ಲವೆ











Click it and Unblock the Notifications